ಬಿಜೆಪಿಯಿಂದ ಕೇಂದ್ರದಿಂದಲೂ, ಇಲ್ಲಿನ ಸಂಸದರಿಂದಲೂ ಜನರಿಗೆ ಅನುಕೂಲವಾಗುವಂತಹ ಯಾವುದೇ ಕಾರ್ಯಕ್ರಮಗಳು ಜಾರಿಯಾಗಿಲ್ಲ ಎಂದು ಹೇಳಿರುವ ಕೆಪಿಸಿಸಿ ಕಾರ್ಯದರ್ಶಿ ಎಂ ಅಶ್ವನಿ ಕುಮಾರ್ ರೈ, ಈ ಬಾರಿ ಯುವ ನಾಯಕರೊಬ್ಬರನ್ನು ಕಣಕ್ಕಿಳಿಸಿದ್ದು, ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ.
ಸೋಮವಾರ ಬಿ ಸಿ ರೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಲ ಕಾಲಕ್ಕೆ ಪಂಚಿಂಗ್ ಡೈಲಾಗ್ ನೀಡಿ ಜನರನ್ನು ನಂಬುವಂತೆ ಮಾಡಿದ್ದೇ ಮೋದಿ ಸರಕಾರಿ ದೊಡ್ಡ ಸಾಧನೆ ಎಂದರು.
ಜಿಲ್ಲೆಗೆ ಸಂಬಂಧಪಟ್ಟಂತೆ ಕಳೆದ ಹತ್ತು ವರ್ಷಗಳಲ್ಲಿ ನಳಿನ್ ಕುಮಾರ್ ಸಾಧನೆ ಶೂನ್ಯ. ಈ ನಿಟ್ಟಿನಲ್ಲಿ ಯುವ ಹಾಗೂ ಉತ್ಸಾಹಿ ಕಾರ್ಯಕರ್ತನಿಗೆ ಕಾಂಗ್ರೆಸ್ ಈ ಬಾರಿ ಅವಕಾಶ ನೀಡಿದ್ದು, ಇಂತಹ ಉತ್ಸಾಹಿ ಯುವ ನಾಯಕರನ್ನು ಲೋಕಸಭೆಗೆ ಕಳುಹಿಸಬೇಕಾಗಿದೆ ಎಂದು ಕರೆ ನೀಡಿದರು.
ಈ ಸಂದರ್ಭ ಪಕ್ಷ ಪ್ರಮುಖರಾದ ಸದಾಶಿವ ಬಂಗೇರ, ನೋಣಯ್ಯ ಪೂಜಾರಿ, ಜಯರಾಂ ಸಾಮಾನಿ ತುಂಬೆ, ಶರೀಫ್ ಶಾಂತಿಅಂಗಡಿ, ಉಮ್ಮರ್ ಮಂಚಿ, ಸ್ಟೀವನ್, ಇಕ್ಬಾಲ್, ಬಾಲಚಂದ್ರ ಶೆಟ್ಟಿ, ಗೋಪಾಲಕೃಷ್ಣ ಸುವರ್ಣ, ಡಿ ಕೆ ಹಂಝ, ಕರೀಂ ಬೊಳ್ಳಾಯಿ ಮೊದಲಾದವರು ಜೊತೆಗಿದ್ದರು.