ಬಂಟ್ವಾಳ

ಬಂಟ್ವಾಳ ತಾಲೂಕಿನಲ್ಲಿ ಈದ್ – ಮಿಲಾದ್

ಬಂಟ್ವಾಳ ತಾಲೂಕಿನ ನಾನಾ ಭಾಗಗಳಲ್ಲಿ ಮಂಗಳವಾರ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ಅವರ ಜನ್ಮ ದಿನಾಚರಣೆ ಈದ್-ಮಿಲಾದ್ ಕಾರ್ಯಕ್ರಮವನ್ನು ಆಚರಿಸಲಾಯಿತು. ಬಾಳೆಪುಣಿಯಲ್ಲಿ ಹಿಂದು ಬಾಂಧವರು ತಂಪು ಪಾನೀಯ ನೀಡಿ ಮೆರವಣಿಗೆಯನ್ನು ಸ್ವಾಗತಿಸಿ, ಕೋಮು ಸೌಹಾರ್ದ ಮೆರೆದರು.

ಬಾಳೆಪುಣಿ


ಇರಾ ಗ್ರಾಮದ ಬಾಳೆಪುಣಿ ಮಸೀದಿಯಲ್ಲಿ ಪುಣ್ಯ ಪ್ರವಾದಿ ಮಹಮ್ಮದ್ ಮುಸ್ತಪಾ ( ಸ ಅ ) ರವರ ಜನ್ಮದಿನವನ್ನು ಮಸೀದಿಯ ಗುರುವರ್ಯರಾದ ಅಲಿ ಪೈಝಿ ಅವರ ದುಆ ದೊಂದಿಗೆ ಆಚರಿಸಲಾಯಿತು ಇದೇ ಸಂದರ್ಭದಲ್ಲಿ ಮದ್ರಸಾ ವಿದ್ಯಾರ್ಥಿಗಳ ಮತ್ತು ಊರವರು ಪ್ರವಾದಿಯವರ ಮೇಲೆ ಸಲಾತ್ ಮತ್ತು ಸಲಾಮ್ ಹೇಳುವ ಮೂಲಕ ಮೆರವಣಿಗೆ ನಡೆಸಿದರು ಈ ಸಂದರ್ಭದಲ್ಲಿ ಪಕ್ಕದ ಊರಿನ ಹಿಂದೂ ಧರ್ಮದ ಜನರು ಸಿಹಿ ತಿಂಡಿಗಳು ಮತ್ತು ತಂಪು ಪಾನೀಯಗಳನ್ನು ನೀಡಿ ಮೆರವಣಿಗೆಯನ್ನು ಸ್ವಾಗತಿಸಿ ಈಗಿನ ಕಾಲದಲ್ಲಿ ಕೋಮು ಸಾಮರಸ್ಯ ಮೂಡಿಸಲು ಪ್ರಯತ್ನಿಸುವ ಜನರಿಗೆ ಸೌಹಾರ್ದತೆಯನ್ನು ತೋರಿಸಿದರು

ಆಲಡ್ಕ :


ಪಾಣೆಮಂಗಳೂರು ಸಮೀಪದ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ವತಿಯಿಂದ ಈದ್ ಮಿಲಾದ್ ಮೆರವಣಿಗೆಯನ್ನು ಮಸೀದಿ ಮುದರ್ರಿಸ್ ಹಾಜಿ ಬಿ.ಎಚ್. ಅಬೂಸ್ವಾಲಿಹ್ ಮುಸ್ಲಿಯಾರ್ ಉದ್ಘಾಟಿಸಿದರು. ಮಸೀದಿ ಅಧ್ಯಕ್ಷ ಅಬೂಬಕ್ಕರ್ ತ್ರೀಮೆನ್ಸ್ ನೇತೃತ್ವ ವಹಿಸಿದ್ದರು. ಆಲಡ್ಕ ಮಸೀದಿಯಿಂದ ಹೊರಟ ಮೆರವಣಿಗೆ ನಂದಾವರ, ಮಾರ್ನಬೈಲ್, ಮೆಲ್ಕಾರ್ ಮಾರ್ಗವಾಗಿ ಮತ್ತೆ ಆಲಡ್ಕ ಮಸೀದಿಯಲ್ಲಿ ಸಮಾಪ್ತಿಗೊಂಡಿತು.
ಗುಡ್ಡೆಅಂಗಡಿ :


ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ವತಿಯಿಂದ ಆಯೋಜಿಸಲಾದ ಸ್ವಲಾತ್ ಮೆರವಣಿಗೆ ಶೈಖ್ ಮೌಲವಿ ದರ್ಗಾ ವಠಾರದಿಂದ ಪ್ರಾರಂಭಗೊಂಡು ಮಾರ್ನಬೈಲು, ನಂದಾವರ, ಆಲಡ್ಕ, ಮೆಲ್ಕಾರ್ ಮಾರ್ಗವಾಗಿ ಗುಡ್ಡೆಅಂಗಡಿ ಮಸೀದಿ ಸಮೀಪದಲ್ಲಿ ಕೊನೆಗೊಂಡಿತು. ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಮಸೀದಿ ಅಧ್ಯಕ್ಷ ಉಮ್ಮರ್ ಫಾರೂಕ್, ಮದ್ರಸ ಮುಖ್ಯ ಶಿಕ್ಷಕ ಮುಹಮ್ಮದ್ ಶರೀಫ್ ಮೌಲವಿ ಪರಪ್ಪು, ಮುಅಝ್ಝಿನ್ ಅಬ್ಬಾಸ್ ಮುಸ್ಲಿಯಾರ್, ಪ್ರಮುಖರಾದ ಅಬ್ದುಲ್ ಮಜೀದ್ ಮೇಸ್ತ್ರಿ, ಮುಹಮ್ಮದ್ ಹನೀಫ್ ಎಸ್.ಎಂ., ಮಜೀದ್ ದರ್ಖಾಸ್ ಮೆಲ್ಕಾರ್, ಮುಹಮ್ಮದ್ ಶಿಹಾಬ್ ಬೋಗೋಡಿ, ಅಬ್ದುಲ್ಲಾ ಜಿ.ಎ. ಮೊದಲಾದವರು ಭಾಗವಹಿಸಿದ್ದರು.

ನಂದಾವರ


ನಂದಾವರ ಕೇಂದ್ರ ಜುಮಾ ಮಸೀದಿ ವತಿಯಿಂದ ಈದ್ ಮಿಲಾದ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ನಂದಾವರ ಮಸೀದಿಯಿಂದ ಪ್ರಾರಂಭಗೊಂಡ ಮೆರವಣಿಗೆ ಮಾರ್ನಬೈಲು, ಕಂದೂರು ಮಾರ್ಗವಾಗಿ ಸಾಗಿಬಂತು. ಮಸೀದಿ ಅಧ್ಯಕ್ಷ ಬಶೀರ್ ನಂದಾವರ ನೇತೃತ್ವ ವಹಿಸಿದ್ದರು.
ಗೂಡಿನಬಳಿ
ಗೂಡಿನಬಳಿ ಮಸ್ಜಿದ್-ಎ-ಮುತ್ತಲಿಬ್ ವತಿಯಿಂದ ಈದ್ ಮಿಲಾದ್ ಮೆರವಣಿಗೆ ಗೂಡಿಬಳಿ ಮಸೀದಿ ಬಳಿಯಿಂದ ಬಿ.ಸಿ.ರೋಡು ಮುಖ್ಯ ವೃತ್ತ, ಬಂಟ್ವಾಳ ಮೂಲಕ ಸಾಗಿ ಬಂತು.


ಬಂಟ್ವಾಳ


ಬಂಟ್ವಾಳ ಜುಮಾ ಮಸೀದಿ ಹಾಗೂ ಮನಾರುಲ್ ಇಸ್ಲಾಂ ಮದ್ರಸ ವತಿಯಿಂದ ಈದ್ ಮಿಲಾದ್ ಮೆರವಣಿಗೆ ನಡೆಯಿತು.
ಕುಕ್ಕಾಜೆ


ಮಂಚಿ ಗ್ರಾಮದ ಕುಕ್ಕಾಜೆ ಮುಹಿಯುದ್ದೀನ್ ಕೇಂದ್ರ ಜುಮಾ ಮಸೀದಿ ವತಿಯಿಂದ ಮೀಲಾದ್ ರ್‍ಯಾಲಿ ನಡೆಯಿತು. ಮಸೀದಿ ಖತೀಬ್ ಅಬ್ದುಲ್ಲ ಮದನಿ, ಅಧ್ಯಕ್ಷ ಇಸ್ಮಾಯಿಲ್, ಕಾರ್ಯದರ್ಶಿ ರಫೀಕ್ ಮೊದಲಾದವರು ರ್‍ಯಾಲಿಯಲ್ಲಿ ಭಾಗವಹಿಸಿದ್ದರು.

ತಲಪಾಡಿ
ತಲಪಾಡಿ ಬದ್ರಿಯ ಜುಮಾ ಮಸೀದಿ ಮತ್ತು ಧಾರ್ಮಿಕ ಚಾರಿಟೆಬಲ್ ಟ್ರಸ್ಟ್ ತಲಪಾಡಿ ಇದರ ವತಿಯಿಂದ ಮೀಲಾದುನ್ನಬಿ ಪ್ರಯುಕ್ತ ಮಸೀದಿ ಆಡಳಿತ ಅಧ್ಯಕ್ಷ ಇದಿನಬ್ಬ ಅವರು ಧ್ವಜಾರೋಹಣ ಗೈದು, ಮೆರವಣಿಗೆಯನ್ನು ಉದ್ಘಾಟಿಸಿದರು.


ಮಸೀದಿ ಖತೀಬ್ ಸ್ವಾದಿಕ್ ಅಝ್ಹರಿ ದುಆಃ ನೆರವೇರಿಸಿದರು. ಮಸೀದಿ ಆಡಳಿತ ಸಮಿತಿಯ ಸದಸ್ಯರಾದ ಇದಿನಬ್ಬ ಕೆಎಸ್ಸಾರ್ಟಿಸಿ, ಮುಹಮ್ಮದ್, ಬಿ.ಸಿ.ಲತೀಫ್, ಟಿ.ಆದಂ, ಅಬೂಬಕರ್, ಅಶ್ರಫ್, ಶಾಹುಲ್ ಹಮೀದ್, ನವಾಝ್, ಸಲಾಂ, ಮುದರ್ರಿಸ್ ಅಬ್ದುಲ್ ರಝಾಕ್ ಹಾಜರಿದ್ದರು. ಸಂಜೆ ಮದ್ರಸ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಸೂರಿಕುಮೇರು


ಸೂರಿಕುಮೇರು ಬದ್ರಿಯಾ ಜುಮಾ ಮಸೀದಿಯಲ್ಲಿ ಮೀಲಾದುನ್ನೆಭಿ ಕಾರ್ಯಕ್ರಮವನ್ನು ಮೂರು ದಿನಗಳ ಕಾಲ ಸಂಭ್ರಮದಿಂದ ಆಚರಿಸಲಾಯಿತು,ಮೊದಲ ದಿನ ದಫ್ ಪ್ರದರ್ಶನ ಹಾಗೂ ಖತೀಬ್ ಡಿ ಎಸ್ ಅಬ್ದುರ್ರಹ್ಮಾನ್ ಮದನಿಯವರ ಮತ ಪ್ರಭಾಷಣ,ಎರಡನೇ ದಿನ ಮಕ್ಕಳ ಮೀಲಾದುನ್ನೆಭಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಂಗಳವಾರ ಆಕರ್ಷಕ ಮೀಲಾದ್ ಜಾಥಾ ಸೂರಿಕುಮೇರು, ಮಾಣಿ,ದಾಸಕೋಡಿ,ಕಾಯರಡ್ಕ ಮೂಲಕ ಸಾಗಿ ಬದ್ರಿಯಾ ಮಸೀದಿಯಲ್ಲಿ ಸಮಾಪನಗೊಂಡಿತು,ಬಳಿಕ ನಡೆದ ಮೌಲಿದ್ ಮಜ್ಲಿಸ್ ನಲ್ಲಿ ಝೈನುಲ್ ಉಲಮಾ ಮಾಣಿ ಉಸ್ತಾದ್ ನಸೀಅತ್ ಹಾಗೂ ದುಆ ನಡೆಸಿಕೊಟ್ಟರು, ಮುಹಮ್ಮದ್ ಅಲೀ ಮುಸ್ಲಿಯಾರ್ ಸ್ವಾಗತಿಸಿದರು, ಯೂಸುಫ್ ಹಾಜಿ ಧ್ವಜಾರೋಹಣಗೈದರು, ಮೂಸಾ ಕರೀಂ ಮಾಣಿ ಕಾರ್ಯಕ್ರಮ ನಿರೂಪಿಸಿದರು, ರಫೀಕ್ ಮದನಿ ಪಾಟ್ರಕೋಡಿ, ಹಂಝ ಮದನಿ,ಅಬ್ದುರ್ರಹ್ಮಾನ್ ಪುತ್ತು,ಬಶೀರ್ ಗುಡ್ಡೆ,ಹಂಝ ಕಾಯರಡ್ಕ,ಮುಂತಾದ ಹಲವಾರು ಗಣ್ಯರು ಉಪಸ್ಥಿತರಿದ್ದರು,ಬದ್ರಿಯಾ ಯಂಗ್ ಮೆನ್ಸ್ ಸೂರಿಕುಮೇರು, ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್ ಮಾಣಿ,ಗಲ್ಫ್ ಕಮಿಟಿ ಸೂರಿಕುಮೇರು,ಅಬ್ದುಲ್ ಅಝೀಝ್ ಕರಾವಳಿ ಚಿಕ್ಕಮಗಳೂರು,ಮುಂತಾದ ಸಂಘಟನೆಗಳು ಹಾಗೂ ಊರಿನ ಜಮಾಅತ್ ಕಮಿಟಿ ಕಾರ್ಯಕ್ರಮದಲ್ಲಿ ಸಹಕಾರ ನೀಡಿತ್ತು,ಅನ್ನದಾನ ಹಾಗೂ ತಬರ್ರುಕ್ ವಿತರಣೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts