ಬಂಟ್ವಾಳ

ರೋಟರಿ ಕ್ಲಬ್ ಬಂಟ್ವಾಳ ಟೌನ್: ಸನ್ಮಾನ ಸಮಾರಂಭ

www.bantwalnews.com

ಜಾಹೀರಾತು

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಆನ್ಸ್ ಕ್ಲಬ್ ವತಿಯಿಂದ  ಮೂನ್ ಲೈಟ್ ಡಿನ್ನರ್ ಮೀಟಿಂಗ್  ಹೊಟೇಲ್ ರಂಗೋಲಿ ಯಲ್ಲಿ ಉಮೇಶ್ ನಿರ್ಮಲ್  ನಿರ್ಮಲ್ ಅಧ್ಯಕ್ಷತೆ ಯಲ್ಲಿ ನಡೆಯಿತು. ಕ್ಲಬ್ ವಾರ್ಷಿಕ ಚಟುವಟಿಕೆಗಳ ವರದಿಯನ್ನು ಜಯರಾಜ್ ಎಸ್ ಬಂಗೇರ ಹಾಗೂ ವಿಂದ್ಯಾ ಎಸ್ ರೈ ಮಂಡಿಸಿದರು.

ಆನ್ಸ್ ಕ್ಲಬ್  ವತಿಯಿಂದ 2018 ನೇ ಸಾಲಿನಲ್ಲಿ ಸಾಧನೆಗಾಗಿ ಬಂಟ್ವಾಳ ತಾಲ್ಲೂಕು ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆಯಾಗಿ ಆಯ್ಕೆಯಾದ ಜಯಲಕ್ಷ್ಮೀ ಭುವನೇಶ್ ಪಚ್ಚಿನಡ್ಕ, ಜೋಡುಮಾರ್ಗ ನೇತ್ರಾವತಿ ಜೇಸೀ ಅಧ್ಯಕ್ಷರಾಗಿ ವಲಯ ಪ್ರಶಸ್ತಿ ಪುರಸ್ಕೃತ ಸವಿತಾ ನಿರ್ಮಲ್, ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಪಲ್ಲವಿ ಕಾರಂತ್, ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗಾಗಿ ಮಂಜುಳಾ ಶಾಂತ್ ರಾಜ್, ವಿಂದ್ಯಾ ಎಸ್ ರೈ ಯವರಿಗೆ ಆನ್ಸ್ ಕ್ಲಬ್ ಅಧ್ಯಕ್ಷರಾದ ಆಶಾಮಣಿ ಡಿ ರೈ ಸನ್ಮಾನಿಸಿ ಗೌರವಿಸಿದರು .

ನಿಕಟ ಪೂರ್ವ ಅಧ್ಯಕ್ಷ ರಾದ ಚಂದ್ರಹಾಸ ಶೆಟ್ಟಿ ಯವರು ಶುಭ ಹಾರೈಸಿದರು. ರಾಜೇಶ್ವರಿ  ಪ್ರಾರ್ಥನೆಗೈದರು . ಭವಿಷ್ ಎಂ ಶೆಟ್ಟಿ ಹಾಗೂ ವಿದ್ಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ರೋಟರಿ ಕುಟುಂಬದ ಸದಸ್ಯರಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ