ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ: ಅವಕಾಶಗಳು ದೊರೆತರೆ, ವಿಶೇಷಚೇತನ ಮಕ್ಕಳೂ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಆತ್ಮವಿಶ್ವಾಸದಿಂದ ಬದುಕುತ್ತಾರೆ. ಸಾಮಾಜಿಕವಾಗಿ ಅವರಿಗೆ ಅನುಕಂಪದ ಜೊತೆಗೆ ಪ್ರೋತ್ಸಾಹವೂ ಒದಗಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಕೊಟ್ಟರೆ ಅವಕಾಶ, ಮುಟ್ಟುವೆವು ಆಕಾಶ ಎಂಬ ಘೋಷವಾಕ್ಯದೊಂದಿಗೆ ಬಂಟ್ವಾಳದಲ್ಲಿ ಫೆ.23ರಂದು ನಡೆದ ವಿಶೇಷ ಚೇತನ ಮಕ್ಕಳ ಹಬ್ಬದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಈ ಸಂದರ್ಭ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ಸನ್ಮಾನಿಸಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ವಿಕಲಚೇತನ ಮಕ್ಕಳು ಸಮಾಜದ ಕಣ್ಗಾವಲಿನಲ್ಲಿ ಬೆಳೆಯಬೇಕು. ಅವರ ಪೋಷಕರಿಗೆ ಸಮಾಜದ ಬೆಂಬಲ ಬೇಕಾಗಿದೆ ಎಂದು ಹೇಳಿದರು.
ವಿಶೇಷ ಚೇತನ ಮಕ್ಕಳಾದ ಎಸ್.ವಿ.ಎಸ್.ಟೆಂಪಲ್ ಸ್ಕೂಲ್ ನ ಕೌಶಿಕ್ ಕಾಲಿನಲ್ಲಿ ಬರೆದ ಚಿತ್ರಗಳ ಪುಸ್ತಕ ಹಾಗೂ ಎಸ್.ವಿ.ಎಸ್.ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಭಾಗ್ಯಶ್ರೀ ಬರೆದ ಭಾಗ್ಯದೀಪಿಕೆ ಕವನ ಸಂಕಲನವನ್ನು ಬಿಡುಗಡೆ ಮಾಡಲಾಯಿತು. ಇದೇ ವೇಳೆ ವಿಶೇಷಚೇತನ ಸಾಧಕರಾದ ಯಶಸ್ವಿ, ಚಂದ್ರಿಕಾ, ಶ್ರೀಕೃಷ್ಣ, ಮಹಮ್ಮದ್ ಜುನೈದ್ ಮತ್ತು ಬೀಪಾತುಮ್ಮಾ ಅವರನ್ನು ಸನ್ಮಾನಿಸಲಾಯಿತು. ವಿಶೇಷಚೇತನರಾಗಿ ಸರಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ದೀಪಾ ಅನಿಸಿಕೆ ವ್ಯಕ್ತಪಡಿಸಿದರು. ತಾಲೂಕಿನಲ್ಲಿ ಸರಕಾರದಿಂದ ಗುರುತಿಸಲ್ಪಟ್ಟ ಸುಮಾರು 500 ಮಂದಿ ವಿಕಲಚೇತನ ಮಕ್ಕಳು ಪೋಷಕರೊಂದಿಗೆ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಂಡು ವಿಜೇತಳಾದ ಚೆಸ್ ಪ್ರತಿಭೆ ಕಡೇಶ್ವಾಲ್ಯ ಶಾಲೆ ವಿದ್ಯಾರ್ಥಿನಿ ಯಶಸ್ವಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್.ಮಹಮ್ಮದ್, ತುಂಗಪ್ಪ ಬಂಗೇರ, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ತಾಪಂ ಸದಸ್ಯರಾದ ಸಂಜೀವ ಪೂಜಾರಿ, ಪ್ರಭಾಕರ ಪ್ರಭು, ಶಾರದಾ ಹೈಸ್ಕೂಲು ಸಂಚಾಲಕ ಮೊಗರ್ನಾಡು ಜನಾರ್ದನ ಭಟ್, ಚುಟುಕು ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಇರಾ ನೇಮು ಪೂಜಾರಿ, ಡಯಟ್ ಪ್ರಾಂಶುಪಾಲ ಸಿಪ್ರಿಯಾನ್ ಮೊಂತೆರೊ, ಶಿಕ್ಷಕರ ಸಂಘಟನೆಗಳ ಪ್ರಮುಖರಾದ ರಮಾನಂದ ನೂಜಿಪ್ಪಾಡಿ, ಮಹಮ್ಮದ್ ತುಂಬೆ, ರಮೇಶ್ ನಾಯಕ್ ರಾಯಿ, ಮಹೇಶ್ ಕುಮಾರ್ ಕರ್ಕೇರ, ಪುರಸಭೆ ಮುಖ್ಯಾಧಿಕಾರಿ ರೇಖಾ ಶೆಟ್ಟಿ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ಸಮನ್ವಯಾಧಿಕಾರಿ ರಾಧಾಕೃಷ್ಣ ಭಟ್. ಶಿಕ್ಷಣ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ನಾರಾಯಣ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ಬಿಆರ್ ಸಿಯ ನೋಡಲ್ ಅಧಿಕಾರಿ ಸುರೇಖಾ ಯಳವರ ಉಪಸ್ಥಿತರಿದ್ದರು. ಶಿಕ್ಷಕ ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರ್ವಹಿಸಿದರು.
+++++++++++++++++++++++++++ ಪದ್ಯಾಣದ ಮಣ್ಣಿನಲ್ಲಿ ಸಂಸ್ಕೃತಿ ಇದೆ: ಗುರ್ಮೆ ಸುರೇಶ್ ಶೆಟ್ಟಿ (more…)