ಬಂಟ್ವಾಳ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ರಾಜ್ಯ ವಿಜ್ಞಾನ ಪರಿಷತ್ತು ದಕ್ಷಿಣ ಕನ್ನಡ ಸಹಯೋಗದೊಂದಿಗೆ ನಡೆಸಿದ ಪರಿಸರ ಸ್ನೇಹಿ ಶಾಲಾ ಅಭಿಯಾನದಲ್ಲಿ ವಿದ್ಯಾಗಿರಿಯ ಬಿ.ಆರ್.ಎಂ.ಪಿ.ಶಾಲೆಯು ಹಳದಿ ಶಾಲೆ ಪ್ರಶಸ್ತಿಗೆ ಭಾಜನವಾಯಿತು.
ಪ್ರಶಸ್ತಿಯು ನಗದು, ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ಒಳಗೊಂಡಿದೆ. ಶಾಲಾ ವಾತಾವರಣವು ಪರಿಸರಕ್ಕೆ ಪೂರಕವಾಗಿದ್ದು, ತ್ಯಾಜ್ಯ ನಿರ್ವಹಣೆ, ಉಪಯೋಗಿಸಿದ ನೀರಿನ ಪುನರ್ಬಳಕೆ, ವಿದ್ಯಾರ್ಥಿ ಅರಿವು ಮತ್ತು ಜಾಗೃತಿ,ಔಷಯ ಸಸ್ಯಗಳ ಬೆಳೆ ಇತ್ತಾದಿ ಹಂತಗಳಲ್ಲಿ ಇಲಾಖೆಯು ಸಮೀಕ್ಷೆ ನಡೆಸಿದ್ದು, ಗುಣಮಟ್ಟವನ್ನು ಆಧರಿಸಿ ಈ ಶಾಲೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಫೆ.21ರಂದು ನಡೆದ ಜಿಲ್ಲಾ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿತು. ಶಿಕ್ಷಕಿ ಕೇಶವತಿ ಅವರ ಮುಂದಾಳತ್ವದಲ್ಲಿ ವಿದ್ಯಾರ್ಥಿಗಳು ಹಳದಿ ಶಾಲೆ ಪ್ರಶಸ್ತಿಯನ್ನು ಸ್ವೀಕರಿಸಿದ್ದು, ಶಾಲಾ ಪ್ರಾಂಶುಪಾಲೆ ರಮಾಶಂಕರ್ ಶಿಕ್ಷಕ ವೃಂದದವರನ್ನು ಹಾಗೂ ವಿದ್ಯಾಥಿಗಳನ್ನು ಶ್ಲಾಘಿಸಿದ್ದಾರೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್ ಪ್ರಶಸ್ತಿ ನೀಡಿ ಗೌರವಿಸಿದರು.