ಸಜೀಪ ಮೂಡ-ಮುನ್ನೂರು,ಗೋಳ್ತಮಜಲು, ಅಮ್ಟೂರು ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಗಾನಂದ ವಿ. ಅವರು ಮೈಸೂರು ಜಿಲ್ಲೆಗೆ ವರ್ಗಾವಣೆಗೊಂಡಿರುವ ಪ್ರಯುಕ್ತ ಅವರನ್ನು ಇಂದು ಬೀಳ್ಕೊಡುಗೆ ಮಾಡಲಾಯಿತು.
ಬಂಟ್ವಾಳ ಮಿನಿ ವಿಧಾನ ಸೌಧದ ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಸಹೋದ್ಯೋಗಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಕಚೇರಿ ಸಿಬ್ಬಂದಿಗಳು, ಗ್ರಾಮ ಸಹಾಯಕರು ಹಾಗೂ ಸಾರ್ವಜನಿಕರು
ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಅವರು, ಕಿರಿಯ ಪ್ರಾಯದಲ್ಲಿ ಕಂದಾಯ ಸೇವೆಗೆ ಸೇರಿದ ಯೋಗಾನಂದ ಅವರು, ಸೌಜನ್ಯ ಹಾಗೂ ಸಂಯಮದಿಂದ ಕರ್ತವ್ಯ ನಿರ್ವಹಿಸಿ ಜನ ಮಾನಸದಲ್ಲಿ ಮೆಚ್ಚುಗೆ ಪಡೆದಿದ್ದಾರೆ ಎಂದವರು ಪ್ರಶಂಸಿದರು.
ಬಳಿಕ ಅವರಿಗೆ ಪೇಟಾ ಧರಿಸಿ, ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. 2006ರಲ್ಲಿ ಕಂದಾಯ ಇಲಾಖಾ ಸೇವೆಗೆ ನಿಯುಕ್ತಿಗೊಂಡ ಯೋಗಾನಂದ ಅವರು, ತುಂಬೆ-ಕಳ್ಳಿಗೆಯಲ್ಲಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ತಾಲೂಕಿನ ನಾನಾ ಕಡೆಗಳಲ್ಲಿ ಸೇವೆ ಸಲ್ಲಿಸಿ ಇದೀಗ ಸರ್ಕಾರದ ಆದೇಶದಂತೆ ವರ್ಗಾವಣೆ ಹೊಂದಿದ್ದಾರೆ. ಗ್ರಾಮ ಲೆಕ್ಕಾಧಿಕಾರಿ ಶಿವಾನಂದ ನಾಟೇಕಾರ್ ಸ್ವಾಗತಿಸಿ, ವಂದಿಸಿದರು.