ಪರೀಕ್ಷೆಗಳಲ್ಲಿ ಪ್ರಶ್ನೆಗಳಿಗೆ ಉರಿಸುವ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆಯ ಅಧ್ಯಯನವನ್ನು ಮಾಡುವಾಗ ಧನಾತ್ಮಕವಾದ ಚಿಂತನೆ- ಓದುಗಳ ಬಳಿಕ ಧನಾತ್ಮಕ ಬರವಣಿಗೆಯನ್ನು ಮಾಡಬೇಕು.ಇದರಿಂದ ಪ್ರಶ್ನೆಗಳ ಕುರಿತಾಗಿರುವ ಹೆದರಿಕೆ ಹೋಗಿ ಎದುರಿಸುವ ಆತ್ಮ ವಿಶ್ವಾಸ ಮೂಡುತ್ತದೆ ಎಂದು ನಿವೃತ್ತ ಪ್ರಾಂಶುಪಾಲ, ಮಾನವ ಸಂಪನ್ಮೂಲ ತರಬೇತುದಾರ ಯು ಎಸ್ ವಿಶ್ವೇಶ್ವರ ಭಟ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸ.ಪ್ರ.ದ.ಕಾಲೇಜು ಬಿ.ಸಿ.ರೋಡ್ ಇಲ್ಲಿನ ಇನ್ನೋವೇಟಿವ್ ಕ್ಲಬ್, ಪರೀಕ್ಷಾ ಸಮಿತಿಗಳ ಆಶ್ರಯದಲ್ಲಿ ಉಂಡೆಮನೆ ಶಂಭು ಭಟ್ಟರ ಸವಿನೆನಪಿನ ಶಿಕ್ಷಣ ಪ್ರೋತ್ಸಾಹ ಯೋಜನೆಯ ಅರ್ಧಮಂಡಲ ವರ್ಷಾಚರಣೆಯ ಅಂಗವಾಗಿ ಇಲ್ಲಿನ ಬಿ.ಎ.ವಿದ್ಯರ್ಥಿಗಳಿಗೆ ಆಯೋಜಿಸಿದ್ದ “ಅಧ್ಯಯನ ಕುಶಲತೆ ತರಬೇತಿ”ಯಲ್ಲಿ ತರಬೇತಿ ನೀಡಿ ಈ ಮಾತುಗಳನ್ನು ಹೇಳಿದರು.
ಆಂಗ್ಲ ಉಪನ್ಯಾಸಕ ಪ್ರೊ.ನಂದಕಿಶೋರ್ ಹಾಗೂ ಪರೀಕ್ಷಾ ಸಮಿತಿಯ ಸಂಯೋಜಕಿ ಶ್ರೀಮತಿ ವೈಶಾಲಿ ಸಂಯೋಜಿಸಿದ್ದ ಈ ತರಬೇತಿಯು ಪ್ರಾಂಶುಪಾಲ ಡಾ.ಗಿರೀಶ್ ಭಟ್ ಅಜೆಕ್ಕಳ ಇವರ ಮಾರ್ಗದರ್ಶನದಲ್ಲಿ ನಡೆಯಿತು.ಪ್ರೊ.ನಂದಕಿಶೋರ್ ಸ್ವಾಗತಿಸಿ ವಂದಿಸಿದರು.