ಬಂಟ್ವಾಳ

21ರಿಂದ 30ವರೆಗೆ ಕರಾವಳಿ ಕಲೋತ್ಸವದಲ್ಲಿ ಚಿಣ್ಣರೋತ್ಸವ, ರಾಜ್ಯಮಟ್ಟದ ನೃತ್ಯಪ್ರದರ್ಶನ, ನಾಟಕೋತ್ಸವ

ಬಂಟ್ವಾಳದ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಆಶ್ರಯದಲ್ಲಿ ಕನ್ನಡ, ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕರಾವಳಿ ಕಲೋತ್ಸವ 2018-19 ಕಾರ್ಯಕ್ರಮಗಳು ಡಿ.21ರಿಂದ 30ರವರೆಗೆ ಬಿ.ಸಿ.ರೋಡಿನ ಜೋಡುಮಾರ್ಗ ಉದ್ಯಾನವನದ ಬಳಿ ಮೈದಾನದಲ್ಲಿ ನಡೆಯಲಿದೆ. ಈ ವಿಷಯವನ್ನು ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ ಜೈನ್ ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಸಂದರ್ಭ ಗೌರವಾಧ್ಯಕ್ಷ ಪಿ.ಜಯರಾಮ ರೈ, ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ ಮುನ್ನೂರು, ಸ್ವಾಗತ ಸಮಿತಿ ಅಧ್ಯಕ್ಷ ಕಾಂತಾಡಿಗುತ್ತು ಸೀತಾರಾಮ ಶೆಟ್ಟಿ, ಸಂಚಾಲಕ ಟಿ.ಶೇಷಪ್ಪ ಮೂಲ್ಯ, ಸಂಯೋಜನಾ ಸಮಿತಿ ಸದಸ್ಯರಾದ ಜಯಾನಂದ ಪೆರಾಜೆ, ಮಧುಸೂಧನ ಶೆಣೈ, ವಿವಿಧ ಸಮಿತಿಗಳ ಪ್ರಮುಖರಾದ ಎಚ್.ಕೆ. ನಯನಾಡು, ಮಹಮ್ಮದ್ ನಂದರಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.

21 ರಿಂದ 23 ರವರೆಗೆ ಚಿಣ್ಣರೋತ್ಸವ ನಡೆಯಲಿದೆ. ರಾಜ್ಯ ಮಟ್ಟದ ನೃತ್ಯಪ್ರದರ್ಶನ ದಶಂಬರ 23 ಮತ್ತು 30 ರಂದು ಸಂಜೆ 4 ರಿಂದ ನಡೆಯಲಿದೆ. 24 ರಿಂದ 29ರವರೆಗೆ ಸಂಜೆ 8 ರಿಂದ ತಾಲೂಕು ಮಟ್ಟದ ನಾಟಕೋತ್ಸವ ಸ್ಪರ್ಧೆ ನಡೆಯಲಿದೆ. ಸಂಜೆ 4 ರಿಂದ ಸಭಾ ಕಾರ್ಯಕ್ರಮ , 6.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಿಸಲಾಗಿದೆ.

ದಶಂಬರ 21 ರಂದು ಬಿ.ಸಿ.ರೋಡಿನ ಅಣ್ಣಪೂರ್ಣೇಶ್ವರಿ ಕಲಾಮಂಟಪದಲ್ಲಿ ಜಾನಪದ ದಿಬ್ಬಣ ಉದ್ಘಾಟನೆಯನ್ನು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ನೆರವೇರಿಸಲಿದ್ದಾರೆ. ಮೆರವಣಿಗೆಯಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳ ಜಾನಪದ ಕಲಾ ತಂಡಗಳು ಭಾಗವಹಿಸಲಿವೆ. ಸಂಜೆ 5.30 ಕ್ಕೆ ಕರಾವಳಿ ಕಲೋತ್ಸವ ಹಾಗೂ ಚಿಣ್ಣರೋತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಡಾ. ಜಯಮಾಲ ಉದ್ಘಾಟಿಸಲಿದ್ದಾರೆ. ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸುವರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಚಿಣ್ಣರ ಚಿತ್ತಾರ ಚಿತ್ರ ಕಲೆ ಪ್ರದರ್ಶನ , ಮಾಜಿ ಸಚಿವ  ಬಿ. ರಮಾನಾಥ ರೈ ಅಮ್ಯೂಸ್ ಮೆಂಟ್ ಪಾರ್ಕ್ , ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಪಂಜೆ ಮಂಗೇಶರಾಯ ಕಲಾವೇದಿಕೆ ಉದ್ಘಾಟಿಸಲಿದ್ದಾರೆ. ಚಿಣ್ಣರೋತ್ಸವ ಅಧ್ಯಕ್ಷ ಅಭಿಷೇಕ್ ಬಿ.ಕೆ ಅಧ್ಯಕ್ಷತೆ ವಹಿಸಲಿದ್ದು , ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ರವಿಕಾಂತ ಗೌಡ , ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ್ ಜೈನ್ ಪಂಜಿಕಲ್ಲು , ವಿಧಾನ ಪರಿಷತ್ತು ಸದಸ್ಯ ಹರೀಶ್ ಕುಮಾರ್ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಮಹಾವೀರ ಅಜ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜೇಶ್ ಜಿ, ಗೋಲ್ಡನ್‌ಪಾರ್ಕ ಎಸೋಸಿಯೇಶನ್ ಆಡಳಿತ ಪಾಲುದಾರ ಅಶೋಕ್ ಕುಮಾರ್ ಬರಿಮಾರು, ನ್ಯಾಯವಾದಿ ಜಯರಾಮ ರೈ ವಿಟ್ಲ ಅತಿಥಿಗಳಾಗಿ ಭಾಗವಹಿಸಲಿದ್ದಾರೆ

ವಿಶೇಷ ಆಹ್ವಾನಿತರು:
ರಾಷ್ಟ ಪ್ರಶಸ್ತಿ ವಿಜೇತೆ ಅದ್ವಿತಾ ಶೆಟ್ಟಿ ,ಸ್ಟಾರ್ ಸುವರ್ಣ ದೀಕ್ಷಾ ಡಿ ರೈ, ಕಾಮಿಡಿ ಕಿಲಾಡಿ ಖ್ಯಾತಿಯ ಸೂರಜ್ ಪಾಂಡೇಶ್ವರ , ಧೀರಜ್ ನೀರುಮಾರ್ಗ, ಚಲನಚಿತ್ರ ನಟರಾದ ದೇವದಾಸ್ ಕಾಪಿಕಾಡು , ವಿನುತಾ ಡಿಸೋಜ, ರೂಪೇಶ್ ಶೆಟ್ಟಿ, ವಿಸ್ಮಯ ವಿನಾಯಕ, ಪಟ್ಲ ಸತೀಶ್ ಶೆಟ್ಟಿ, ಭೋಜರಾಜ ವಾಮಂಜೂರು ,ಅನೂಪ್ ಸಾಗರ್ , ದಿನೇಶ್ ಅತ್ತಾವರ , ಸತೀಶ್ ಬಂದಲೆ, ಅರವಿಂದ ಬೋಳಾರ್, ಪ್ರಕಾಶ್ ಶೆಟ್ಟಿ ಧರ್ಮನಗರ , ಗುರುಕಿರಣ್ , ಬಲೆ ತೆಲಿಪಾಲೆ ಖ್ಯಾತಿಯ ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪ್ರಸನ್ನ ಶೆಟ್ಟಿ ಬೈಲೂರು, ಸ್ಮೈಲ್ ಗರ್ಲ್ ರಶ್ಮಿ ಮೊದಲಾದವರು ಭಾಗವಹಿಸಲಿದ್ದಾರೆ.

ತಾಲೂಕು ಮಟ್ಟದ ನಾಟಕ ಸ್ಫರ್ಧೆ :
ಪ್ರತಿದಿನ ಸಂಜೆ 8ರಿಂದ ನಾಟಕ ಸ್ಪರ್ಧೆ ನಡೆಯಲಿದೆ. 24 ರಂದು ಜಯಭಾರತ ಕಲಾವೃಂದ ಕೊಡ್ಮಾಣ್ ಇವರಿಂದ ನವೀನ್ ಮಾರ್ಲ ಕೊಡ್ಮಾಣ್ ರಚಿಸಿ ನಿರ್ದೇಶಿಸಿರುವ ಮಾಮಿ ಉಲ್ಲೆರಾ, 25 ರಂದು ಕಲಾನಿಧಿ ಕಲಾವಿದೆರ್ ನಾವೂರು ಅಭಿನಯದ ದಿನೇಶ್ ಸಾಲಿಯಾನ್ ರಚಿಸಿ ನಿರ್ದೇಶಿಸಿರುವ ಗುರುವಪ್ಪಗ್ ಗುರುವಾರ, 26 ರಂದು ರಂಗಭೂಮಿ ಬಿ.ಸಿ.ರೋಡು ಅಭಿನಯದ ಅರುಣ್ ಚಂದ್ರ ಬಿ.ಸಿ.ರೋಡು ರಚಿಸಿ ನಿರ್ದೇಶಿಸಿರುವ ಸೇಲೆ ಸುಂದರೆ, 27 ರಂದು ಸ್ನೇಹ ಕಲಾವಿದೆರ್ ಪುಣಚ ಅಭಿನಯದ ರವಿಶಂಕರ ಶಾಸ್ತ್ರಿ ರಚಿಸಿ ನಿರ್ದೇಶಿಸಿರುವ ನಾಟಕ ಕುಡ ಒಂಜಾಕ, 28ರಂದು ಪುಗರ್ತೆ ಕಲಾವಿದೆರ್ ವಿಟ್ಲ ಅಭಿನಯಿಸುವ ಸುರೇಶ್ ಸರಪಾಡಿ ರಚಿಸಿರುವ ರಾಜ ಶೇಖರ ಶೆಟ್ಟಿ ಕುಡ್ತಮುಗೇರ್ ನಿರ್ದೇಶಿಸಿರುವ ಸಚ್ಚುನು ಮೆಚ್ಚೊಡು, 29 ರಂದು ತೆಲಿಕೆದ ಕಲಾವಿದೆರ್ ಕೊಯಿಲ ಅಭಿನಯಿಸುವ ಪುರುಷೋತ್ತಮ ಕೊಯಿಲ ರಚಿಸಿ ನಿದೇಶಿಸಿರುವ ನಿಕುಲ್ ಎನ್ನಿಲೆಕತ್ತ್ ನಾಟಕಗಳು ಪ್ರದರ್ಶನಗೊಳ್ಳಲಿವೆ.

ಸಾಂಸ್ಕೃತಿಕ ಕಾರ್ಯಕ್ರಮ
ಸಾಂಸ್ಖೃತಿಕ ಕಾರ್ಯಕ್ರಮದಲ್ಲಿ ಸಂಜೆ ರಾಜ್ಯ ಹೊರ ರಾಜ್ಯದ ಜಾನಪದ ಕಲಾತಂಡಗಳಿಂದ ಜಾನಪದ ನೃತ್ಯ ಪ್ರದರ್ಶನ ,ಸಂಗೀತ ರಸಮಂಜರಿ ನೃತ್ಯ ಸಂಗಮ , ಗಿರಿಜಾ ಕಲ್ಯಾಣ ಜಾಂಬವತಿ ಕಲ್ಯಾಣ ಯಕ್ಷಗಾನ ಬಯಲಾಟ, ನೃತ್ಯ ರೂಪಕ ತುಳುನಾಡ ಐಸಿರಿ ,ಭರತ ನೃತ್ಯ ವೈಭವ ನಡೆಯಲಿದೆ.

ಸಂಜೆ ಬೆಳ್ಳಿಪರದೆಯಲ್ಲಿ ಚಲನಚಿತ್ರ ತಂಡದಿಂದ ಸಿನಿಮಾ ಲೋಕ ಪ್ರದರ್ಶನಗೊಳ್ಳಲಿದೆ. ಕಂಬಳ ಬೆಟ್ಟು ಭಟ್ರೆನ ಮಗಳ್, ಕಟಪ್ಪಾಡಿ ಕಟ್ಟಪ್ಪ, ದೇಯಿಬೈದೆದಿ, ಪೆನ್ಸಿಲ್ ಬಾಕ್ಸ್ ತಂಡಗಳ ಕಲಾವಿದರು ಭಾಗವಹಿಸಲಿದ್ದಾರೆ.

ದಶಂಬರ್ 30ರಂದು ರಾಜ್ಯ ಮಟ್ಟದ ನೃತ್ಯ ಪ್ರದರ್ಶನ ಅನ್ವೇಷಣೆ ಮತ್ತು ಸಮಾರೋಪ ಸಮಾರಂಭ ಕರಾವಳಿ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಪಂಜಿಕಲ್ಲು ಇವರ ಅದ್ಯಕ್ಷತೆಯಲ್ಲಿ ನಡೆಯಲಿದೆ.

ಮಂಗಳೂರು ಸಂಸದರಾದ ನಳಿನ್ ಕುಮಾರ್ ಕಟೀಲ್ , ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಮ್ ಎನ್ ರಾಜೇಂದ್ರ ಕುಮಾರ್, ಸಹಾಯಕ ಪೋಲಿಸ್ ಅಧೀಕ್ಷಕ ಸೋನವಣೆ ಋಷಿಕೇಶ್ ಭಗವಾನ್ , ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಮಂಗಳೂರು ಮೇಯರ್ ಕೆ. ಭಾಸ್ಕರ ಮೊಯಿಲಿ, ಯಕ್ಷಾಂಗಣ ಕಾಂರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ , ಕೊಟ್ಟಾರಿ ಸಮಾಜದ ಅಧ್ಯಕ್ಷ ಬಾಲಕೃಷ್ಣ ಕೊಟ್ಟಾರಿ ಅತ್ತಾವರ, ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಲೆಕ್ಕಪರಿಶೋಧಕ ಸಿ.ಎ ಯತೀಶ್ ಭಂಡಾರಿ , ಚಿಣ್ಣರ ಲೋಕ ಗೌರವಾಧ್ಯಕ್ಷ ಪಿ. ಜಯರಾಮ ರೈ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ವಿವಿಧ ಸಮಿತಿಗಳ ರಚನೆ
ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಂಟ್ವಾಳ ಇದರ ಸ್ಥಾಪಕ ಅಧ್ಯಕ್ಷ ಮೋಹನದಾಸ ಕೊಟ್ಟಾರಿ ಕಲೋತ್ಸವದ ಪ್ರಧಾನ ಸಂಚಾಲಕರಾಗಿರುತ್ತಾರೆ. ಕಲೋತ್ಸವ ಸಮಿತಿ ಅಧ್ಯಕ್ಷರಾಗಿ ಸುದರ್ಶನ್ ಜೈನ್ ಹಾಗೂ ಚಿಣ್ಣರ ಅಧ್ಯಕ್ಷ ಅಭಿಷೇಕ್ ಬಿ.ಕೆ. ಇವರ ಮಾರ್ಗದರ್ಶನದಲ್ಲಿ ವಿವಿಧ ಕಾರ್ಯಕ್ರಮ ಹಾಗೂ ಸಮಿತಿಗಳನ್ನು ರಚಿಸಲಾಗಿದೆ.
ಗೌರವಾಧ್ಯಕ್ಷರಾಗಿ ಜಯರಾಮರೈ ವಿಟ್ಲ , ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕಾಂತಾಡಿ ಗುತ್ತು ಸೀತಾರಾಮಶೆಟ್ಟಿ , ಉಪಾಧ್ಯಕ್ಷರಾಗಿ ರಿಯಾಝ್ ಹುಸೇನ್ ಬಂಟ್ವಾಳ, ಸಂಚಾಲಕರಾಗಿ ಟಿ.ಶೇಷಪ್ಪ ಮೂಲ್ಯ, ಹಾಗೂ 9 ಮಂದಿ ಗೌರವ ಸಲಹೆಗಾರರು, 9 ಮಂದಿ ನಿರ್ದೇಶಕರು, ಮಂದಿ ಸಂಯೋಜನಾ ಸಮಿತಿ, 9 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರು ನಿಯೋಜನೆ ಗೊಂಡಿರುತ್ತಾರೆ.

ಸ್ವಾಗತ ಸಮಿತಿ
ಸ್ವಾಗತ ಸಮಿತಿ ಸಂಚಾಲಕರಾಗಿ ಎಂ. ಪರಮೇಶ್ವರ ಮೂಲ್ಯ, ಸಹಸಂಚಾಲಕರಾಗಿ ಬಿ.ದೇವದಾಸ ಶೆಟ್ಟಿ ಬಂಟ್ವಾಳ, ಊಟ ಉಪಚಾರ ಸಮಿತಿ ಸಂಚಾಲಕರಾಗಿ ಸದಾನಂದ ಶೆಟ್ಟಿ ಪಂಜಿಕಲ್ಲು ಸಹಸಂಚಾಲಕರಾಗಿ ದಿನೇಶ್ ಶೆಟ್ಟಿ ಬುಡೋಳಿ , ಸೋಮಪ್ಪ ಮಡಿವಾಳ ರಾಯಿ, ಆರ್ಥಿಕ ಸಮಿತಿ ಸಂಚಾಲಕರಾಗಿ ಪ್ರಕಾಶ್ ಶೆಟ್ಟಿ, ಶ್ರೀ ಶೈಲ ತುಂಬೆ, ಸಹಸಂಚಾಲಕರಾಗಿ ಸಂಪತ್ ಕುಮಾರ್ ಮುಂಡ್ರೇಲ್ ಗುತ್ತು , ಮಾತೃ ಸಮಿತಿ ಸಂಚಾಲಕರಾಗಿ ಚೇತನಾ ದೇವಪ್ಪ ಸಹಸಂಚಾಲಕರಾಗಿ ರೂಪಲತಾ ತೀರ್ಥಪ್ರಸಾದ್ ಅನಂತಾಡಿ, ವ್ಯವಸ್ಥಾಪನಾ ಸಮಿತಿ ಸಂಚಾಲಕರಾಗಿ ದಿನೇಶ್ ಕೊಟ್ಟಾರಿ ಪರಂಗಿಪೇಟೆ ಸಹಸಂಚಾಲಕರಾಗಿ ನಾರಾಯಣ ಸಿ ಪೆರ್ನೆ, ವೇದಿಕೆ ಸಮಿತಿ ಸಂಚಾಲಕರಾಗಿ ಸುರೇಶ್ ಪೂಜಾರಿ, ದೇವಪ್ಪ ಕುಲಾಲ್ ಪಂಜಿಕಲ್ಲು , ಸಹಕಾರ ಸಮಿತಿ ಸಂಚಾಲಕರಾಗಿ ಉದಯ ಎಮ್ ಪೆರುವಾಯಿ, ಸಂಜೀವ ಪೂಜಾರಿ, ಅತಿಥಿಸತ್ಕಾರ ಸಮಿತಿ ಸಂಚಾಲಕರಾಗಿ ಪ್ರಭಾಕರ ಪ್ರಭು, ಸಹಸಂಚಾಲಕರಾಗಿ ಜಯರಾಮ ಎಂ ಪೂಜಾರಿ, ಸ್ವಯಂಸೇವಕ ಸಮಿತಿ ಸಂಚಾಲಕರಾಗಿ ಸುರೇಶ್ ಪೂಜಾರಿ ಪಂಜಿಕಲ್ಲು, ಸಹಸಂಚಾಲಕರಾಗಿ ಬಾಲಕೃಷ್ಣ ಕೊಟ್ಟಾರಿ ಬಂಟ್ವಾಳ , ಸನ್ಮಾನ ಸಮಿತಿ ಅಧ್ಯಕ್ಷರಾಗಿ ಗೋಪಾಲ ಅಂಚನ್ ಆಲದಪದವು, ಸಹಸಂಚಾಲಕರಾಗಿ ಮೌನೇಶ್ ಮಲ್ಯ, ಹರೀಶ್ ಶೆಣೈ, ಮೆರವಣಿಗೆ ಸಮಿತಿ ಸಂಚಾಲಕರಾಗಿ ಕೇಶವ ಕುಲಾಲ್ ಪಿಲಿಂಜ ಸಹಸಂಚಾಲಕರಾಗಿ ಮಾಧವ ಕುಲಾಲ್ ಬಿ.ಸಿ.ರೊಡು, ಮನೋಜ್ ಮರ್ದೊಳಿ, ಜೀವನ್ ರೆಂಗೇಲ್ ಹಾಗೂ ನೃತ್ಯ ಸ್ಪರ್ಧೆಯ ಸಂಚಾಲಕರಾಗಿ ಪ್ರವೀಣ್ ಮೊಡಂಕಾಪು,ಅಭಿಲಾಷ್ ಕುಲಾಲ್ ಬೋಳಂತೂರು ,ನಾಟಕ ಸ್ಪರ್ಧೆ ಸಂಚಾಲಕರಾಗಿ ರಾಜೇಶ್ ಕೊಟ್ಟಾರಿ ಕಲ್ಲಡ್ಕ ,ವಿಶ್ವನಾಥ ಕುಕ್ಕೆ ಮಜಲು ಅಯ್ಕೆ ಆಗಿರುತ್ತಾರೆ.

ಚಿಣ್ಣರಲೋಕ
ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ರಿ ಬಂಟ್ವಾಳ ಇದು ಕರ್ನಾಟಕ ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತವಾಗಿದ್ದು ಯಕ್ಷಗಾನ , ಭರತನಾಟ್ಯ, ಸಂಗೀತ , ಜಾನಪದ ನೃತ್ಯ, ಚಿತ್ರಕಲೆ ತರಬೇತಿ ಕೇಂದ್ರಗಳನ್ನು ಜಿಲ್ಲೆಯಾದ್ಯಂತ ನಡೆಸುತ್ತಿದೆ.

ಹಲವಾರು ವರ್ಷಗಳಿಂದ ಹೊಸ ಯುವ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತಿದ್ದು ವಿವಿಧ ವೇದಿಕೆಗಳನ್ನು ಒದಗಿಸುತ್ತಿದೆ. ಚಿಣ್ಣರೋತ್ಸವ ಕಾರ್ಯಕ್ರಮವನ್ನುನಡೆಸುತ್ತಾ ಬರುತ್ತಿದೆ. ಹಲವು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಹಾಗೂ ವೇದಿಕೆಗಳನ್ನು ಒದಗಿಸುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ತಾಲೂಕು ಮಟ್ಟದ ನಾಟಕ ಸ್ಪರ್ಧೆಗಳನ್ನು ಏರ್ಪಡಿಸುತ್ತಾ ಬಂದಿದ್ದು ವಿವಿಧ ಕಲಾವಿದರನ್ನು ಸನ್ಮಾನಿಸುತ್ತಿದೆ.
2018 ರಲ್ಲಿ 4ನೇವರ್ಷದ ತಾಲೂಕು ಮಟ್ಟದ ತುಳುನಾಕ ಸ್ಪಧ ಜಿಲ್ಲಾ ಮಟ್ಟದ ಚೆಂಡೆ ವಾದನ ಸ್ಪರ್ಧೆ ರಾಜ್ಯ ಮಟ್ಟದ ನೃತ್ಯ ಪ್ರದರ್ಶನ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ. ಪ್ರಥಮ ಬಹುಮಾನ 20 ಸಾವಿರ ರೂ ದ್ವಿತೀಯ ಬಹುಮಾನ ರೂ.15 ಸಾವಿರ ತೃತೀಯ ಬಹುಮಾನ ರೂ.10 ಸಾವಿರ ನಿಗದಿ ಪಡಿಸಲಾಗಿದೆ.

ಕರಾವಳಿ ಕಲೋತ್ಸವ ೨೦೧೮
ಕಲೋತ್ಸವನ್ನು ವೈವಿಧಪೂರ್ಣವಾಗಿ ಸಂಘಟಿಸಲಾಗಿದೆ. ಬಿ.ಸಿ.ರೋಡಿನ ಗಾಣದ ಪಡ್ಪು ಮೈದಾನದಲ್ಲಿ ೨೧ ರಿಂದ ೩೦ ರವರೆಗೆ ಸಭಾ ಕಾರ್ಯಕ್ರಮ ,ಮನರಂಜನೆ ಹಾಗೂ ನೂರಕ್ಕೂ ಹೆಚ್ಚು ವಸ್ತು ಪ್ರದರ್ಶನ ಮಾರಾಟ ಮಳಿಗೆಗಳು ಭಾಗವಹಿಸಲಿವೆ. ಮನೋರಂಜನೆಗಾಗಿ ಬೃಹತ್ ಜೇಂಟ್ ವೀಲ್ , ಬ್ರೇಕ್ ಡಾನ್ಸ್ , ಡ್ಯ್ರಾಗನ್ ಟ್ರೈನ್, ಕೋಲಂಬಸ್ , ಪುಟಾಣಿ ರೈಲು, ಬೌನ್ಸಿ, ನವಿಲು, ದೂಮ್ ಬೈಕ್, ಮಿನಿ ಜೀಪ್, ಬೈಕ್ ಕ್ರಾಸ್ ವೀಲ್ ಮುಂತಾದ ಆಟೋಪಕರಣಗಳು ಆಕರ್ಷಣೇಯಾಗಿವೆ. ಗೃಹಪಯೋಗಿ ವಸ್ತುಗಳು,ಗೃಹಿಣಿಯರ ಅಲಂಕಾರ ಆಭರಣಗಳು ಮಕ್ಕಳ ಆಟಿಕೆ ಸಾಮಾನುಗಳು ,ವಿವಿಧ ಮಾರಾಟ ಮಳಿಗೆಗಳು ಕಲೋತ್ಸವದಲ್ಲಿ ಭಾಗವಹಿಸಲಿವೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts