ಪೊಳಲಿಯಮ್ಮನ ವೈಭವ ನೋಡಲು ಭಕ್ತರ ಸಾಲು ಸಾಲು

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಜಾಹೀರಾತು

ಅತ್ಯಂತ ವೈಭವ ಮತ್ತು ಅಚ್ಚುಕಟ್ಟಾಗಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳನ್ನು ನಡೆಸಿದ ಸಂತೃಪ್ತಿ ಹಾಗೂ ಧನ್ಯತಾಭಾವವನ್ನು ಪೊಳಲಿಯ ಸ್ವಯಂಸೇವಕರು ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯರು ಹೊಂದಿದ್ದಾರೆ. ಬುಧವಾರ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮ ಬೆಳಗ್ಗೆ 7.40ರಿಂದ 8.10ರ ಮಧ್ಯೆ ಇರುವ ಮೀನ ಲಗ್ನ ಸುಮುಹೂರ್ತದಲ್ಲಿ ನೆರವೇರಿತು. ಬಳಿಕ ಮಹಾಪೂಜೆ, ಪಲ್ಲಪೂಜೆ, ಮಧ್ಯಾಹ್ನ ಲಕ್ಷಾಂತರ ಜನರಿಗೆ ಅನ್ನಸಂತರ್ಪಣೆ ನಡೆದವು.

ಮಾರ್ಚ್ 4ರಿಂದ ಮೊದಲ್ಗೊಂಡು 13ರವರೆಗೆ ಪ್ರತಿದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ನೆರವೇರಿವೆ. ಬ್ರಹ್ಮಕಲಶೋತ್ಸವ ಸಮಿತಿಯಲ್ಲಿರುವ ಅಧ್ಯಕ್ಷ ಉಳಿಪ್ಪಾಡಿಗುತ್ತು ರಾಜೇಶ್ ನಾಯ್ಕ್, ಗೌರವಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ, ಬಿ.ರಮಾನಾಥ ರೈ, ಬಿ.ನಾಗರಾಜ ಶೆಟ್ಟಿ, ಉಪಾಧ್ಯಕ್ಷರಾದ ಚೇರ ಸೂರ್ಯನಾರಾಯಣ ರಾವ್, ವಿವೇಕ ಚೈತ್ಯಾನಂದ ಸ್ವಾಮೀಜಿ, ರಾಮಚಂದ್ರ ಶೆಟ್ಟಿ ಕೊಡ್ಮಣ್ ಗುತ್ತು, ಕೃಷ್ಣ ಕುಮಾರ್ ಪೂಂಜ ಅಮ್ಮುಂಜೆಗುತ್ತು, ಸುಭಾಶ್ಚಂದ್ರ ನಾಯ್ಕ್ ಉಳಿಪ್ಪಾಡಿಗುತ್ತು, ಸುಬ್ಬಯ್ಯ ಮಾರ್ಲ ಉಳಿಪ್ಪಾಡಿಗುತ್ತು, ಚಿತ್ತರಂಜನ್ ರೈ ಪಡು, ಜೀವರಾಜ ಶೆಟ್ಟಿ ಅಮ್ಮುಂಜೆಗುತ್ತು, ಯತಿರಾಜ ಶೆಟ್ಟಿ ನಿಟ್ಟೆಗುತ್ತು, ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಚಂದ್ರಪ್ರಕಾಶ್ ತುಂಬೆ, ಮಂಜುನಾಥ ಭಂಡಾರಿ ಮೂಡುಶೆಡ್ಡೆ, ವಿನೋದ್ ನಾಯ್ಕ್ ಅಮ್ಮುಂಜೆಗುತ್ತು, ಪದ್ಮನಾಭ ಪಯ್ಯಡೆ, ರಘುನಾಥ ಸೋಮಯಾಜಿ, ಗಣೇಶ್ ಶೆಟ್ಟಿ ಪರಾರಿ, ವೆಂಕಟೇಶ ನಾವಡ ಪೊಳಲಿ, ಗಿರಿಧರ ಶೆಟ್ಟಿ, ಸದಾನಂದ ರೈ ಪೊಳಲಿ, ಮುರಳೀಧರ ಶೆಟ್ಟಿ ನಂದಬೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ತಾರಾನಾಥ ಆಳ್ವ ಉಳಿಪ್ಪಾಡಿಗುತ್ತು, ಜತೆ ಕಾರ್ಯದರ್ಶಿಯಾದ ಕೃಷ್ಣರಾಜ ಮಾರ್ಲ ಮುತ್ತೂರು, ಕೋಶಾಧಿಕಾರಿ ಪ್ರವೀಣ್ ಮತ್ತು ಸಂಚಾಲಕರಾದ ಚಂದ್ರಹಾಸ ಡಿ. ಶೆಟ್ಟಿ ರಂಗೋಲಿ ಅಹರ್ನಿಶಿಯೆಂಬಂತೆ ಪೊಳಲಿಯಮ್ಮನ ಸನ್ನಿಧಿಯಲ್ಲಿ ಕಾರ್ಯಕ್ರಮಗಳನ್ನು ಸಂಯೋಜಿಸಿದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಿ.ರಮಾನಾಥ ರೈ, ಉಪಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರಧಾನ ಕಾರ್ಯದರ್ಶಿ ಉಳಿಪ್ಪಾಡಿಗುತ್ತು ತಾರಾನಾಥ ಆಳ್ವ, ಸದಸ್ಯರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಕೃಷ್ಣರಾಜ ಮಾರ್ಲ ಮುತ್ತೂರು, ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಜೀವರಾಜ ಶೆಟ್ಟಿ ಅಮ್ಮುಂಜೆಗುತ್ತು, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಅರುಣ್ ಆಳ್ವ ಉಳಿಪ್ಪಾಡಿಗುತ್ತು, ರಘುನಾಥ ಸೋಮಯಾಜಿ ಎರ್ಕಳ, ಚಿತ್ತರಂಜನ ರೈ ಪಡು, ಡಿ.ಚಂದ್ರಶೇಖರ ಭಂಡಾರಿ, ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಚೇರ ಸೂರ್ಯನಾರಾಯಣ ರಾವ್, ಪಿ.ಮಾಧವ ಭಟ್, ಟಿ.ಸುಬ್ರಾಯ ಕಾರಂತ ಮತ್ತು ಕೋಶಾಧಿಕಾರಿ ಪ್ರವೀಣ್ ಸಕ್ರಿಯವಾಗಿ ಪಾಲ್ಗೊಂಡರು.

ಟೀಂ ವರ್ಕ್:

ಬ್ರಹ್ಮಕಲಶೋತ್ಸವ ಅದ್ಭುತ ಯಶಸ್ವಿಗೆ ಶ್ರೀಪೊಳಲಿ ರಾಜರಾಜೇಶ್ವರಿ ದೇವಿಯ ಕೃಪೆಯೇ ಕಾರಣ ಎನ್ನುತ್ತಾರೆ ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗೆ ರಚಿಸಲಾದ ನಾನಾ ಸಮಿತಿಗಳ ಮುಖ್ಯಸ್ಥರು. ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕೃಷ್ಣಕುಮಾರ್ ಪೂಂಜ, ಉಪಾಧ್ಯಕ್ಷರಾಗಿ ರಾಜೀವ ಕೆ. ಕೈಕಂಬ, ಪ್ರಧಾನ ಕಾರ್ಯದರ್ಶಿಯಾಗಿ ಸುಕೇಶ್ ಚೌಟ, ಕಾರ್ಯದರ್ಶಿಯಾಗಿ ರಿತೇಶ್ ಮಾರ್ಲ ತನ್ನ ತಂಡದೊಂದಿಗೆ ಕಾರ್ಯನಿರ್ವಹಿಸಿದ್ದರು.

ಇಡೀ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯಬೇಕಿದ್ದರೆ ಸ್ವಯಂಸೇವಕರ ಪಾಲು ಅಗಣಿತ. ಇದರ ಸಂಪರ್ಕ ಕಾರ್ಯಾಲಯದ ಅಧ್ಯಕ್ಷರಾಗಿ ಬಿ.ದೇವದಾಸ ಶೆಟ್ಟಿ, ಉಪಾಧ್ಯಕ್ಷರಾಗಿ ಪ್ರಕಾಶ್ ಬೆಳ್ಳೂರು, ಪ್ರಧಾನ ಕಾರ್ಯದರ್ಶಿಯಾಗಿ ತಿರುಮಲೇಶ್ ಬೆಳ್ಳೂರು ಕಾರ್ಯನಿರ್ವಹಿಸಿದರು.

ಮಾತೃಮಂಡಳಿಯ ನೇತೃತ್ವವನ್ನು ರೇಖಾ ಹೆಗಡೆ, ಚಂದ್ರಾವತಿ, ತೇಜಾಕ್ಷಿ, ಮಾಲಿನಿ ಟೀಚರ್ ವಹಿಸಿದರೆ, ರಕ್ಷಣಾ ಸಮಿತಿಯ ನಿರ್ವಹಣೆಯನ್ನು ರವಿಶಂಕರ ರಾವ್, ಇಂದ್ರೇಶ್ ಬಿ.ಸಿ.ರೋಡ್, ಶ್ಯಾಮ್, ಗಣೇಶ್ , ವಸಂತ, ತೇಜಾಕ್ಷಿ ರಾಜೇಶ್ವರಿ ಮಹಿಳಾ ಮಂಡಲ ವಹಿಸಿತ್ತು. ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾಗಿ ಮೋಹನ ಆಳ್ವ, ಪ್ರಧಾನ ಕಾರ್ಯದರ್ಶಿಯಾಗಿ ವೆಂಕಟೇಶ ನಾವಡ ಜವಾಬ್ದಾರಿ ನಿರ್ವಹಿಸಿದರು.

ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಆಶಾಜ್ಯೋತಿ ರೈ ನಿರ್ವಹಿಸಿದರೆ, ಉಪಾಧ್ಯಕ್ಷರಾಗಿ ಕೇಶವ ಪೊಳಲಿ, ಪ್ರಧಾನ ಕಾರ್ಯದರ್ಶಿಯಾಗಿ ಜನಾರ್ದನ ಅಮ್ಮುಂಜೆ ಇದ್ದರು.

ಪಾಕಶಾಲೆ ಸಮಿತಿ ಅಧ್ಯಕ್ಷರಾಗಿ ಮಂಜುನಾಥ ಭಂಡಾರಿ ಉಪಾಧ್ಯಕ್ಷರಾಗಿ ಚಂದ್ರಪ್ರಕಾಶ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ದೀಪಕ್ ಕೋಟ್ಯಾನ್ ಕಾರ್ಯನಿರ್ವಹಿಸಿದರು. ಅನ್ನಸಂತರ್ಪಣಾ ಸಮಿತಿಯ ಅಧ್ಯಕ್ಷರಾಗಿ ಕೊಡ್ಮಾಣ್ ಕಾಂತಪ್ಪ ಶೆಟ್ಟಿ,  ಉಪಾಧ್ಯಕ್ಷರಾಗಿ ಹರೀಶ್ ಶೆಟ್ಟಿ ಬೈಲು ಎತಮೊಗರು, ಪ್ರಧಾನ ಕಾರ್ಯದರ್ಶಿಯಾಗಿ ಸದಾನಂದ ಶೆಟ್ಟಿ ರಂಗೋಲಿ ನಿರ್ವಹಿಸಿದರು. ಅತಿಥಿ ಸತ್ಕಾರ ಸಮಿತಿಯ ಅಧ್ಯಕ್ಷರಾಗಿ ವಿದ್ಯಾಚರಣ್ ಭಂಡಾರಿ, ಉಪಾಧ್ಯಕ್ಷರಾಗಿ ನಂದರಾಮ ರೈ, ಪ್ರಧಾನ ಕಾರ್ಯದರ್ಶಿಯಾಗಿ ರಾಜು ಕೋಟ್ಯಾನ್ ಪ್ರತಿದಿನವೂ ಅತಿಥಿಗಳ ಜವಾಬ್ದಾರಿ ವಹಿಸಿದರೆ, ಸುಬ್ರಹ್ಮಣ್ಯ ತಂತ್ರಿ, ಅನಂತ ಪದ್ಮನಾಭ ಉಪಾಧ್ಯಾಯ, ಮಾಧವ ಭಟ್ ವೈದಿಕ ಸಮಿತಿಯ ಮುಖ್ಯಸ್ಥರಾಗಿದ್ದರು.

ಚಪ್ಪರ ಸಮಿತಿಯ ಅಧ್ಯಕ್ಷರಾಗಿ ಶಿವಪ್ರಸಾದ ಆಳ್ವ, ಉಪಾಧ್ಯಕ್ಷರಾಗಿ ರಾಮಚಂದ್ರ ಭಟ್, ಪ್ರಧಾನ ಕಾರ್ಯದರ್ಶಿಯಾಗಿ ಯಶವಂತ ಪೊಳಲಿ, ಹೊರೆಕಾಣಿಕೆ ಸಮಿತಿಯ ಅಧ್ಯಕ್ಷರಾಗಿ ನಾಗೇಶ ಶೆಟ್ಟಿ, ಉಪಾಧ್ಯಕ್ಷರಾಗಿ ಸೋಹನ್ ಅಧಿಕಾರಿ, ಪ್ರಧಾನ ಕಾರ್ಯದರ್ಶಿಯಾಗಿ ಜಯಾನಂದ ನಾಯ್ಕ್ ಕಾರ್ಯನಿರ್ವಹಿಸಿದರು.

ಸುಬ್ರಾಯ ಕಾರಂತ ಅಧ್ಯಕ್ಷತೆಯ ಕಾರ್ಯಾಲಯ ಸಮಿತಿ ಉಪಾಧ್ಯಕ್ಷರಾಗಿ ಜಿ.ಆನಂದ, ಪ್ರಧಾನ ಕಾರ್ಯದರ್ಶಿಯಾಗಿ ಸಂದೀಪ್ ನಿರ್ವಹಿಸಿದರೆ, ನೀರು ಸರಬರಾಜು ಸಮಿತಿ ಭಾಸ್ಕರ ಭಟ್ ಅಧ್ಯಕ್ಷತೆಯಲ್ಲಿ ಸೂರ್ಯ ಗಂದಾಡಿ ಉಪಾಧ್ಯಕ್ಷ, ನವೀನ್ ಪೊಳಲಿ, ರಮೇಶ್ ಕಟ್ಟಪುಣಿ, ಜಯರಾಮ ಭಟ್ ಮಟ್ಟಿ ಪ್ರ.ಕಾರ್ಯದರ್ಶಿಗಳಾಗಿದ್ದರು. ಸ್ವಚ್ಛತಾ ಸಮಿತಿ ಅಧ್ಯಕ್ಷರಾಗಿ ಕಿರಣ್ ಪಕ್ಕಳ ಪೆರ್ಮಂಕಿಗುತ್ತು, ಪ್ರಧಾನ ಕಾರ್ಯದರ್ಶಿ ಮಹೇಶ್ ಮರೋಳಿ ನಿರ್ವಹಿಸಿದರು.

ಉಗ್ರಾಣ ಸಮಿತಿ ಅಧ್ಯಕ್ಷರಾಗಿ ರಂಗನಾಥ ಶೆಟ್ಟಿ, ಉಪಾಧ್ಯಕ್ಷರಾಗಿ ಲೋಕೇಶ್ ಭರಣಿ, ಪ್ರಧಾನ ಕಾರ್ಯದರ್ಶಿಯಾಗಿ ದೀಕ್ಷಿತ್ ಪರಾರಿ ಕಾರ್ಯನಿರ್ವಹಿಸಿದರೆ, ವಾಹನ ನಿಲುಗಡೆ ಸಮಿತಿ ಅಧ್ಯಕ್ಷರಾಗಿ ಭುವನೇಶ್ ಪಚ್ಚಿನಡ್ಕ, ಉಪಾಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ ಬಡಕಬೈಲು ಪ್ರಧಾನ ಕಾರ್ಯದರ್ಶಿಯಾಗಿ ಕುಮಾರ್ ಪೊಳಲಿ ವಹಿಸಿದ್ದರು. ವೈದ್ಯಕೀಯ ಸಮಿತಿ ಅಧ್ಯಕ್ಷರಾಗಿ ಚಂದ್ರಹಾಸ ಶೆಟ್ಟಿ ನಾರ್ಲ, ಉಪಾಧ್ಯಕ್ಷರಾಗಿ ದೇವದಾಸ ಆರಯ್ ಮಾರ್, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಕೊಟ್ಟಾರಿ ನಾರಳ ವಹಿಸಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.