ಬಂಟ್ವಾಳ

ಅಕ್ರಮ ಮರಳುಗಾರಿಕೆ ಪತ್ತೆ, ಸೊತ್ತು ವಶ

ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಎಂಬಲ್ಲಿ ನಾಡದೋಣಿಗಳ ಸಹಾಯದಿಂದ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಪ್ರಕರಣವನ್ನು ಎಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ ನೇತೃತ್ವದಲ್ಲಿ ಪೊಲೀಸರು ಪತ್ತೆಹಚ್ಚಿದ್ದಾರೆ.

ಜಾಹೀರಾತು

ಮಂಗಳವಾರ ರಾತ್ರಿ ಎಎಸ್ಪಿ, ಗ್ರಾಮಾಂತರ ಠಾಣಾ ಎಸ್ ಐ ಪ್ರಸನ್ನ ಸಹಿತ ಸಿಬ್ಬಂದಿ ಅಜಿಲಮೊಗರು ಎಂಬಲ್ಲಿ ರಾತ್ರಿ ಸುಮಾರು 1 ಗಂಟೆಗೆ ದಾಳಿ ನಡೆಸಿದಾಗ, ಎರಡು ನಾಡ  ದೊಣಿಗಳ ಸಹಾಯದಿಂದ  ಮರಳು ಗಾರಿಕೆ ನಡೆಸಿ ದಡದಲ್ಲಿ ನಿಲ್ಲಿಸಿದ್ದ ಟಿಪ್ಪರ್ ಲಾರಿಗೆ   ಮರಳನ್ನು ಲೋಡು ಮಾಡಿತ್ತಿರುವುದು ಕಂಡುಬಂದಿದ್ದು, ಇಲಾಖಾ  ಜೀಪನ್ನು ಕಂಡು ಮರಳುಗಾರಿಕೆಯಲ್ಲಿ  ತೊಡಗಿದ್ದವರು ಅಲ್ಲಿಂದ ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ. ಮರಳನ್ನು  ಕಳ್ಳತನ ನಡೆಸಿ ಲಾರಿಗೆ ಲೋಡು ಮಾಡುತ್ತಿರುವುದು ಧ್ರಡಪಟ್ಟ ಮೇರೆಗೆ  8 ಲಕ್ಷ ರೂ ಮೌಲ್ಯದ ಟಿಪ್ಪರ್, 500 ರೂ ಮೌಲ್ಯದ ಮರಳು, 2.8 ಲಕ್ಷದ ದೋಣಿ, 80 ಸಾವಿರ ರೂ ಮೌಲ್ಯದ ಪೆಟ್ರೋಲ್ ಇಂಜಿನ್, ಸುಮಾರು 12 ಸಾವಿರ ರೂ ಮೌಲ್ಯದ ಮರಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲಾಗಿದೆ. ವಶಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ ರೂ 11,72,500 ಆಗಿದ್ದು, ಗಣಿ  ಮತ್ತು   ಭೂ  ವಿಜ್ಞಾನ ಇಲಾಖೆಗೆ  ಮುಂದಿನ  ಕ್ರಮಕ್ಕಾಗಿ ಹಸ್ತಾಂತರಿಸಲಾಗಿದೆ. ದಾಳಿಯಲ್ಲಿ ಬಂಟ್ವಾಳ ಉಪ ವಿಬಾಗದ ಸಹಾಯಕ ಪೊಲೀಸ್  ಅಧಿಕ್ಷಕರಾದ ಸೋನವಣೆ ಋಷಿಕೇಶ್ ಭಗವಾನ್, ಬಂಟ್ವಾಳ ವೃತ್ತ  ನಿರೀಕ್ಷಕರಾದ ಟಿ.ಡಿ.ನಾಗರಾಜ್, ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಪ್ರಸನ್ನ ಎಮ್ .ಎಸ್  ಹಾಗೂ ಸಿಬ್ಬಂದಿಗಳಾದ  ಸುಂದರ, ಮಾದವ, ಬಸವರಾಜ್, ಕಿರಣ್, ಸತ್ಯ ಪ್ರಕಾಶ್ ಮೊದಲಾದವರು ಪಾಲ್ಗೊಂಡಿದ್ದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ