Categories: ಸಿನಿಮಾ

TOLET – ಇದು ಬಾಡಿಗೆಗೆ ಮನೆ ಹುಡುಕುವವರ ಕತೆ

ಇದು ಟು ಲೆಟ್ ಎಂಬ ಟೈಟಲ್ ಹೊಂದಿರುವ ಸಿನಿಮಾ. ಭಾಷೆ – ತಮಿಳು. ಮನೆ ಇಲ್ಲ, ಬಾಡಿಗೆ ಮನೆಯೇ ಎಲ್ಲ ಎಂದು ಹೊರಟವರು ಅನುಭವಿಸುವ ಕಷ್ಟಗಳ ಕುರಿತು ಕತೆ ಹೇಳುತ್ತದೆ. ರಾ ಚೆಝಿಯನ್ ನಿರ್ದೇಶನ, ಸಂತೋಷ್ ಶ್ರೀರಾಮ್, ಶೀಲಾ ರಾಜ್ ಕುಮಾರ್, ದರುಣ್ ಮೊದಲಾದವರ ಅಭಿನಯ.

ಜಾಹೀರಾತು

ಮಹಾನಗರಗಳಲ್ಲಿ ಬಾಡಿಗೆ ಮನೇಲಿರುವವರ ಪಾಡು ಬಹುತೇಕ ವಲಸೆ ಬಂದ ನಮ್ಮ ನಿಮ್ಮಂತಹವರಿಗೆ ತಿಳಿದದ್ದೇ! ಬ್ಯಾಚುಲರ್ ಆಗಿದ್ದಾಗ,ಕಾಲೇಜಿಗೆ ಹೋಗುತ್ತಿದ್ದಾಗ ,ಮದುವೆ ಆಗಿ ಸಂಸಾರವಂದಿಗ ಆದ ಬಳಿಕ ಒಂದೊಂದು ಹಂತದ ಬಾಡಿಗೆದಾರರ ಅನುಭವ ಒಂದೊಂದು ತರಹ.ಇಂತಹ ಒಂದು ಕುಟುಂಬದ ಪಾಡು ನೈಜವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ.

ಕರೆಂಟು ಹೋದಾಗ ಮಗ  ‘ಅಪ್ಪ,ನೀನು ಕತ್ತಲಿಗೆ ಹೆದರ್ತೀಯಾ?’ ‘ಇಲ್ಲ’  ‘ಹಾಗಾದ್ರೆ ನೀನು ಹೆದರುವುದು ಅಮ್ಮನಿಗೆ ಮಾತ್ರವಾ?’ ಎಂಬಂತಹ ಸಂಭಾಷಣೆಗಳು, ದುಡ್ಡು ಹೊಂದಿಸಲು ಡೈರಿಯ ಎಡೆಯಲ್ಲಿಟ್ಟ ನೋಟುಗಳ ಹುಡುಕಿ ಹುಡುಕಿ ಎಣಿಸುವ ಚಿತ್ರಣಗಳು..ಹೀಗೆ ಚಿಕ್ಕ ಚಿಕ್ಕ ಪರಿಣಾಮಕಾರಿ ದೃಶ್ಯಗಳ ಮೂಲಕ ಸಿನಿಮಾ ನಮ್ಮನ್ನು ಆವರಿಸಿಬಿಡುತ್ತದೆ. Amazon prime ನಲ್ಲಿ ಬಂದಿದೆ. ನೋಡಿ. ಖುಷಿಪಡುವ ಸಿನಿಮಾ ಅಲ್ಲ ಇದು. ಆದರೆ ಗಾಢವಾದ ಸಿನಿಮಾ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ