ಹದಿನಾರು ದಿನಗಳ ಅವಧಿಯಲ್ಲಿ ಒಂದೇ ಕುಟುಂಬದ ನಾಲ್ವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮ ನಿವಾಸಿ ಮಯ್ಯದ್ದಿ ಅಕ್ಟೋಬರ್ 1ರಂದು ಜ್ವರಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟಿದ್ದರೆ, ಅವರ ಪತ್ನಿ ಅವ್ವಮ್ಮ ಅವರು ಎಚ್1ಎನ್1 ಜ್ವರ ಬಾಧಿತರಾಗಿ ಅ.10ರಂದು ಅಸು ನೀಗಿದರು. ಮಯ್ಯದ್ದಿ-ಅವ್ವಮ್ಮ ದಂಪತಿ ಪುತ್ರಿ ಝುಬೀನಾ ಹೆರಿಗೆಗೆ ಎಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟು ಮಗುವಿಗೆ ಜನ್ಮ ನೀಡಿದ್ದು, ಆರು ದಿನಗಳಲ್ಲಿ ಆ ಮಗುವೂ ಮೃತಪಟ್ಟಿತು. (ಅ.4ರಂದು ಮಗು ಸಾವನ್ನಪ್ಪಿದೆ). ಇದೇ ವೇಳೆ ಝುಬೀನಾ ಅವರೂ ಜ್ವರಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದು ಅವರೂ ಎಚ್1ಎನ್1 ಜ್ವರಪೀಡಿತರಾಗಿ ಮಂಗಳವಾರ ನಸುಕಿನ ವೇಳೆಗೆ ಇಹಲೋಕ ತ್ಯಜಿಸಿದ್ದಾರೆ.
ಮೃತಪಟ್ಟವರಲ್ಲಿ ಇಬ್ಬರಿಗೆ ಎಚ್1ಎನ್1 ಬಂದಿರುವುದು ದೃಢಪಟ್ಟಿದ್ದು, ಒಟ್ಟು ಒಂದೇ ಕುಟುಂಬದದ ನಾಲ್ವರು ಸಾವನ್ನಪ್ಪಿರುವುದು ಕುಟುಂಬಕ್ಕಷ್ಟೇ ಅಲ್ಲ, ಇಡೀ ಊರಿಗೇ ಆಘಾತ ತಂದಿದೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…