ಕೊಲಂಬೋದಲ್ಲಿ ನಡೆದ ಉಗ್ರರ ದಾಳಿಯನ್ನು ವಿರೋಧಿಸಿ ಹಾಗೂ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಹಿಂದು ಜಾಗರಣಾ ವೇದಿಕೆ ವಿಟ್ಲ ತಾಲೂಕು ವತಿಯಿಂದ ಕಲ್ಲಡ್ಕದ ಶ್ರೀರಾಮ ಮಂದಿರದ ಬಳಿ ಜನಜಾಗೃತಿ ಸಭೆ ಗುರುವಾರ ಸಂಜೆ ನಡೆಯಿತು.
ರಾಷ್ಟ್ರ ಸೇವಿಕಾ ಸಮಿತಿ ಪ್ರಾಂತ ಪ್ರಮುಖರಾದ ಡಾ. ಕಮಲಾ ಪ್ರಭಾಕರ್ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾ ಭಾರತೀಯ ಪ್ರಾಂತ ಪ್ರಮುಖರಾದ ವಸಂತ ಮಾಧವ ನುಡಿನಮನ ಸಲ್ಲಿಸಿದರು.
ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಕಾರ್ಯದರ್ಶಿಗಳಾದ ರಾಧಾಕೃಷ್ಣ ಅಢ್ಯಂತಾಯ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾರೀರಿಕ ಪ್ರಮುಖರಾದ ಮಹಾಬಲ ಕಲ್ಲಡ್ಕ, ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ರತ್ನಾಕರ ಶೆಟ್ಟಿ ಕಲ್ಲಡ್ಕ, ಶ್ರೀರಾಮ ಮಂದಿರ ಕಲ್ಲಡ್ಕದ ಟ್ರಸ್ಟ್ ನ ಕಾರ್ಯದರ್ಶಿಗಳಾದ ನಾಗೇಶ ಕಲ್ಲಡ್ಕ, ಬಿಜೆಪಿ ನಾಯಕಿ ಸುಲೋಚನ ಭಟ್, ತಾಲೂಕು ಪಂಚಾಯತ್ ಸದಸ್ಯರಾದ ಲಕ್ಷ್ಮಿ ಗೋಪಾಲ್ ಆಚಾರ್ಯ, ಹಿಂದೂ ಜಾಗರಣ ವೇದಿಕೆಯ ತಾಲೂಕು ಅಧ್ಯಕ್ಷರಾದ ನರಸಿಂಹ ಶೆಟ್ಟಿ ಮಾಣಿ, ಕಾರ್ಯದರ್ಶಿಗಳಾದ ಮನೋಜ್ ಪೆರ್ನೆ, ರಾಜೇಶ ನಾಯಕ್ ಕರೋಪಾಡಿ, ರವಿ ಭಂಡಾರಿ, ಗೋಳ್ತಮಜಲು ಮಂಡಲ ಕಾರ್ಯವಾಹರಾದ ಸುಜಿತ್ ಕೊಟ್ಟಾರಿ, ಹಾಗೂ ಪರಿವಾರ ಸಂಘಟನೆಗಳ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
IFTAAR ORGANISED BY FORMER MINISTER RAMANATHA RAI AT PANEMANGALORE (more…)