ಬಂಟ್ವಾಳ

ಲೊರೆಟ್ಟೋ ಮಾತಾ ಚರ್ಚ್ ನಲ್ಲಿ ವಾರ್ಷಿಕ ಹಬ್ಬ

ಬಂಟ್ವಾಳ ತಾಲೂಕಿನ ಲೊರೆಟ್ಟೋ ಮಾತಾ ಚರ್ಚ್ ನಲ್ಲಿ ವಾರ್ಷಿಕ ಹಬ್ಬವನ್ನು ಭಾನುವಾರ ಆಚರಿಸಲಾಯಿತು. ಪ್ರಧಾನ ಧರ್ಮಗುರುಗಳಾಗಿ ಬಂಟ್ವಾಳ ವಲಯ ಹಾಗೂ ಮೊಡಂಕಾಪು ಚರ್ಚ್ ನ ಧರ್ಮ ಗುರುಗಳಾದ ವಂ. ವಾಲ್ಟರ್ ಡಿಮೆಲ್ಲೊ ದಿವ್ಯ ಬಲಿ ಪೂಜೆಯನ್ನು  ನೆರವೇರಿಸಿದರು.

ಜಾಹೀರಾತು

ಲೋರೆಟ್ಟೊ ಚರ್ಚ್ ನ ಧರ್ಮಗುರುಗಳಾದ ವಂ.ಎಲಿಯಸ್ ಡಿಸೋಜಾ, ಫರಂಗಿಪೇಟೆ ಕಾಪುಚಿನ್ ಧರ್ಮಗುರುಗಳಾದ ವಂ.ಜೆರಾಲ್ಡ್ ಲೋಬೊ,ಆಗ್ರಾರ್ ಚರ್ಚ್ ನ ಧರ್ಮಗುರುಗಳು, ಬಾಂಬಿಲ್ ಚರ್ಚ್ ನ ಧರ್ಮಗುರುಗಳು ಹಾಗೂ ವಲಯದ ಧರ್ಮಗುರುಗಳು ಬಲಿಪುಜೆಯಲ್ಲಿ ಪಾಲ್ಗೊಂಡರು.

ಜಾಹೀರಾತು

ವಾರ್ಷಿಕ ಸಂಭ್ರಮಕ್ಕೆ ಸಹಕರಿಸಿದ ಧಾನಿಗಳಿಗೆ ಗೌರವಪೂರ್ವಕ ವಾಗಿ ಅಲಂಕರಿಸಿದ ಮೇಣದ ಬತ್ತಿಗಳನ್ನು ವಿತರಿಸಲಾಯಿತು. ನವೆಂಬರ್ 29 ರಿಂದ ಡಿಸೆಂಬರ್1 ರ ವರೆಗೆ 3 ದಿವಸಗಳ ನೋವೇನಾ ಬಲಿಪುಜೆಯಲ್ಲಿ ನೂರಾರು ಭಕ್ತರು ಮೇಣದ ಬತ್ತಿಗಳನ್ನು ಉರಿಸಿ ಪಾಲ್ಗೊಂಡಿದ್ದರು. ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಊರ ಪರವೂರ  ಭಕ್ತರು ಪಾಲ್ಗೊಂಡರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ