ಬಂಟ್ವಾಳ

ವಾಹನ ತಪಾಸಣೆ ವೇಳೆ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ, ಐವರ ಬಂಧನ

ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಪೊಲೀಸರನ್ನು ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ವಶಪಡಿಸಿಕೊಳ್ಳಲಾದ ಕಾರು

ಭಾನುವಾರ ಸಂಜೆ ಪ್ರಕರಣ ನಡೆದಿದ್ದು, ಟ್ರಾಫಿಕ್ ಠಾಣೆಯ ಉಪನಿರೀಕಕ್ಷಕರಾದ ಮಂಜುಳ.ಕೆ.ಎಂ.  ನಾರಾಯಣ ಗುರು  ಸರ್ಕಲ್ನಲ್ಲಿ ಸಂಜೆ 5.30 ಗಂಟೆಗೆ  ವಾಹನ ತಪಾಸಣೆ ಮಾಡುತ್ತಿದ್ದಾಗ  ಪುತ್ತೂರು ಕಡೆಯಿಂದ ಕಾರೊಂದು ಬಂದಿದ್ದು ಟಿಂಟೆಡ್ ಗ್ಲಾಸ್ ಇರುವುದನ್ನು ಹಾಗೂ ಸೀಟ್ ಬೆಲ್ಟ್ ಹಾಕದಿರುವುದನ್ನು ಕಂಡು ಕಾರನ್ನು ತಡೆದು ಪರಿಶೀಲಿಸಲಾಗಿತ್ತು. ಈ ಸಂದರ್ಭ, ಕಾರಿನಲ್ಲಿದ್ದ  ಮೂಡುಬಿದಿರೆಯ ಜಿತೇಶ್ (31) ವಿಕೇಶ (27) ಆಸ್ಟಿನ್ (23) ಆರ್ವಿನ್ (21) ಆಲ್ಡ್ರಿನ್ (18) ಪಿಎಸ್ಸೈ ಮತ್ತು ಸಿಬ್ಬಂದಿಗೆ ಬೈದು ಬೇರೆ ವಾಹನಗಳ ತಪಾಸಣೆಗೂ  ಅಡ್ಡಿಮಾಡಿದ್ದು ಪಿಎಸೈ ಹಾಗೂ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಮಾಡಿದ್ದಾಗಿ ಆಪಾದಿಸಲಾಗಿದ್ದು, ಈ ಬಗ್ಗೆ ಪಿಎಸೈ  ಠಾಣೆಗೆ ದೂರು ನೀಡಿದ್ದು  ಪ್ರಕರಣ ದಾಖಲಿಸಿ, ಕಾರು ಮತ್ತು ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ