ಪೆರ್ನೆ – ಕಳೆಂಜ ಬಿಳಿಯೂರಿನ ಶ್ರೀ ವಿಷ್ಣುಮೂರ್ತಿ ಪ್ರೆಂಡ್ಸ್ ಇದರ ಆಶ್ರಯದಲ್ಲಿ 65 ಕೆ.ಜಿ ವಿಭಾಗ ಹಾಗೂ ಸ್ಥಳೀಯ ತಂಡಗಳ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವು ಶನಿವಾರ ಇಲ್ಲಿನ ಮಲ್ಲಡ್ಕ ಶಾಲಾ ವಠಾರದಲ್ಲಿ ನಡಯಿತು.
ಕಳೆಂಜ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕ ಗೋಪಾಲಕೃಷ್ಣ ಭಟ್ ಪಂದ್ಯಾಟವನ್ನು ಉದ್ಘಾಟಿಸಿದರು. ನಿವೃತ್ತ ದೈಹಿಕ ಶಿಕ್ಷಕ ಗೋಪಾಲ ಶೆಟ್ಟಿ ಸಂಪಿಗೆಕೋಡಿ ಅಧ್ಯಕ್ಷತೆ ವಹಿಸಿದ್ದರು. ಪ್ರೆಂಡ್ಸ್ ಅದ್ಯಕ್ಷ ಲಕ್ಷ್ಮಣ ಸಮಾರೋಪ ಸಮಾರಂಭ ದ ಅಧ್ಯಕ್ಷತೆ ವಹಿಸಿದ್ದರು.
ತಾ.ಪಂ.ಸದಸ್ಯ ರಘುನಾಥ ಮಲ್ಲಡ್ಕ, ಪೆರ್ನೆ ಗ್ರಾ.ಪಂ. ಅಧ್ಯಕ್ಷೆ ಭಾರತಿ, ಸದಸ್ಯ ನವೀನ್ ಕುಮಾರ್ ಪದಬರಿ, ವಿಜಯ ವಿಕ್ರಮ ರಾಮಕುಂಜ, ಕಳೆಂಜ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಚಂದಪ್ಪ ಪೂಜಾರಿ, ಮಲ್ಲಡ್ಕ ಶಾಲಾ ಮುಖ್ಯ ಶಿಕ್ಷಕ ತಿಮ್ಮಪ್ಪ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ನಳಿನಿ, ಗಡಿಯಾರ ಶಾಲಾ ಶಿಕ್ಷಕ ರಾಜೀವ ಸಾಮಾನಿ, ಶ್ರೀಧರ ಗೌಡ ಶಿರೋಧಿತ ನಿಲಯ ಅತ್ರಬೈಲು, ಪಡ್ನೂರು ಶ್ರೀ ರಾಮ್ ಪ್ರೆಂಡ್ಸ್ ಗೌರವಾದ್ಯಕ್ಷ ನವೀನ್ ಕುಮಾರ್, ಮಲ್ಲಡ್ಕ ಯುವಶಕ್ತಿ ಗೆಳೆಯರ ಬಳಗದ ಅದ್ಯಕ್ಷ ಕೆ.ಪುಷ್ಕರ ಪೂಜಾರಿ, ಪೆರ್ನೆ ಅಯೋಧ್ಯೆ ಪ್ರೆಂಡ್ಸ್ ಅದ್ಯಕ್ಷ ರೋಹಿತಾಕ್ಷ ಬರೇಮೇಲು ಮೊದಲಾದವರು ಮುಖ್ಯ ಅತಿಥಿಗಳಾಗಿ ಬಾಗವಹಿಸಿದ್ದರು.
ಮಜೀದ್ ಮಾಣಿ, ಪ್ರಕಾಶ ಮಾಣಿ, ಹಾಗೂ ನಿತಿನ್ ಮೂರ್ಜೆ ತೀರ್ಪುಗಾರರಾಗಿ ಸಹಕರಿಸಿದರು. ಪ್ರೆಂಡ್ಸ್ ಕಾರ್ಯದರ್ಶಿ ಜಯರಾಮ ಸ್ವಾಗತಿಸಿ, ರೋಹಿತ್ ವಂದಿಸಿದರು. ಲೋಕೇಶ ಹಾಗೂ ಮನು ಈಶ್ವರಮಂಗಿಲ ಕಾರ್ಯಕ್ರಮನಿರೂಪಿಸಿದರರು.
ಕರುವೇಲು ತಂಡಕ್ಕೆ ಪ್ರಶಸ್ತಿ: 26 ತಂಡಗಳು ಬಾಗವಹಿಸಿದ್ದ 65 ಕೆ.ಜಿ.ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಚಕ್ರವರ್ತಿ ಕರುವೇಲು ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡರೆ ಟಿಕ್ಕಾ ಪಾಯಿಂಟ್ ಕಲ್ಲಡ್ಕ ದ್ವಿತೀಯ, ಯುವಕ ಮಂಡಲ ಮಾಣಿ ತೃತೀಯ, ಹಾಗೂ ರಾಮಾಂಜನೇಯ ಕಾರ್ಲ ತಂಡವು ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. ಕರುವೇಲು ತಂಡದ ಚೇತನ್, ಫಯಾಝ್ ಟಿಕ್ಕಾ ಪಾಯಿಂಟ್ ತಂಡದ ಇರ್ಶಾದ್ ಗೂಡಿನಬಳಿ ವೈಯುಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡರು.
ಇದಕ್ಕೂ ಮುನ್ನ ನಡೆದ ಸ್ಥಳೀಯ 8 ತಂಡಗಳ ಕಬಡ್ಡಿ ಪಂದ್ಯಾಟದಲ್ಲಿ ಯುವಕ ಮಂಡಲ ಮಾಣಿ ಪ್ರಥಮ, ಶ್ರೀ ವಿಷ್ಣು ಪೆರಾಜೆ ದ್ವಿತೀಯ, ಶ್ರೀ ವಿಷ್ಣುಮೂರ್ತಿ ಕಳಂಜ ತೃತೀಯ ಹಾಗೂ ರಾಮಾಂಜನೇಯ ಕಡೇಶಿವಾಲಯ ತಂಡವು ಚತುರ್ಥ ಸ್ಥಾನವನ್ನುಪಡೆದುಕೊಂಡಿತು