ಬಂಟ್ವಾಳ

ಭದ್ರಾ ಚಾಲೆಂಜರ್ಸ್ ಬಂಟ್ವಾಳ ಕಬಡ್ಡಿಯಲ್ಲಿ ತಾಲೂಕು ಚಾಂಪಿಯನ್

ಮಂಗಳವಾರ ಬಿ.ಸಿ.ರೋಡಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಹಿಂಭಾಗದ ಮೈದಾನದಲ್ಲಿ ನಡೆದ ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ಆಯೋಜನೆಯ ತಾಲೂಕು ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾವಳಿಯಲ್ಲಿ ಬಂಟ್ವಾಳದ ಭದ್ರಾ ಚಾಲೆಂಜರ್ಸ್ ತಂಡ ಜಯಶಾಲಿಯಾಗಿದ್ದು, ತಾಲೂಕು ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಜಾಹೀರಾತು

ದ್ವಿತೀಯ ಸ್ಥಾನವನ್ನು ಎಲ್.ವಿ.ಎಸ್.ಎಸ್. ಜಾರಂದಗುಡ್ಡೆ, ತೃತೀಯ ಸ್ಥಾನವನ್ನು ಶ್ರೀ ಷಣ್ಮುಖ ತಂಡ ಕೋಲ್ಪೆ, ನಾಲ್ಕನೇ ಸ್ಥಾನವನ್ನು ನವಯುಗ ಕುಕ್ಕಾಜೆ ತಂಡ ಪಡೆದುಕೊಂಡಿತು.

ಉತ್ತಮ ದಾಳಿಗಾರರಾಗಿ ಜಾರಂದಗುಡ್ಡೆ ತಂಡದ ರಂಜಿತ್ ಆಯ್ಕೆಯಾಗಿ ಬಹುಮಾನ ಪಡೆದರು. ಭದ್ರಾ ತಂಡದ ಹರ್ಷಿದ್ ಉತ್ತಮ ಹಿಡಿತಗಾರ ಹಾಗೂ ಅದೇ ತಂಡದ ರಹೀಂ ಆಲ್ ರೌಂಡರ್ ಆಗಿ ಹೊರಹೊಮ್ಮಿದರು. ಬಹುಮಾನ ವಿತರಣೆ ಸಂದರ್ಭ ಸುವರ್ಣ ಮಹೋತ್ಸವ ಆಚರಿಸುತ್ತಿರುವ ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ಹಾಗೂ ಭದ್ರಾ ಚಾಲೆಂಜರ್ಸ್ ತಂಡದ ಪ್ರವರ್ತಕ ಮಂಜುನಾಥ ಆಚಾರ್ಯ, ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ಅಧ್ಯಕ್ಷ ಬೇಬಿ ಕುಂದರ್, ಕಾರ್ಯಾಧ್ಯಕ್ಷ ಪುಷ್ಪರಾಜ ಚೌಟ, ಎಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಕರ್ಣ, ಜತೆ ಕಾರ್ಯದರ್ಶಿ ಲತೀಫ್ ನೇರಳೆಕಟ್ಟೆ, ತೀರ್ಪುಗಾರ ಮಂಡಳಿ ಅಧ್ಯಕ್ಷ ಸುರೇಶ್ ಮೈರಡ್ಕ, ತೀರ್ಪುಗಾರರ ಮಂಡಳಿಯ ಸಂಚಾಲಕ ಹಬೀಬ್ ಮಾಣಿ, ಪ್ರಮುಖರಾದ ಹಿಲ್ಡಾ ವೇಗಸ್, ಗೋಪಾಲಕೃಷ್ಣ ತುಂಬೆ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ