ಬಂಟ್ವಾಳ: ಶಂಭೂರಿನ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ಮತದಾರರ ಸಾಕ್ಷರತಾ ಸಂಘ ,ಜೇಸಿಐ ನೇತ್ರಾವತಿ ಜೋಡುಮಾರ್ಗ, ಇಂಟಾರ್ಯಾಕ್ಟ್ ಕ್ಲಬ್ ಬಂಟ್ವಾಳ ಟೌನ್ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ನಡೆಯಿತು.
ಶಿಕ್ಷಕ ಹಾಗು ಜೇಸಿಐ ಉಪಾಧ್ಯಕ್ಷ ಹರಿಪ್ರಸಾದ್ ಕುಲಾಲ್ ಪ್ರತಿಜ್ಞಾ ವಿಧಿ ಬೋಧಿಸಿ ಮತದಾನದ ಮಹತ್ವ ವನ್ನು ತಿಳಿಸಿದರು.
ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಕಮಲಾಕ್ಷ ಕಲ್ಲಡ್ಕ ವಹಿಸಿದ್ದರು. ಶಿಕ್ಷಕರಾದ ಸುಜಾತ, ಸದಾಶಿವ ನಾಯಕ್, ಭಾರತಿಹರೀಶ್, ಚಿನ್ನಪ್ಪ ಜಾಲ್ಸೂರು,ಪ್ರಕಾಶ್ ,ಜೆಜೇಸಿ ಅಧ್ಯಕ್ಷ ರೋನಿತ್ , ವಿದ್ಯಾರ್ಥಿ ನಾಯಕ ಪವನ್ ರಾಜ್ ಉಪಸ್ಥಿತರಿದ್ದರು. ಮತದಾರರ ಸಾಕ್ಷರತಾ ಸಂಘದ ಅಧ್ಯಕ್ಷೆ ಪ್ರಸ್ಮಾ ಸ್ವಾಗತಿಸಿ, ಇಂಟಾರ್ಯಾಕ್ಟ್ ಅಧ್ಯಕ್ಷೆ ಶ್ರೀವಿದ್ಯಾ ವಂದಿಸಿದರು. ಕುಶಿತ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…