ದೇಶ ಸದೃಢಗೊಳಿಸಲು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿಯಾಗಲು ಶ್ರಮಿಸಬೇಕಾಗಿದೆ ಎಂದು ಬಂಟ್ವಾಳ ತಾಪಂ ಮಾಜಿ ಉಪಾಧ್ಯಕ್ಷ, ಬಿಜೆಪಿ ನಾಯಕ ದಿನೇಶ್ ಅಮ್ಟೂರು ಹೇಳಿದರು.
ಕೋಡಪದವು , ಕಡಂಬು, ಕುಕ್ಕಿಲ, ಮದಕ ಪ್ರದೇಶಗಳಲ್ಲಿ ಮತಯಾಚನೆ ನಡೆಸಿದ ಸಂದರ್ಭ ಮನವಿ ಮಾಡಿದ ಅವರು, ಕಳೆದ ಐದು ವರ್ಷಗಳ ಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಎತ್ತರಕ್ಕೆ ಏರಿಸಿದ ನರೇಂದ್ರ ಮೋದಿ ಸರಕಾರ ಮತ್ತೋಮ್ಮೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಕಳೆದ ಹಲವಾರು ವರ್ಷಗಳಿಂದ ಕಡೆಗಣಿಸಲ್ಪಡುತ್ತಿದ್ದ ದಲಿತ ಸಮುದಾಯಕ್ಕೆ ವಿಶೇಷ ಮನ್ನಣೆ ನೀಡಿ ಡಾ.ಅಂಬೇಡ್ಕರ್ ಅವರಿಗೆ ಗೌರವ ತಂದುಕೊಟ್ಟವರು ಮೋದಿಯವರು, ಭಾರತ ವಿಶ್ಬಗುರುವಾಗಲು ಪ್ರಧಾನಿ ನರೇಂದ್ರ ಮೋದಿ ಮತ್ತೆಅಧಿಕಾರಕ್ಕೆ ಬರಬೇಕಾಗಿದೆ ಎಂದು ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಪರವಾಗಿ ಮತಯಾಚನೆ ಮಾಡಿದರು.
ಮಾಣಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ರೈ, ವಿಟ್ಲ ಪಡ್ನೂರು ಬಿಜೆಪಿ ಅದ್ಯಕ್ಷ ಸತೀಶ್ ಭಟ್ ಪಂಜಿಗದ್ದೆ, ವಿಟ್ಲ ಪಡ್ನೂರು ಗ್ರಾ.ಪಂ.ಅಧ್ಯಕ್ಷ ರವೀಶ್ ಶೆಟ್ಟಿ, ಪ್ರಮುಖರಾದ ಕ್ರಷ್ಣ ಕಿರಣ್ ಭಟ್, ನಾಗೇಶ್ ಶೆಟ್ಟಿ, ಮುರಳೀಕ್ರಷ್ಣ ಭಟ್, ನಾರಾಯಣ ಪೂಜಾರಿ, ನಾಗೇಶ್ ಗೌಡ ಬನ, ಜಯಕೊಟ್ಟಾರಿ, ಚೇತನ್ ಕಡಂಬು, ಪುನೀತ್ ಕಡಂಬು, ಹಾಗೂ ಚೇತನ್ ಹಾಜರಿದ್ದರು.
ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾಯರ ಸ್ಮೃತಿ ಕೃತಿ – ಕಲಾಶ್ರೀಧರ ಪುಸ್ತಕ ವಿಮರ್ಶೆ (more…)