Categories: ಬಂಟ್ವಾಳ

ಸುಗಮ ಸಂಚಾರಕ್ಕಾಗಿ ರಸ್ತೆ ಸಂಚಾರ ಮಾರ್ಪಾಡು: ಎಎಸ್ಪಿ

ಬಂಟ್ವಾಳ: ಬಿ.ಸಿ ರೋಡ್ ಜಂಕ್ಷನ್‌ನಲ್ಲಿರುವ ಸರ್ವಿಸ್ ರಸ್ತೆಯಲ್ಲಿ ಸುಗಮ ಸಂಚಾರಕ್ಕಾಗಿ ಇತ್ತೀಚೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಎಎಸ್ಪಿ ಸೈದುಲು ಅದಾವತ್ ಹೇಳಿದ್ದಾರೆ.

www.bantwalnews.com Editor: Harish Mambady

ಜಾಹೀರಾತು

ಇದಕ್ಕೆ ಅವರು ನೀಡುವ ಕಾರಣಗಳು ಇವು.


ಸರ್ವಿಸ್ ರಸ್ತೆಯಲ್ಲಿ ಪ್ರಸ್ತುತ ಬಸ್‌ಗಳು ನಿಲ್ಲಿಸುತ್ತಿರುವ ಸ್ಥಳದಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಕೇವಲ ಅಂದಾಜು 100-150 ಮೀಟರ್ ದೂರ ಇರುತ್ತದೆ. ಇಲ್ಲಿ ಯಾವುದೇ ಅಧಿಕೃತ ತಂಗುದಾಣಗಳು ಇರುವುದಿಲ್ಲ. ಬಿ.ಸಿ. ರೋಡ್ ಜಂಕ್ಷನ್‌ನ ಫ್ಲೈ ಓವರ್ ಕೆಳಗಡೆ ತರಕಾರಿ ಮಾರಾಟಗಾರರು ವ್ಯಾಪಾರ ಮಾಡುತ್ತಿರುವುದರಿಂದ ಜನರು ರಸ್ತೆಯಲ್ಲಿಯೇ ನಿಂತು ವ್ಯಾಪಾರ ಮಾಡುತಿದ್ದು, ಇಲ್ಲಿಗೆ ಬಂಟ್ವಾಳ ಪೇಟೆ, ಕೈಕುಂಜೆ ಕಡೆಯಿಂದ ಜನರು ಬಂದು ಸೇರುವುದರಿಂದ ಹಾಗೂ ಖಾಸಗಿ ಬಸ್ ನಿಲ್ದಾಣಕ್ಕೆ ತೆರಳುವ ಬಸ್‌ಗಳು ಇದೇ ಸ್ಥಳದಲ್ಲಿ ಸಂಚರಿಸುವದರಿಂದ ವಾಹನ ದಟ್ಟಣೆ ಹಾಗೂ ಜನಜಂಗುಳಿ ಉಂಟಾಗುತ್ತಿದ್ದು, ಇದೇ ಸ್ಥಳದಲ್ಲಿ ಬಸ್‌ಗಳನ್ನು ನಿಲ್ಲಿಸಿದ ಜನರನ್ನು ಹತ್ತಿಸಿ ಇಳಿಸುವುದನ್ನು ಮಾಡುವುದರಿಂದ ಅಪಘಾತ ಘಟನೆಗಳು ನಡೆದು ಕಾನೂನು ಸುವ್ಯವಸ್ಥೆಗೂ ತೊಂದರೆಯಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಸರ್ವಿಸ್ ರಸ್ತೆಯ ಅಗಲವು ಕೇವಲ 17 ರಿಂದ 22 ಅಡಿ ಅಗಲವಿದ್ದು, ಇದರಿಂದ ಒಂದು ಬಸ್ ಬಂದು ನಿಲುಗಡೆ ಮಾಡಿದಲ್ಲಿ ಅದರ ಹಿಂದೆ ಹಲವಾರು ವಾಹನಗಳು ಬಂದು ನಿಲ್ಲುವುದರಿಂದ ನಿರಂತರವಾಗಿ ವಾಹನ ಸಂಚಾರಕ್ಕೆ ತಡೆ ಉಂಟಾಗಿ ತೊಂದರೆ ಅನುಭವಿಸುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿರುತ್ತಾರೆ ಎಂದು ಅವರು ಹೇಳಿದ್ದಾರೆ.
ಸರ್ವಿಸ್ ರಸ್ತೆಯ ಪ್ರಸ್ತುತ ಬಸ್ ನಿಲುಗಡೆ ಮಾಡುತ್ತಿರುವ ಸ್ಥಳದಲ್ಲಿ ಪಿಎಸ್‌ಐ ಬಂಟ್ವಾಳ ಸಂಚಾರ ಠಾಣೆ ರವರು ಅಧ್ಯಯನ ನಡೆಸಿದ್ದು, ಬಂಟ್ವಾಳ ಎಎಸ್‌ಪಿ ರವರು ಖುದ್ದಾಗಿ ಈ ಸಮಸ್ಯೆಯನ್ನು ಮನಗಂಡು ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಠಿ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಪರ್ಯಾಯ ವ್ಯವಸ್ಥೆಯನ್ನು ಮಾಡಿದ್ದು, ಸಾರ್ವಜನಿಕರು ಈ ವ್ಯವಸ್ಥೆಗೆ ಸಹಕಾರವನ್ನು ನೀಡಬೇಕಾಗಿ ವಿನಂತಿಸಿಕೊಂಡಿದ್ದಾರೆ.

ಆಟೊ ಚಾಲಕರೊಂದಿಗೆ ಮಾತುಕತೆ:
ಪರ್ಯಾಯ ವ್ಯವಸ್ಥೆಗೆ ಕೆಲವು ಅಟೋ ಚಾಲಕರು ವಿರೋಧ ವ್ಯಕ್ತಪಡಿಸಿರುತ್ತಾರೆ. ಅಟೋ ಚಾಲಕರೊಂದಿಗೆ ಮಾತುಕತೆ ನಡೆಸಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಪ್ರತ್ಯೇಕ ಅಟೋ ರಿಕ್ಷಾ ಪಾರ್ಕಿಂಗ್ ಮಾಡಲು ಕ್ರಮಕೈಗೊಳ್ಳುವುದಾಗಿ ತಿಳಿಸಲಾಗಿದೆ. ಈ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಸ್ಥಳೀಯ ಪುರಸಭೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಅಟೋ ಚಾಲಕರಿಗೆ ಆಗುತ್ತಿರುವ ಅನಾನುಕೂಲತೆ ನಿವಾರಿಸಲು ಶೀಘ್ರವಾಗಿ ಪರಿಹಾರ ಕಂಡುಕೊಳ್ಳಲಾಗುವುದು ಎಂದವರು ಮಾಹಿತಿ ನೀಡಿದ್ದಾರೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.