ಕವರ್ ಸ್ಟೋರಿ

ಬದುಕಿನ ಪುಟಗಳ ಬದಲಿಸಬಹುದಾದ ‘ಅರಿವು’ – ಮಂಗಳೂರಲ್ಲಿದೆ ಮಾರ್ಗದರ್ಶಿ ಟೀಮ್

www.bantwalnews.comಸಂಪಾದಕ: ಹರೀಶ ಮಾಂಬಾಡಿ

ಆಟಿಸಂ, ಓದಲು ಬರೆಯಲು ಏಕಾಗ್ರತೆ ದೊರಕದೇ ಇರುವುದು, ಮಾನಸಿಕ, ದೈಹಿಕ ಬೆಳವಣಿಗೆಯ ಸಮಸ್ಯೆ.. ಹೀಗೆ ವ್ಯಕ್ತಿ ಬೆಳವಣಿಗೆ ಹಂತದಲ್ಲಿ ಹತ್ತಾರು ತೊಡಕುಗಳು ದೊರಕುವುದು ಸಹಜ.

ಜಾಹೀರಾತು

ಮಕ್ಕಳು ಮಾಡಿದ ಹಣತೆ, ಒಳಗೆ ಬಣ್ಣದ ಚಿತ್ತಾರ.

ಚಿತ್ರಗಳಲ್ಲಿ, ಲೇಖನಗಳು, ವಿಡಿಯೋಗಳಲ್ಲಿ ಇಂಥ ವಿಚಾರಗಳನ್ನು ವೀಕ್ಷಿಸುವಾಗ ‘ಛೇ’ ಎನ್ನುತ್ತೇವೆ. ಆದರೆ ನಮ್ಮ ಕಣ್ಣೆದುರೇ ಇರುವ ಮಕ್ಕಳಲ್ಲೇ ಇಂಥ ಸಮಸ್ಯೆ ತಲೆದೋರಿದರೆ?

ಆಟ, ಪಾಠಗಳೊಂದಿಗೆ ಕಲಿಕೆ. ಇದು ಅರಿವಿನ ವಿನ್ಯಾಸ.

ಮಂಗಳೂರಿನ ಶಕ್ತಿನಗರದಲ್ಲೀಗ ನೆಲೆಸಿರುವ ಡಾ.ರಾಧಾಕೃಷ್ಣ ಭಟ್ ಮತ್ತು ಪೂರ್ಣಿಮಾ ಭಟ್ ದಂಪತಿಯೂ ಹಾಗೇ ಯೋಚಿಸಿದರು. ತಮ್ಮ ಪುತ್ರ ಎಲ್ಲ ಮಕ್ಕಳಂತಿಲ್ಲ ಎಂದು ಗೊತ್ತಾದಾಗ ಆತನನ್ನು ಬೆಳೆಸಲು ಪಟ್ಟ ಕಷ್ಟ ಇತರ ಹೆತ್ತವರಿಗೂ ಬಾರದೇ ಇರಲಿ ಎಂದು ಯೋಚಿಸಿ ಹುಟ್ಟುಹಾಕಿದ ಸಂಸ್ಥೆಯೇ ಅರಿವು.

ಹೈದರಾಬಾದ್ ಡಿಫೆನ್ಸ್ ಮೆಟಲರ್ಜಿಕಲ್ ರೀಸರ್ಚ್ ಲ್ಯಾಬೊರೇಟರಿಯಲ್ಲಿ 17 ವರ್ಷ ವಿಜ್ಞಾನಿಯಾಗಿ ಮತ್ತು ಅಮೇರಿಕಾದ ಪಾಟರ್ಸನ್ ಏರ್ಫೋರ್ಸ್ ಬೇಸ್ ನಲ್ಲಿ 5 ವರ್ಷ,  ಜಿಇ ಗ್ಲೋಬಲ್ ರಿಸರ್ಚ್ ಸೆಂಟರ್ ನಲ್ಲಿ 6 ವರ್ಷ ವಿಜ್ಞಾನಿಯಾಗಿದ್ದವರು ಡಾ. ರಾಧಾಕೃಷ್ಣ ಭಟ್. ಇವರು ಚೆನ್ನೈನ ಐಐಟಿಯಲ್ಲಿ ಮೆಟಲರ್ಜಿ ವಿಭಾಗದಲ್ಲಿ ಪಿ.ಎಚ್.ಡಿ. ಪದವೀಧರರು.  ಇವರ ಪತ್ನಿ ಪೂರ್ಣಿಮಾ ಭಟ್ ಎಲೆಕ್ಟ್ರಾನಿಕ್ಸ್ ನಲ್ಲಿ ಪದವಿ ಪೂರೈಸಿ, ಅಮೇರಿಕಾದ ರೈಟ್ ಸ್ಟೇಟ್ ವಿವಿಯಲ್ಲಿ ಎಂ.ಎಸ್. ಪದವಿಗಳಿಸಿದವರು. ಭಾರತಕ್ಕೆ ಮರಳಿ ಮಂಗಳೂರಿನಲ್ಲಿ ನೆಲೆಸಿದ ಈ ದಂಪತಿ ಆರಂಭಿಸಿದ್ದೇ ‘ಅರಿವು’

ಜಾಹೀರಾತು

2015 ಜುಲೈನಲ್ಲಿ ಅರಿವು ಟ್ರಸ್ಟ್ ಆರಂಭಗೊಂಡಾಗ ಅದರ ಧ್ಯೇಯೋದ್ದೇಶಗಳು ಇದ್ದದ್ದು ಇವು. ಮಕ್ಕಳಲ್ಲಿರುವ ನ್ಯೂನತೆಗಳನ್ನು ಕಡಿಮೆಗೊಳಿಸಿ, ಅವರು ತಮ್ಮ ಕಾಲ ಮೇಲೆ ನಿಲ್ಲುವಂತೆ ಮಾಡಲು ಪೋಷಕರೊಂದಿಗೆ ಸಹಾಯ ಮಾಡುವುದು. ಇದಕ್ಕೆ ಬೇಕಾದ ಥೆರಪಿಗಳು, ವಿಧವಿಧದ ಶಿಕ್ಷಣ ಕ್ರಮಗಳನ್ನು ಅಳವಡಿಸುವುದು. ಪೋಷಕರ ಸಹಭಾಗಿತ್ವದಲ್ಲಿ ಮನೆಯ ವಾತಾವರಣದಲ್ಲೇ ಮಕ್ಕಳಿಗೆ ಶಾಲೆಗೆ ಹೋಗುತ್ತಿದ್ದೇವೆ ಎಂದು ಭಾಸವಾಗದಂತೆ ಕಲಿಕಾ ವಾತಾವರಣ ನಿರ್ಮಿಸುವುದು.

ಡಾ. ಕೆ.ಎಸ್.ಸುಂದರ ಭಟ್ ಅಧ್ಯಕ್ಷರಾಗಿರುವ ಅರಿವು ಟ್ರಸ್ಟ್ ಸ್ಥಾಪಕ ನಿರ್ದೇಶಕಿಯಾಗಿ ಪೂರ್ಣಿಮಾ ಭಟ್ ಕೆಲಸ ಮಾಡುತ್ತಿದ್ದರೆ, ರಾಧಾಕೃಷ್ಣ ಭಟ್ ಕಾರ್ಯದರ್ಶಿಯಾಗಿದ್ದಾರೆ.

ಜಾಹೀರಾತು

ಏನು ಅರಿವು?

ನ್ಯೂಯಾರ್ಕ್ ಹೆಡ್ ಸ್ಟಾರ್ಟ್ ಕಾರ್ಯಕ್ರಮದ ಮಾದರಿಯನ್ನಾಗಿಟ್ಟುಕೊಂಡು ವಿಶೇಷ ಮಕ್ಕಳಾದ ಆಟಿಸಂ, ಕಲಿಯುವ ಸಾಮರ್ಥ್ಯವನ್ನು ಹೊಂದಿರದೇ ಇರುವವರು, ಸೆರೆಬ್ರಲ್ ಪಾಲ್ಸಿ, ಮಾನಸಿಕ ಸಮಸ್ಯೆಗಳು ಮತ್ತು ಇತರ ತೊಂದರೆಗಳನ್ನು ಹೊಂದಿರುವ 6 ವರ್ಷದಿಂದ 12 ವರ್ಷದೊಳಗಿನ ಮಕ್ಕಳಿಗೆ ಅವರಿಗೆ ಅಗತ್ಯವಿರುವ ಥೆರಪಿಗಳು ಮತ್ತು ಗುಂಪು ಕಲಿಕೆಗಳನ್ನು ಒದಗಿಸುವುದು ಇದರಲ್ಲಿದೆ. ನೃತ್ಯ, ಹಾಡು ಹಾಗೂ ಆಟದ ಜತೆಗೇ ಪಾಠ ಇಲ್ಲಿರುವ ಕಾರಣ ಶಾಲೆಯ ವಾತಾವರಣಕ್ಕಿಂತ ಮನೆಯಲ್ಲೇ ಶಾಲೆಯನ್ನು ಹಾಗೂ ಅವರಿಗೆ ಪೂರಕವಾದ ಬೆಳವಣಿಗೆಯ ಅಂಶಗಳನ್ನು ಮಕ್ಕಳಿಗೆ ಒದಗಿಸುವುದು ಇಲ್ಲಿದೆ. ಮೆದುಳಿನ ವಿಕಾಸಕ್ಕೆಬೇಕಾದ ಕಲಿಕಾ ಮಾದರಿಗಳನ್ನು ಇಲ್ಲಿ ನೀಡಲಾಗುತ್ತದೆ.

ಜಾಹೀರಾತು

ಸಾಮಾನ್ಯವಾಗಿ ಶಾಲೆಗಳಿಗೆ ತೆರಳುವ ಮಕ್ಕಳು ಕಲಿಕೆಯಲ್ಲಿ ಉಳಿದವರಿಗಿಂತ ಹಿಂದುಳಿಯುತ್ತಾರೆ ಎಂದು ಭಾಸವಾದರೆ ಅವರಿಗೆ ವಿಶೇಷ ತರಬೇತಿ ಅಗತ್ಯವಿರುತ್ತದೆ. ಅರಿವು ಇದನ್ನು ಮಾಡುತ್ತದೆ. ಎಡಿಎಚ್ ಡಿ ಸಮಸ್ಯೆಯನ್ನು ಹೊಂದಿರುವ ಮಕ್ಕಳಿಗೆ ಇದು ಉಪಯೋಗಕಾರಿ. ಮಂಗಳೂರು ಸುತ್ತಮುತ್ತಲಿನ ಮಕ್ಕಳು ಸಂಸ್ಥೆಗೆ ಆಗಮಿಸಲು ಬೇಕಾದ ವಾಹನ ವ್ಯವಸ್ಥೆಯನ್ನು ಹೊಂದಿರುವ ಇಲ್ಲಿ ಸಮರ್ಥ ಶಿಕ್ಷಕಿಯರೂ ಇದ್ದಾರೆ. ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಮನೆಯ ವಾತಾವರಣದಲ್ಲೇ ಕಲಿಕಾ ತರಬೇತಿಯನ್ನು ಒದಗಿಸುವ ವಿಧಾನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿರಳ. ಮಂಗಳೂರಿನಲ್ಲಿ ಇದು ಹೊಸ ಪ್ರಯೋಗ. ತಮ್ಮ ಸಮಯವನ್ನು ಮಕ್ಕಳಿಗಾಗಿ ಮೀಸಲಿಡುವ ದಂಪತಿಯ ಕಾರ್ಯವನ್ನು ಸ್ಥಳೀಯ ಸಂಸ್ಥೆಗಳು ಗೌರವಿಸಿವೆ. ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿ ಸೇವೆ ಮಾಡುವ ಇಂಥ ಸರಕಾರೇತರ ಸಂಸ್ಥೆಗಳನ್ನು ಗುರುತಿಸುವ ಜವಾಬ್ದಾರಿ ಇಲಾಖೆಗೆ ಇದೆ.

ಹೆಚ್ಚಿನ ವಿವರಗಳಿಗೆ ಕ್ಲಿಕ್ ಮಾಡಿರಿ: http://arivutrust.org/

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ