ಫರಂಗಿಪೇಟೆ

ಬೇಲಿ ಹಾಕುವ ಗೊಂದಲ – ಮಾತುಕತೆಯಲ್ಲಿ ಅಂತ್ಯ

ಫರಂಗಿಪೇಟೆ ವರದಿ: ಗುರುವಾರ ಫರಂಗಿಪೇಟೆ ಮೀನು ಮಾರ್ಕೆಟ್ ತೆರವಿನ ಬೆನ್ನಲ್ಲಿ ರೈಲ್ವೆ ಇಲಾಖೆ ಬೇಲಿ ಹಾಕಲು ಮುಂದಾದ ಸಂದರ್ಭ ಎದ್ದ ಆಕ್ಷೇಪ, ಗೊಂದಲ ಬಳಿಕ ಕಂದಾಯ ಮತ್ತು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಪ್ರವೇಶದಿಂದ ನಿವಾರಣೆಯಾಯಿತು.

ಜಾಹೀರಾತು

ಫರಂಗಿಪೇಟೆ ಹೆದ್ದಾರಿ ಬದಿಯಲ್ಲಿದ್ದ ಮೀನು ಮಾರುಕಟ್ಟೆಯನ್ನು ರೈಲ್ವೇ ಇಲಾಖೆ ಗುರುವಾರ ಬೆಳಿಗ್ಗೆ ತೆರವುಗೊಳಿಸಿದೆ. ಇದೇ ಸಂದರ್ಭ ಇಲಾಖೆಯ ಜಾಗಕ್ಕೆ ಗಡಿ ಗುರುತು ಮಾಡಿ ಬೇಲಿ ಹಾಕುವ ವಿಚಾರದಲ್ಲಿ ಸ್ಥಳೀಯರು ಆಕ್ಷೇಪ ಸಲ್ಲಿಸಿದರು. ಬಳಿಕ ಕಂದಾಯ ಮತ್ತು ಪೊಲೀಸ್ ಉನ್ನತ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಸುಖಾಂತ್ಯಗೊಂಡಿತು.

ಮಾರುಕಟ್ಟೆಯನ್ನು ತೆರವುಗೊಳಿಸುವಂತೆ ರೈಲ್ವೇ ಇಲಾಖೆ ವಿಧಿಸಿದ್ದ ಗಡುವು ಜನವರಿ 15ಕ್ಕೆ ಕೊನೆಗೊಂಡಿರುವ ಹಿನ್ನೆಲೆಯಲ್ಲಿ ಬೆಳಗ್ಗೆ ರೈಲ್ವೆ ಇಲಾಖೆಯು ಮೀನು ಮಾರುಕಟ್ಟೆಯನ್ನು ತೆರವುಗೊಳಿಸಿತು. ಆದರೆ ಬೇಲಿ ಹಾಕುವ ಕಾರ್ಯಕ್ಕೆ ಮುಂದಾದಾಗ ಕೆಲ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು.ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್, ಗ್ರಾಮಾಂತರ ಠಾಣಾ ಎಸ್ಸೈ ಪ್ರಸನ್ನ ನೇತೃತ್ವದಲ್ಲಿ ಬಿಗಿಬಂದೋಬಸ್ತ್ ಏರ್ಪಡಿಸಿದರು. ಘಟನಾ ಸ್ಥಳಕ್ಕೆ ಎಸಿ ರವಿಚಂದ್ರ ನಾಯ್ಕ್ ಹಾಗೂ ಬಂಟ್ವಾಳ ಎಎಸ್ಪಿ ಸೈದುಲು ಅಡಾವತ್ ಅವರು ಬೇಟಿ ನೀಡಿ, ರೈಲ್ವೇ ಇಲಾಖೆಯ ಅಧಿಕಾರಿ ಮತ್ತು ಇಂಜಿನೀಯರ್, ಸ್ಥಳೀಯ ಪಂಚಾಯತ್ ಹಾಗೂ ಸ್ಥಳೀಯರೊಡನೆ ಮಾತುಕತೆ ನಡೆಸಿದರು. ಹೆದ್ದಾರಿಯಿಂದ 13  ಅಡಿ  ಬಿಟ್ಟು  ಬೇಲಿ ಹಾಕುವಂತೆ  ಸೂಚಿಸಿ ಸುಖಾಂತ್ಯಗೊಳಿಸಿದರು. ಬಳಿಕ ರೈಲ್ವೇ ಇಲಾಖೆ ತಮ್ಮ ಕಾರ್ಯ ಮುಂದುವರಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ