ಮಂಚಿ ಕೊಳ್ನಾಡು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನ.3ರಿಂದ 9ರವರೆಗೆ ಗಮಕ ವಾಚನ-ವ್ಯಾಖ್ಯಾನ ಸಪ್ತಾಹ ನಡೆಯಲಿದೆ ಎಂದು ಗಮಕ ಕಲಾ ಪರಿಷತ್ತು ಬಂಟ್ವಾಳ ತಾಲೂಕು ಘಟಕ ಅಧ್ಯಕ್ಷ ಕೈಯೂರು ನಾರಾಯಣ ಭಟ್ ತಿಳಿಸಿದ್ದಾರೆ.
3ರಂದು ಸಂಜೆ 6.30ಕ್ಕೆ ಗಮಕ ಕಲಾಪರಿಷತ್ತು ದ.ಕ.ಜಿಲ್ಲಾಧ್ಯಕ್ಷ ಮಧೂರು ಮೋಹನ ಕಲ್ಲೂರಾಯ ಅಧ್ಯಕ್ಷತೆಯಲ್ಲಿ ಪುತ್ತೂರಿನ ವೇದವ್ಯಾಸ ರಾಮಕುಂಜ ಉದ್ಘಾಟಿಸಲಿದ್ದು, ಸಂಜೆ 7ಕ್ಕೆ ಕೆ.ಆರ್.ಸುವರ್ಣ ಕುಮಾರಿ ಅವರ ಗಮಕವಾಚನ ನಡೆಯಲಿದೆ. ವ್ಯಾಖ್ಯಾನವನ್ನು ಕೈಯೂರು ನಾರಾಯಣ ಭಟ್ ನಡೆಸಿಕೊಡುವರು. ಭಾನುವಾರ ನ.4ರಂದು ಕೃಷ್ಣಾನುಗ್ರಹ ಕಥಾಭಾಗದಲ್ಲಿ ಮಂಜುಳಾ ಸುಬ್ರಹ್ಮಣ್ಯ ಭಟ್ ಗಮಕ, ಉದಯಕುಮಾರ್ ವ್ಯಾಖ್ಯಾನ ನೀಡಲಿದ್ದರೆ, 5ರಂದು ಸಂಜೆ 7ಕ್ಕೆ ಕರ್ಣಾವಸಾನ ಕಥಾಭಾಗವನ್ನು ಗುಂಡ್ಯಡ್ಕ ಈಶ್ವರ ಭಟ್ ಗಮಕಿಯಾಗಿ, ಭಾಸ್ಕರ ಬಾರ್ಯ ವ್ಯಾಖ್ಯಾನ ನೀಡುವರು. 6ರಂದು ಪಾರ್ಥಸಾರಥ್ಯ ಕಥಾಭಾಗ ಗಮಕಿ ಅಪೂರ್ವ ಗುಂಡ್ಯಡ್ಕ, ವ್ಯಾಖ್ಯಾನ ಮುಳಿಯ ಶಂಕರ ಭಟ್, 7ರಂದು ಅನಾಥ ರಕ್ಷಕ ಶ್ರೀಕೃಷ್ಣ ಕಥಾಭಾಗ, ಮಧೂರು ರಾಮಪ್ರಕಾಶ ಕಲ್ಲೂರಾಯ ಗಮಕಿಯಾದರೆ, ಪ್ರೊ. ಮಧೂರು ಮೋಹನ ಕಲ್ಲೂರಾಯ ವ್ಯಾಖ್ಯಾನ ನೀಡುವರು. 8ರಂದು ಜಾಂಬವತಿ ಕಲ್ಯಾಣ ಕಥಾಭಾಗ ನಡೆಯಲಿದ್ದು, ಸುಣ್ಣಂಗುಳಿ ಶ್ರೀಕೃಷ್ಣ ಭಟ್ ಗಮಕಿಯಾದರೆ,ರಾಮಕೃಷ್ಣ ಭಟ್ ಬಳಂಜ ವ್ಯಾಖ್ಯಾನ ನೀಡುವರು. 9ರಂದು ಸಮಾರೋಪ ನಡೆಯಲಿದ್ದು, ಚಂದ್ರಶೇಖರ ಕೆದ್ಲಾಯ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಕೊಳ್ನಾಡು ಗ್ರಾಪಂ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಅನಂತ ಪ್ರಭು ಭಾಗವಹಿಸುವರು. ಸಂಜೆ 7ರಿಂದದ ಸುಭದ್ರಾ ಪರಿಣಯ ಗಮಕ ವಾಚನ ನಡೆಯಲಿದ್ದು, ಚಂದ್ರಶೇಖರ ಕೆದ್ಲಾಯ ಗಮಕಿಯಾಗಿ ಮುಳಿಯ ಶಂಕರ ಭಟ್ ವ್ಯಾಖ್ಯಾನಕಾರರಾಗಿ ಭಾಗವಹಿಸುವರು ಎಂದು ಕೈಯೂರು ನಾರಾಯಣ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.