ಪೆರಾಜೆ ವಿಷ್ಣುಮೂರ್ತಿ ದೇವಸ್ಥಾನ ದ ಜೀರ್ಣೋದ್ಧಾರ ಬಗ್ಗೆ ಪೂರ್ವಭಾವಿ ಸಬೆ ದೇವಸ್ಥಾನದ ವಠಾರದಲ್ಲಿ ನಡೆಯಿತು. ಈ ದೇವಾಲಯ ಸುಮಾರು 500 ವರ್ಷಗಳ ಹಿಂದಿನದ್ದಾಗಿದ್ದು ಕೆಲವು ವರ್ಷಗಳ ಹಿಂದೆ ದೇವರ ಗರ್ಭಗುಡಿ, ತೀರ್ಥಮಂಟಪವು ಊರ, ಪರವೂರ ಭಗವಧ್ಬಕ್ತರ ನೆರವು, ಶ್ರಮದೊಂದಿಗೆ ಪುನರುಜ್ಜೀವನಗೊಂಡು ಬ್ರಹ್ಮಕಲಶ ನಡೆದಿತ್ತು. ಪ್ರಸ್ತುತ ದೇವಾಲಯದ ಸುತ್ತುಗೋಪುರ, ಭೋಜನಾಲಯ, ಅರ್ಚಕರ ಮನೆ ಆಗಬೇಕಿದ್ದು ಈ ನಿಟ್ಟಿನಲ್ಲಿ ಪೆರಾಜೆ ಗ್ರಾಮಸ್ಥರ ಸಲಹೆ ಸೂಚನೆಗಳನ್ನು, ಸಹಕಾರಗಳನ್ನು ಪಡೆಯಲು ಸಭೆ ನಡೆಯಿತು . ವಿಷ್ಣುಮೂರ್ತಿ ದೇವಸ್ಥಾನ ದ ಆಡಳಿತ ಸಮಿತಿಯ ಆಧ್ಯಕ್ಷರಾದ ಅಪ್ರಾಯ ಪೈ, ಕೋಶಾಧಿಕಾರಿ ಡಾ.ಶ್ರೀನಾಥ್ ಆಳ್ವ, ಉಪಾಧ್ಯಕ್ಷ ಕುಶಾಲ ಯಂ.ಪೆರಾಜೆ, ಕಾರ್ಯದರ್ಶಿ ಜನಾರ್ದನ ಪೆರಾಜೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಂದರ ಬಂಗೇರ, ರಾಮಣ್ಣ ಗೌಡ, ಚಂದ್ರಹಾಸ ಶೆಟ್ಟಿ ಹಿರಿಯರಾದ ಮೋಹನದಾಸ್ ಹೆಗ್ಡೆ, ಬಿ.ಟಿ.ನಾರಾಯಣ ಭಟ್, ಶ್ರೀಕಾಂತ್ ಆಳ್ವ ಪೆರಾಜೆ ಗುತ್ತು, ಜಯರಾಮ ರೈ ಪಂಚಾಯತ್ ಅದ್ಯಕ್ಷ ರಾದ ಪುಷ್ಪ, ಪಂಚಾಯತ್ ಸದಸ್ಯರಾದ ತಿಮ್ಮಪ್ಪ ಗೌಡ, ಉಮೇಶ್ ಎಸ್ ಮತ್ತಿತರರು ಉಪಸ್ಥಿತರಿದ್ದರು.