ಕಲ್ಲಡ್ಕ

ಶಹೀದೇ ಮಿಲ್ಲತ್ ಸಿಎಂ ಉಸ್ತಾದ್ ಅನುಸ್ಮರಣಾ ಮಹಾಸಮ್ಮೇಳನ

ಸಿಎಂ ಉಸ್ತಾದ್ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸುತ್ತಾ ಬಂದರೆ, ಕೆಲವೊಂದು ಕಾಣದ ಕೈಗಳು ಪ್ರಕರಣದ ತನಿಖೆಯನ್ನು ದಿಕ್ಕು ತಪ್ಪಿಸುತ್ತಿದೆ ಎಂದು ದ.ಕ.ಜಿಲ್ಲಾ ಖಾಝಿ, ಸಮಸ್ತ ಕೇಂದ್ರ ಮುಶಾವರದ ಸದಸ್ಯ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹೇಳಿದರು.

ಜಾಹೀರಾತು

ಅರ್ಶದೀಸ್ ಅಸೋಸಿಯೇಷನ್ ವತಿಯಿಂದ ಶೈಖುನಾ ಕೋಟ ಉಸ್ತಾದ್, ಶಹೀದೇ ಮಿಲ್ಲತ್ ಸಿಎಂ ಉಸ್ತಾದ್ ಅವರ ಅನುಸ್ಮರಣಾ ಮಹಾಸಮ್ಮೇಳನ ಹಾಗೂ ಕೇಸ್ ಡೈರಿ ಕಾರ್ಯಕ್ರಮ ಮಾಣಿ ಸಮೀಪದ ನೇರಳಕಟ್ಟೆ ಶಂಸುಲ್ ಉಲಮಾ ನಗರದ ಇಂಡಿಯನ್ ಆಡಿಟೋರಿಯಂನಲ್ಲಿ ಸೋಮವಾರ ನಡೆಯಿತು.

ಈ ಸಂದರ್ಭ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ಪ್ರಕರಣವನ್ನು ಕೈಗೆತ್ತಿಗೊಂಡಿರುವ ಸಿಬಿಐ ತಂಡ ಸರಿಯಾಗಿ ತನಿಖೆ ಮಾಡಿಲ್ಲ. ಅಲ್ಲದೆ, ಇದು ತೃಪ್ತಿದಾಯಕವಾಗಿಲ್ಲ ಎಂದು ಹೇಳಿದರು.

ಜಾ.ಅರ್ಶದುಲ್ ಉಲೂಂ ಚಟ್ಟಂಚಾಲ್ ಇದರ ಪ್ರಾಂಶುಪಾಲ ಶೈಖುನಾ ಕೊಡುವಳ್ಳಿ ಉಸ್ತಾದ್ ದುಆಃ ನೆರವೇರಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಸ್ತ ಕೇಂದ್ರ ಮುಶಾವರದ ಉಪಾಧ್ಯಕ್ಷ ಶೈಖುನಾ ಮಿತ್ತಬೈಲ್ ಜಬ್ಬಾರ್ ಉಸ್ತಾದ್ ಸಮ್ಮೇಳನವನ್ನು ಉದ್ಘಾಟಿಸಿದರು. ಕೆ.ಹಸನ್ ಅರ್ಶದಿ ಬಳ್ಳಾರೆ ಪ್ರಾಸ್ತಾವಿಸಿದರು. ಇಬ್ರಾಹಿಂ ಖಲೀಲ್ ಹುದವಿ ಕಾಸರಗೋಡ್ ಹಾಗೂ ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ ಅವರು ಕೇಸ್ ಡೈರಿಯ ತನಿಖಾ ಮಜಲುಗಳ ಬಗ್ಗೆ ವಿಷಯ ಮಂಡಿಸಿದರು. ಉಸ್ತಾದ್ ರಹ್ಮತ್ತುಲ್ಲಾ ಖಾಸಿಮಿ ಮುತ್ತೇಡಂ ಅನುಸ್ಮರಣಾ ಪ್ರಭಾಷಣ ಮಾಡಿದರು. ಬೆಳ್ತಂಗಡಿ ದಾರುಸ್ಸಲಾಂ ಅರಬಿಕ್ ಕಾಲೇಜಿನ ಝೈನುಲ್ ಆಬಿದೀನ್ ಜಿಫ್ರಿ ತಂಙಳ್, ಸು.ಕೆ.ಕೆ ಮಾಣಿಯೂರ್, ಬಿ.ಎಚ್.ಖಾದರ್ ಬಂಟ್ವಾಳ, ಮುಹಮ್ಮದ್ ರಫೀಕ್, ಹನೀಫ್, ಬಿ.ಎಚ್.ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ಉಸ್ತಾದ್ ಉಸ್ಮಾನುಲ್ ಫೈಝಿ, ಖಾಸಿಂ ದಾರಿಮಿ, ಕೆ.ಎಲ್.ಉಮರ್ ದಾರಿಮಿ, ಆದಂ ದಾರಿಮಿ, ಇಬ್ರಾಹಿಂ ಹಾಜಿ, ಅಬೂಬಕರ್ ಹಾಜಿ ಗೋಳ್ತಮಜಲು, ಐ.ಮೊಯ್ದಿನಬ್ಬ, ಮುಹಮ್ಮದ್ ರಫೀಕ್, ಉಸ್ತಾದ್ ಎಸ್.ಬಿ.ಮುಹಮ್ಮದ್ ದಾರಿಮಿ, ಮುಸ್ತಫಾ ಕೆಂಪಿ, ರಫೀಕ್ ಹುದವಿ ಕೋಲಾರ, ಕೆ.ಆರ್.ಹುಸೈನ್ ದಾರಿಮಿ ರೆಂಜಲಾಡಿ, ಅಬೂಬಕರ್ ಸಿದ್ದೀಕ್ ಜಲಾಲಿ, ಇಸ್ಮಾಯಿಲ್ ಯಮಾನಿ ತಿಂಗಳಾಡಿ, ಹುಸೈನ್ ರಹ್ಮಾನಿ, ಉಸ್ಮಾನ್ ದಾರಿಮಿ, ಶಂಸುದ್ದೀನ್ ದಾರಿಮಿ, ಶಾಫಿ ದಾರಿಮಿ ಅಜ್ಜಾವರ, ಅಬ್ದುಲ್ ಹಕೀಂ ಪರ್ತಿಪ್ಪಾಡಿ, ತಾಜುದ್ದೀನ್ ರಹ್ಮಾನಿ, ಸೂಫಿ ಪಡೀಲ್, ರಶೀದ್ ಹಾಜಿ ಪರ್ಲಡ್ಕ, ದಾವೂದ್ ಬಪ್ಪಳಿಗೆ, ಅಶ್ರಫ್, ರಹೀಂ ಕೊಡಾಜೆ, ಹಸೈನಾರ್, ನವಾಝ್ ನೇರಳಕಟ್ಟೆ, ಬಾವಾ ಪದರಂಗಿ, ಶರೀಫ್ ಮೂಸಾ, ಖಲೀಲ್ ಉಪಸ್ಥಿತರಿದ್ದರು. ಅರ್ಶದಿ ಅಸೋಸಿಯೇಷನ್‌ನ ಪದಾಧಿಕಾರಿಗಳಾದ ಅಮೀರ್ ಅರ್ಶದಿ, ನಝೀರ್ ಅರ್ಶದಿ, ಇಸ್ಮಾಯಿಲ್ ಅರ್ಶದಿ, ಶರೀಫ್ ಅರ್ಶದಿ ಹಾಜರಿದ್ದರು. ಸಮ್ಮೇಳನ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕ ಕೆ.ಯು. ಖಲೀಲುರ್ರಹ್ಮಾನ್ ಅರ್ಶದಿ ಕೋಲ್ಪೆ ಸ್ವಾಗತಿಸಿ, ವಂದಿಸಿದರು. ಹಸನ್ ಅರ್ಶದಿ ಬೆಳ್ಳಾರೆ ಸಹಕರಿಸಿದರು. ಸಮ್ಮೇಳಕ್ಕಿಂತ ಮೊದಲು ಅರ್ಶದೀಸ್ ಸಂಗಮ ನಡೆಯಿತು.

ಜಾಹೀರಾತು

 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ