ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ, ಶ್ರೀ ಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಂಟ್ವಾಳ ಇದರ ವತಿಯಿಂದ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಹಾಗೂ ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಸಹಕಾರದೊಂದಿಗೆ ೧೫೦ ನೇ ಗಾಂಧಿ ಜಯಂತಿಯ ಆಚರಣೆಯ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ಜಾಥ ಹಾಗೂ ಗಾಂಧಿಸ್ಮೃತಿ ಮತ್ತು ಪಾನಮುಕ್ತರ ಅಭಿನಂದನಾ ಸಮಾವೇಶ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ನಡೆಯಿತು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಆಶೀರ್ವಚನ ನೀಡಿ ಮದ್ಯಮುಕ್ತರು ತಾವು ಪರಿವರ್ತನೆಯಾಗುವುದು ಮಾತ್ರವಲ್ಲ ಇತರರನ್ನು ಪರಿವರ್ತನೆಗೊಳಿಸುವ ಪರಿವ್ರಾಜಕರಾಗಬೇಕು ಇದಕ್ಕಿಂತ ಪುಣ್ಯದ ಕೆಲಸ ಬೇರೊಂದಿಲ್ಲ ಎಂದರು.
ಸಂಸದ ನಳಿನ್ ಕುಮಾರ್ ಕಟೀಲು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಆದಷ್ಟು ಶೀಘ್ರ ಬಂಟ್ವಾಳ ತಾಲೂಕು ಕೂಡ ಪಾನಮುಕ್ತರ ತಾಲೂಕಾಗಿ ಘೋಷಣೆಯಾಗಲಿ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಪಾನಮುಕ್ತರಿಗೆ ಗಿಡ ನೀಡಿ ಅಭಿನಂದಿಸಿದರು ಅವರು ಮಾತನಾಡಿ ಪಾನಮುಕ್ತರು ಸ್ವಾಉದ್ಯೋಗ ಮಾಡುವುದಿದ್ದರೆ ಅವರು ಅರ್ಜಿ ನೀಡಿದ್ದಲ್ಲಿ ಮೊದಲ ಆದ್ಯತೆಯಲ್ಲಿ ಅವರಿಗೆ ಸ್ವ ಉದ್ಯೋಗದ ಅವಕಾಶ ಕಲ್ಪಿಸುವುದಾಗಿ ತಿಳಿಸಿದರು.
ವಿವಿಧ ಕಡೆಗಳಲ್ಲಿ ಮಧ್ಯವರ್ಜನ ಶಿಬಿರವವನ್ನು ಆಯೋಜಿಸಿ ಅದರ ನೇತೃತ್ವವನ್ನು ವಹಿಸಿದ್ದ ಕೃಷ್ಣಕುಮಾರ್ ಪೂಂಜಾ, ಪ್ರಕಾಶ್ ಕಾರಂತ, ಶ್ರೀಧರ ಪೈ, ಪುಷ್ಪರಾಜ ಶೆಟ್ಟಿ, ರೋನಾಲ್ಡ್ ಡಿಸೋಜಾ ಅವರನ್ನು ಅಭಿನಂದಿಸಲಾಯಿತು.
ಜನಜಾಗೃತಿ ವೇದಿಕೆ ಬಂಟ್ವಾಳದ ಅಧ್ಯಕ್ಷ ಪ್ರಕಾಶ್ ಕಾರಂತ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕ ರಾಜೇಶ್ ನಾಕ್, ಮಾಜಿ ಸಚಿವ ಬಿ.ರಮಾನಾಥ ರೈ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ರವೀಂದ್ರ ಕಂಬಳಿ, ಸಾಹುಲ್ ಹಮೀದ್ ತಾ.ಪಂ.ಸದಸ್ಯರಾದ ಗಣೇಶ್ ಸುವರ್ಣ, ಪದ್ಮಶ್ರೀ, ನವೀನ್ ಕೊಳ್ನಾಡು, ಮಾಜಿ ಶಾಸಕ ರುಕ್ಮಯ ಪೂಜಾರಿ, ಪುದು ಗ್ರಾ.ಪಂ. ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಕೈಯ್ಯೂರು ನಾರಾಯಣ ಭಟ್, ಸೇವಾಂಜಲಿ ಪ್ರತಿಷ್ಠಾನದ ಅಧ್ಯಕ್ಷ ವಜ್ರನಾಭ ಶೆಟ್ಟಿ, ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ, ಉಮ್ಮರಬ್ಬ, ಗ್ರಾಮಾಭಿವೃದ್ದಿ ಯೋಜನೆಗಳ ಒಕ್ಕೂಟದ ಅಧ್ಯಕ್ಷ ಸದಾನಂದ ನಾವೂರ ಹಾಜರಿದ್ದರು.
ಶ್ರೀ. ಕ್ರೇ. ಧ.ಗ್ರಾ. ಯೋಜನಾಧಿಕಾರಿ ಜಯಾನಂದ ಸ್ವಾಗತಿಸಿದರು. ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್ ಪ್ರಸ್ತಾವಿಸಿದರು. ಜನಜಾಗೃತಿ ವೇದಿಕೆ ಸದಸ್ಯ ಸದಾನಂದ ಆಳ್ವ ವಂದಿಸಿದರು. ಎಸ್‌ಕೆಡಿಆರ್‌ಡಿಪಿಯ ಲೋಲಾಕ್ಷ ಕಾರ್ಯಕ್ರಮ ನಿರೂಪಿಸಿದರು.
ಜನಜಾಗೃತಿ ಜಾಥ:
ಸಭಾ ಕಾರ್ಯಕ್ರಮಕ್ಕಿಂತ ಮುಂಚಿತವಾಗಿ ಮಧ್ಯಪಾನದ ವಿರುದ್ದ ಜನಜಾಗೃತಿ ಮೂಡಿಸುವ ಬೃಹತ್ ಜಾಥ ಫರಂಗಿಪೇಟೆಯಲ್ಲಿ ನಡೆಯಿತು. ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿದ ಜಾಗೃತಿ ಜಾಥ ಫರಂಗಿಪೇಟೆ ಹಳೆ ರಸ್ತೆಯಲ್ಲಿ ಸಾಗಿ ಸೇವಾಂಗಲಿ ಸಭಾಂಗಣದ ಬಳಿ ಸಮಾಪನಗೊಂಡಿತು. ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಸಹಿತ ಅನೇಕ ಗಣ್ಯರು ಜಾಗೃತಿ ಜಾಥದಲ್ಲಿ ಪಾಲ್ಗೊಂಡರು. ಮದ್ಯಪಾನದಿಂದ ಉಂಟಾಗುವ ತೊಂದರೆಯ ಕುರಿತ ಸ್ಥಬ್ದಚಿತ್ರ ಗಮನ ಸೆಳೆಯಿತು.