ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ: ಕಾಶ್ಮೀರದಲ್ಲಿ ಉಗ್ರರ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶುಕ್ರವಾರ ಬಿಜೆಪಿ ಬಂಟ್ವಾಳ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ಘಟನೆಯನ್ನು ಖಂಡಿಸಿ ಬಿ.ಸಿ.ರೋಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಮಾತನಾಡಿದರು. ಕೇತ್ರ ಬಿಜೆಪಿ ಅಧ್ಯಕ್ಷ ದೇವದಾಸ್ ಶೆಟ್ಟಿ , ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ , ಯುವ ಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ, ಬಿಜೆಪಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ರೊನಾಲ್ಡ್ ಡಿ’ಸೋಜ, ಪ್ರಕಾಶ್ ಅಂಚನ್, ರಮಾನಾಥ ರಾಯಿ, ಗೋಪಾಲ ಸುವರ್ಣ , ಪ್ರಮೋದ್ ಕುಮಾರ್,ಮಹಾಬಲ ಶೆಟ್ಟಿ , ವಿದ್ಯಾವತಿ,ದಿನೇಶ್ ಅಮ್ಟೂರ್, ಯಶೋಧರ ಕರ್ಬೆಟ್ಟು, ದಿವಾಕರ ಶಂಭೂರು, ಕಿಶೋರ್ ,ಗಂಗಾಧರ ಕೋಟ್ಯಾನ್, ಆನಂದ ಶಂಭೂರು,ಚಿದಾನಂದ ರೈ, ಸುರೇಶ್ ಕೋಟ್ಯಾನ್, ಗುರುದತ್ , ಮಹೇಶ್, ವಿಠಲ ಅಲ್ಲಿಪಾದೆ , ಪ್ರಣಾಮ್ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.