ಪ್ರಮುಖ ಸುದ್ದಿಗಳು

ಬಾಕಿ ಇರುವ ಹಕ್ಕುಪತ್ರ ಶೀಘ್ರ ವಿತರಿಸಲು ಸೂಚನೆ: ರಾಜೇಶ್ ನಾಯ್ಕ್ ಪ್ರಶ್ನೆಗೆ ದೇಶಪಾಂಡೆ ಉತ್ತರ

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಜಾಹೀರಾತು

ಬಂಟ್ವಾಳ: ದ..ಜಿಲ್ಲೆಯಲ್ಲಿ 94ಸಿ ಮತ್ತು94ಸಿಸಿ ಅಡಿಯಲ್ಲಿ ವಿವಿಧ ಕಾರಣಗಳಿಂದ ಇತ್ಯರ್ಥಕ್ಕೆ ಬಾಕಿರುವ ಅರ್ಜಿಗಳು ತನಿಖಾ ಹಂತದಲ್ಲಿದ್ದು, ಶೀಘ್ರವಾಗಿ ವಿಲೇವಾರಿ ಮಾಡಿ ಹಕ್ಕುಪತ್ರ ವಿತರಿಸಲು ಜಿಲ್ಲೆಯ ಎಲ್ಲಾ ತಾಲೂಕು ತಹಶೀಲ್ದಾರರಿಗೆ ನಿರ್ದೇಶನ ನೀಡಲಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಪ್ರಶ್ನೆಗೆ ಕಂದಾಯ ಸಚಿವ ಆರ್ .ವಿ.ದೇಶಪಾಂಡೆ ಅವರು ಉತ್ತರಿಸಿದ್ದಾರೆ

ವಿಧಾನಮಂಡಲದ ಅಧಿವೇಶನದಲ್ಲಿ ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು,ಬಂಟ್ವಾಳದಲ್ಲಿ    904ಮಂದಿಗೆ 94ಸಿ ಮತ್ತು 432 ಮಂದಿಗೆ 94ಸಿಸಿ ಸೇರಿದಂತೆ ದ.ಕ.ಜಿಲ್ಲೆಯಲ್ಲಿ ಬಾಕಿ ಇರುವ ಒಟ್ಟು 8503 ಮಂದಿಗೆ 94ಸಿ ಹಾಗೂ 6882 ಮಂದಿಗೆ 94ಸಿಸಿ ಅಡಿಯಲ್ಲಿ ಅರ್ಜಿಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸಿ ಹಕ್ಕುಪತ್ರ ವಿತರಿಸಲು ಕ್ರಮಕೈಗೊಳ್ಳಲು ಆಯಾಯ ತಾಲೂಕು ತಹಶೀಲ್ದಾರರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಸರಕಾರಿ ಖಾಲಿ ಜಾಗದಲ್ಲಿ ಮನೆ ನಿರ್ಮಿಸದಿರುವುದು,ನಿಗದಿತ ದಿನಗಳ ನಂತರ ನಿರ್ಮಿಸದಿರುವುದು,ಖಾಲಿ ಸ್ಥಳಕ್ಕೆ ಅರ್ಜಿ ಸಲ್ಲಿಸಿರುವುದು,ಮೀಸಲು  ಅರಣ್ಯ,ಪರಂಬೋಕು,ರಸ್ತೆ ಮಾರ್ಜಿನ್ ಇತ್ಯಾದಿ ಕಾರಣಕ್ಕೆ ಬಂಟ್ವಾಳದಲ್ಲಿ 6864 ಮಂದಿಗೆ 94ಸಿ ಹಾಗೂ 902 ಮಂದಿಗೆ 94 ಸಿಸಿ ಸೇರಿದಂತೆ ಜಿಲ್ಲೆಯಲ್ಲಿ 50288 ಮಂದಿಗೆ 94ಸಿ ಮತ್ತು11913 ಮಂದಿಗೆ 94 ಸಿಸಿ ಯಡಿಯಲ್ಲಿ ಅರ್ಜಿಗಳು ತಿರಸ್ಖೃತವಾಗಿದೆ ಎಂದು ಸಚಿವ ದೇಶಪಾಂಡೆ ಅವರು ಶಾಸಕ ಯು.  ರಾಜೇಶ್ ನಾಯ್ಕ್ ಅವರ ಮರು ಪ್ರಶ್ನೆಗೆ ಉತ್ತರಿಸಿದ್ದಾರೆ.        ಬಂಟ್ವಾಳದಲ್ಲಿ 17196ಮಂದಿಗೆ 94ಸಿ ಮತ್ತು 4855 ಮಂದಿಗೆ 94ಸಿಸಿ ಸೇರಿದಂತೆ ದ.ಕ.ಜಿಲ್ಲೆಯಲ್ಲಿ ಒಟ್ಟು 1,05,135 ಮಂದಿಗೆ 94ಸಿ ಹಾಗೂ 38828 ಮಂದಿಗೆ 94ಸಿಸಿ ಅಡಿಯಲ್ಲಿ ಅರ್ಜಿಗಳು ಬಂದಿದೆ.ಈ ಪೈಕಿ ಬಂಟ್ವಾಳದಲ್ಲಿ 12,501ಮಂದಿಗೆ94 ಸಿ ಹಾಗೂ 4318 ಮಂದಿಗೆ  94ಸಿಸಿ ಸಹಿತ ದ.ಕ.ಜಿಲ್ಲೆಯಲ್ಲಿ ಒಟ್ಟು 45,201ಮಂದಿಗೆ 94ಸಿ ಮತ್ತು 19,583 ಮಂದಿಗೆ 94ಸಿಸಿ ಅಡಿಯಲ್ಲಿ ಹಕ್ಕುಪತ್ರ ವಿತರಿಸಲಾಗಿದೆ ಎಂದು ಸಚಿವರು ಶಾಸಕ ಯು.ರಾಜೇಶ್ ನಾಯ್ಕ್ ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ