ಮತಗಟ್ಟೆಗೆ ತೆರಳುವುದರಲ್ಲಿ ಹಿಂದೆ ಬೀಳದ ಬಂಟ್ವಾಳ

ಲೋಕಸಭೆಯ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಳೆದ ವರ್ಷ ವಿಧಾನಸಭೆ ಚುನಾವಣೆಯಲ್ಲಿ ಸದ್ದು ಮಾಡಿದ್ದ ಬಂಟ್ವಾಳ ಕ್ಷೇತ್ರದಲ್ಲಿ ಈ ಬಾರಿ ಉತ್ತಮ ಮತ ಚಲಾವಣೆಯಾಗಿದೆ. ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿದರೆ, ಇದು ಜಾಸ್ತಿ. ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಕಡಿಮೆ. ಆದರೂ ಒಟ್ಟಾರೆಯಾಗಿ ಮತ ಚಲಾವಣೆಯಲ್ಲಿ ಬಂಟ್ವಾಳಕ್ಕೆ ಡಿಸ್ಟಿಂಕ್ಷನ್.

ಜಾಹೀರಾತು

ಹೀಗಾಗಿ ದಕ್ಷಿಣ ಕನ್ನಡ ಲೋಕಸಭೆ ಚುನಾವಣೆಯ ಫಲಿತಾಂಶಕ್ಕೆ ವಾರಗಳು ಬಾಕಿ ಇದ್ದರೂ ಬಂಟ್ವಾಳ ಕ್ಷೇತ್ರದ ಮತದಾರರಿಗೆ ಮತಗಟ್ಟೆಗೆ ಹೋಗುವುದರಲ್ಲಿ ನಾವು ಹಿಂದೆ ಬಿದ್ದಿಲ್ಲ ಎಂಬ ಸಂತಸಲ್ಲಿದ್ದರೆ, ರಾಜಕೀಯ ಪಕ್ಷಗಳು ಮತದಾನದ ಆಧಾರದಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಮಾಡುತ್ತಿವೆ. ಕಾರಣ ಇಲ್ಲಿನ 249 ಮತಗಟ್ಟೆಗಳಲ್ಲಿ ಶೇ.80ಕ್ಕಿಂತ ಜಾಸ್ತಿ ಮತದಾನ 136 ಬೂತ್ ಗಳಲ್ಲಿ ಆಗಿದೆ.

ಒಟ್ಟು 109351 ಪುರುಷರ ಪೈಕಿ 87,051 ಮತ ಚಲಾಯಿಸಿದ್ದರೆ, 1,12,810 ಮಹಿಳೆಯರ ಪೈಕಿ 91,226 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. 5 ಮಂದಿ ಇತರರು ಇಲ್ಲಿದ್ದಾರಾದರು ಅವರ್ಯಾರೂ ತಮ್ಮ ಹಕ್ಕು ಚಲಾಯಿಸಿಲ್ಲ. ಒಟ್ಟಾರೆಯಾಗಿ 2,22,166 ಮತಗಳು ಕ್ಷೇತ್ರದಲ್ಲಿದ್ದು, ಅವರ ಪೈಕಿ 1,78,277 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಒಟ್ಟಾರೆಯಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.80.24 ಮತ ಚಲಾವಣೆಯಾಗಿದ್ದು, ವಿವಿಧ ಲಾಭ ನಷ್ಟಗಳ ಲೆಕ್ಕಾಚಾರಗಳನ್ನು ರಾಜಕೀಯ ಪಂಡಿತರು ಮಾಡುತ್ತಿದ್ದಾರೆ.

2014ರ ಚುನಾವಣೆ:

ಜಾಹೀರಾತು

2014ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 2,01,433 ಮತದಾರರು ಬಂಟ್ವಾಳ ಕ್ಷೇತ್ರದಲ್ಲಿದ್ದರು. ಅವರ ಪೈಕಿ 100589 ಪುರುಷರು, 100844 ಮಹಿಳೆಯರು. ಆ ಚುನಾವಣೆಗೆ ಚಲಾವಣೆಯಾದ ಮತಗಳು: 1,62,199. ಇವರಲ್ಲಿ 80114 ಪುರುಷರು, 82085 ಮಹಿಳೆಯರು.

ಕಳೆದ ಬಾರಿಗಿಂತ ಎಷ್ಟು ಜಾಸ್ತಿ:

ಕಳೆದ ಲೋಕಸಭಾ ಚುನಾವಣೆಯಲ್ಲಿ 1,62,199 ಮತಗಳು ಚಲಾವಣೆ ಆಗಿದ್ದರೆ, ಈ ಬಾರಿ 1,78,277 ಮತಗಳು ಇವಿಎಂನೊಳಗೆ ಭದ್ರವಾಗಿವೆ. ಅಂದರೆ ಬಂಟ್ವಾಳ ಕ್ಷೇತ್ರದಲ್ಲಿ ಈ ಬಾರಿ 16,078 ಮತಗಳು ಚಲಾವಣೆ ಆಗಿವೆ.

ಜಾಹೀರಾತು

ವಿಧಾನಸಭೆಯಲ್ಲಿ ಎಷ್ಟಿತ್ತು?

2018ರ ವಿಧಾನಸಭೆ ಚುನಾವಣೆ ಸಂದರ್ಭ 2,16,057 ಮತಗಳು ಕ್ಷೇತ್ರದಲ್ಲಿದ್ದವು. ಅವುಗಳ ಪೈಕಿ 1,82,555 ಮತಗಳು ಚಲಾವಣೆ ಆಗಿದ್ದವು. ಹಾಗೆ ನೋಡಿದರೆ, ಕಳೆದ ವಿಧಾನಸಭೆ ಚುನಾವಣೆಗೆ ಚಲಾವಣೆಯಾದ ಮತಗಳಿಗಿಂತ ಈ ಬಾರಿ ಲೋಕಸಭೆಗೆ ಕಡಿಮೆ ಮತಗಳು ಬಿದ್ದಿವೆ. ಸ್ವಾರಸ್ಯಕರ ಅಂಶವೆಂದರೆ, ಈ ಬಾರಿ 6,109 ಮತಗಳು ಒಂದು ವರ್ಷದಲ್ಲಿ ಹೆಚ್ಚಳವಾಗಿದ್ದರೂ ಕಳೆದ ಬಾರಿ ಚಲಾವಣೆಯಾದುದಕ್ಕಿಂತ 4,278 ಮತಗಳು ಕಡಿಮೆಯಾಗಿವೆ.

ಬಂಟ್ವಾಳ ಕ್ಷೇತ್ರದ ಬೂತ್ ನಂಬ್ರ 96 ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಾವಿನಕಟ್ಟೆ (ಪೂರ್ವಭಾಗ)ದ ಬೂತ್ ನಲ್ಲಿ ಶೇ.89.84 ಮತಗಳು ಚಲಾವಣೆಯಾಗಿದ್ದು, ಇದು ಗರಿಷ್ಠ ಎಂದು ದಾಖಲಾಗಿದೆ. 390 ಪುರುಷರು, 407 ಮಹಿಳೆಯರು ಸೇರಿ 797 ಮತಗಳು ಇರುವ ಈ ಬೂತ್ ನಲ್ಲಿ 334 ಪುರುಷರು, 382 ಮಹಿಳೆಯರು ಸೇರಿ 716 ಮಂದಿ ಮತ ಚಲಾಯಿಸಿದ್ದಾರೆ. ಬೂತ್ ನಂಬ್ರ 190 ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ನಗ್ರಿ ಸಜಿಪಮೂಡದಲ್ಲಿ 744 ಮತಗಳಿದ್ದು, 491 ಚಲಾವಣೆಯಾಗಿವೆ. ಇದು ಕ್ಷೇತ್ರದಲ್ಲಿ ಕನಿಷ್ಠ 65.99 ಮತ ಚಲಾವಣೆಯಾದ ಬೂತ್. ಲೊರೆಟ್ಟೋದ ಸಖಿ ಮತಗಟ್ಟೆಯಲ್ಲಿ ಶೇ.76.73 ಮತ ಚಲಾವಣೆಯಾಗಿದೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ