Categories: ಬಂಟ್ವಾಳ

ಬಂಟ್ವಾಳದಲ್ಲಿ ಜಿಎಸ್‌ಬಿ ಕ್ರಿಕೆಟ್, ಫುಡ್ ಫೆಸ್ಟಿವಲ್

ಬಂಟ್ವಾಳ: ಬಂಟ್ವಾಳ ಎಸ್.ವಿ.ಎಸ್. ಹೈಸ್ಕೂಲು ಮೈದಾನದಲ್ಲಿ ಜೈಹಿಂದ್ ಕ್ರಿಕೆಟರ್‍ಸ್ ಬಂಟ್ವಾಳ ವತಿಯಿಂದ ಆಹ್ವಾನಿತ ತಂಡಗಳ ಬಿಪಿಎಲ್ ೨೦೧೯ ಕ್ರಿಕೆಟ್ ಪಂದ್ಯಾಟ ಮತ್ತು ಜಿ ಎಸ್ ಬಿ ಫುಡ್ ಫೆಸ್ಟಿವಲ್ ಏಪ್ರಿಲ್ 6 ಮತ್ತು 7ರಂದು ನಡೆಯಲಿದೆ.

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಜಾಹೀರಾತು


ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜೈಹಿಂದ್ ಕ್ರಿಕೆಟರ್‍ಸ್ ಪ್ರಧಾನ ಕಾರ್ಯದರ್ಶಿ ಗಿರೀಶ್ ಪೈ, ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ನಡೆಯಲಿದ್ದು, ಇದು ಜಿಎಸ್‌ಬಿ ಬಾಂಧವರಿಗೆ ಒಳಪಟ್ಟ ಪಂದ್ಯಾಟ ಎಂದರು. ಮಾಣೂರು ಲಕ್ಷ್ಮಣ ಕಾಮತ್ ಸ್ಮರಣಾರ್ಥ ನಡೆಯುವ ಈ ಕೂಟದಲ್ಲಿ 6 ತಂಡಗಳು ಹೊನಲು ಬೆಳಕಿನಲ್ಲಿ ಸೆಣಸಲಿದ್ದು, ಮೊದಲ ಬಹುಮಾನವಾಗಿ ೩೦,೫೦೧, ಎರಡನೇ ಬಹುಮಾನವಾಗಿ ೨೦,೫೦೧ ರೂ ಮತ್ತು ಫಲಕಗಳನ್ನು ನೀಡಲಾಗುವುದು.

ಉದ್ಘಾಟನಾ ಪಂದ್ಯಾಟವಾಗಿ ಗುರುಪುರ ಗ್ಲೇಡಿಯೇಟರ್‍ಸ್ ಮತ್ತು ಪಾಣೆಮಂಗಳೂರು ರೈಡರ್‍ಸ್ ತಂಡದ ಮಹಿಳಾ ಕ್ರೀಡಾಳುಗಳ ನಡುವೆ ಪಂದ್ಯಾಟ ನಡೆಯುವುದು. ೬ರಂದು ಸಂಜೆ ಉದ್ಘಾಟನಾ ಸಮಾರಂಭ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಪುರುಷೋತ್ತಮ ಶೆಣೈ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಎಸ್.ವಿ.ಎಸ್.ದೇವಳ ವಿದ್ಯಾಸಂಸ್ಥೆಗಳ ಸಂಚಾಲಕ ಗೋವಿಂದ ಪ್ರಭು ಸಹಿತ ಗಣ್ಯರು ಪಾಲ್ಗೊಳ್ಳುವರು. ಫುಡ್ ಫೆಸ್ಟಿವಲ್ ನಲ್ಲಿ ಸಸ್ಯಾಹಾರಿ ವಿಶೇಷ ಖಾದ್ಯಗಳು ಇರಲಿದ್ದು, ಸುಮಾರು 1 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇರುವುದಾಗಿ ಅವರು ವಿವರಿಸಿದರು. ಈ ಸಂದರ್ಭ ಜೈಹಿಂದ್ ಕ್ರಿಕೆಟರ್‍ಸ್ ಅಧ್ಯಕ್ಷ ಅರ್ಜುನ್ ಭಂಡಾರ್‌ಕಾರ್, ಪ್ರಮುಖ ಆಯೋಜಕರಾದ ಪಾಂಡುರಂಗ ಶೆಣೈ ಉಪಸ್ಥಿತರಿದ್ದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.