ದ.ಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಹಾಗೂ ಜಾತ್ಯತೀತ ಜನತಾದಳದ ಬೆಂಬಲಿತ ಅಭ್ಯರ್ಥಿ ಮಿಥುನ್ ರೈ ಗುರುವಾರ ಸಂಜೆ 4 ರಿಂದ ರಾತ್ರಿ ತನಕ ಬಂಟ್ವಾಳ ಕ್ಷೇತ್ರದ ಹಲವೆಡೆ ಬಹಿರಂಗ ಸಭೆಯಲ್ಲಿ ಪಾಲ್ಗೋಳ್ಳಲಿದ್ದಾರೆ.
ಅಭ್ಯರ್ಥಿಯಾದ ಮಿಥುನ್ ರೈ, ಮಾಜಿ ಸಚಿವರಾದ ಬಿ ರಮಾನಾಥ ರೈ, ಪ್ರಮುಖ ಭಾಷಣಕಾರರಾಗಿ ಕಾಂಗ್ರೆಸ್ ಪಕ್ಷದ ವಕ್ತಾರ ಸುಧೀರ್ ಕುಮಾರ್ ಮರೋಳ್ಳಿ, ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ವಿಧಾನಸಭಾ ಸದಸ್ಯರಾದ ಕೆ ಹರೀಶ್ ಕುಮಾರ್ ಹಾಗೂ ಇನ್ನಿತರ ರಾಜ್ಯ–ಜಿಲ್ಲಾ ಮಟ್ಟದ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಮುಖ ನಾಯಕರುಗಳು ಈ ಬಹಿರಂಗ ಸಭೆಯಲ್ಲಿ ಪಾಲ್ಗೋಳ್ಳಲಿದ್ದಾರೆ ಎಂದು ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್ ಮತ್ತು ಸುದೀಪ್ ಕುಮಾರ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಜೆ 4.30 ಕ್ಕೆ ವಾಮದಪದವು ಜಂಕ್ಷನ್, 5.30 ಕ್ಕೆ ಉಳಿ ಕಕ್ಯಪದವು ಗರಡಿ ಬಳಿ ಮೈದಾನ, 6 ಗಂಟೆಗೆ ಬಡಕಬೈಲ್, 7 ಗಂಟೆಗೆ ಮೇಲ್ಕಾರ್ ಜಂಕ್ಷನ್, 8 ಗಂಟೆಗೆ ಮಾಣಿ ಜಂಕ್ಷನ್ ನಲ್ಲಿ ಬಹಿರಂಗ ಸಭೆ ಇರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.