ಎರಡನೇ ಶನಿವಾರ ಸರಕಾರಿ ಕಚೇರಿಗಳಿಗೆ ರಜೆ. ಆದರೆ ಬಂಟ್ವಾಳ ಮಿನಿ ವಿಧಾನ ಸೌಧದಲ್ಲಿ ಸಿಬಂದಿ ಸ್ವಚ್ಛತಾ ಕಾರ್ಯ ನಡೆಸಿದರು. ಪೊರಕೆ, ಬಕೆಟ್, ಮೋಪ್ ಹಿಡಿದು ಕಚೇರಿ ವಠಾರ ಶುಚಿಗೊಳಿಸಿದರು.
ತಾಲೂಕು ಕಚೇರಿಯ ಅಧಿಕಾರಿ– ಸಿಬ್ಬಂದಿಗಳೆಂಬ ಬೇಧ ಇಲ್ಲದೇ ಸಮಾನ ಮನಸ್ಕರಾಗಿ ಸ್ವಚ್ಚತಾ ಕೆಲಸದಲ್ಲಿ ತೊಡಗಿದರು. ತಾಲೂಕು ಉಪತಹಶೀಲ್ದಾರ್ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಆಡಳಿತ ಶಾಖೆ, ಚುನಾವಣಾ ಶಾಖೆ, ಆಹಾರ ಶಾಖೆ, ಭೂ ಸುಧಾರಣೆ ಶಾಖೆ, ನಾಡಕಚೇರಿ ಮತ್ತಿತರ ವಿಭಾಗಗಳ ನೌಕರರು ಸ್ವಚ್ಚತಾ ಕಾರ್ಯ ನಿರ್ವಹಿಸಿದರು. ಅಧಿಕಾರಿಗಳು ಹಾಗೂ ನೌಕರರ ಈ ಸ್ವಚ್ಚತಾ ಆಂದೋಲನಕ್ಕೆ ತಹಶೀಲ್ದಾರ್ ಪುರಂದರ ಹೆಗ್ಡೆ ಮೆಚ್ಚುಗೆ ವ್ಯಕ್ತಪಡಿಸಿ, ಇದೊಂದು ಮಾದರಿ ಕಾರ್ಯಕ್ರಮ. ಎಲ್ಲಾ ಇಲಾಖಾ ಇಲಾಖಾ ಕಚೇರಿಗಳಲ್ಲಿ ಸ್ವಚ್ಚತಾ ಕಾರ್ಯ ನಡೆಯಬೇಕೆಂದು ಕರೆ ನೀಡಿದರು.