ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ (ರಿ.) ಜಿಲ್ಲಾ ಸಮಿತಿ ವತಿಯಿಂದ ಮಕ್ಕಳ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಬಂಟ್ವಾಳ ತಾಲೂಕಿನ, ಬಂಟ್ವಾಳ ಕಸ್ಬಾ ಗ್ರಾಮದ, ಮಂಡಾಡಿ ಇಝ್ಝತ್ತುಲ್ ಇಸ್ಲಾಂ ಯತೀಂ ಖಾನಾದಲ್ಲಿ ಅನಾಥ ಮಕ್ಕಳೊಂದಿಗೆ ಊಟ ಮಾಡುವುದರ ಮೂಲಕ ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.
ಮಕ್ಕಳೊಂದಿಗೆ ಕೆಲ ಸಮಯವನ್ನು ಕಳೆದು, ಮಕ್ಕಳೊಂದಿಗೆ ಪ್ರಾರ್ಥಿಸುವ ಮೂಲಕ ಸಭಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆಯ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಅವರು, ಆಡಂಬರ ಜೀವನದಲ್ಲೇ ಮಗ್ನವಾಗಿರುವ ಈ ನಾಗರಿಕ ಸಮಾಜ ನಿರಾಶ್ರಿತ ಮಕ್ಕಳಿಗೆ ಸಹಾಯ ಹಸ್ತ ನೀಡುತ್ತಾ, ಮಕ್ಕಳ ಹಕ್ಕುಗಳನ್ನು ಸಂರಕ್ಷಿಸಬೇಕಾಗಿದೆ ಎಂದರು.
ಉಪಾಧ್ಯಕ್ಷ ಕೆ.ಎಸ್. ಅಬೂಬಕ್ಕರ್ ಪಲ್ಲಮಜಲು, ಪ್ರಧಾನ ಕಾರ್ಯದರ್ಶಿ ನಾಸಿರ್ ಮಾರಿಪಳ್ಳ, ಜಿಲ್ಲಾ ವಕ್ತಾರ ಸೋಶಿಯಲ್ ಫಾರೂಕ್, ಸದಸ್ಯರಾದ ರಝಾಕ್ ಕೆ.ಸಿ.ರೋಡ್, ಎಂ.ಎಸ್. ಸಿದ್ದೀಕ್, ಪತ್ರಕರ್ತರಾದ ಲತೀಫ್ ನೇರಳಕಟ್ಟೆ, ಅಶ್ರಫ್ ಪಾಣೆಮಂಗಳೂರು, ಬಂಟ್ವಾಳ ಪತ್ರಕರ್ತರ ಸಂಘದ ಅಧ್ಯಕ್ಷ ಫಾರೂಕ್ ಬಂಟ್ವಾಳ, ಮಂಗಳೂರು ಉತ್ತರ ಕ್ಷೇತ್ರ ಸಮಿತಿ ಅಧ್ಯಕ್ಷ ನೂರುದ್ದೀನ್ ಮತ್ತಿತರರು ಹಾಜರಿದ್ದರು.