ತುಂಬೆ ಕಡೆಗೋಳಿಯ ನಿರತ ಸಾಹಿತ್ಯ ಸಂಪದದ 22ನೇ ಸವಿಸಂಭ್ರಮದ ಹೊಸ್ತಿಲಲ್ಲಿ ಸಾಹಿತ್ಯದೆಡೆ ನಮ್ಮ ನಡೆ ಎಂಬ ಕಾರ್ಯಕ್ರಮ ಅಕ್ಟೋಬರ್ 7ರಂದು ಬೆಳಗ್ಗೆ 9.30ರಿಂದ ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಕರುಣಾಕರ ಮಾರಿಪಳ್ಳ ಮತ್ತು ಸಂಚಾಲಕ ಅಬ್ದುಲ್ ಮಜೀದ್ ಎಸ್. ವಿನಂತಿಸಿದ್ದಾರೆ.
ಉಪನ್ಯಾಸಕ ವಿ.ಸುಬ್ರಹ್ಮಣ್ಯ ಭಟ್ ಗೌರವಾಧ್ಯಕ್ಷರಾಗಿರುವ ನಿರತ ಸಾಹಿತ್ಯ ಸಂಪದದ ಸಂಯೋಜಕರಾಗಿ ತಾರಾನಾಥ ಕೈರಂಗಳ, ಬೃಜೇಶ್ ಅಂಚನ್, ಪ್ರಭಾಕರ ಆಚಾರ್ಯ ಮತ್ತು ದಿನೇಶ್ ಎನ್. ತುಂಬೆ ಇದ್ದಾರೆ.
ಬೆಳಗ್ಗೆ ಕಸಾಪ ತಾಲೂಕು ಅಧ್ಯಕ್ಷ ಕೆ.ಮೋಹನ್ ರಾವ್ ಉದ್ಘಾಟಿಸಲಿದ್ದು, ಶಿಕ್ಷಕ ಬಿ.ಮಹಮ್ಮದ್ ತುಂಬೆ, ಸಾಧನಾ ಸಾಂಸ್ಕೃತಿಕ ಪ್ರತಿಷ್ಠಾನ ಸಂಚಾಲಕ ವಿಶ್ವನಾಥ ಬಂಟ್ವಾಳ ಮತ್ತು ಕವಯತ್ರಿ ಪಲ್ಲವಿ ಕಾರಂತ ಅತಿಥಿಗಳಾಗಿರುವರು. ಬಳಿಕ ವಿದ್ಯಾರ್ಥಿ ಮತ್ತು ಸಾಹಿತ್ಯ ವಿಷಯದ ಕುರಿತು ಚಿಂತನ ಮಂಥನ ನಡೆಯಲಿದ್ದು, ಸಮನ್ವಯಕಾರರಾಗಿ ಉಪನ್ಯಾಸಕ ಡಿ.ಬಿ.ಅಬ್ದುಲ್ ರಹಿಮಾನ್ ಭಾಗವಹಿಸುವರು. ಅದಾದ ನಂತರ ಜಿಲ್ಲೆಯ ಹಿರಿ, ಕಿರಿಯ ಸಾಹಿತಿಗಳಿಂದ ಬಹುಭಾಷಾ ಸಾಹಿತ್ಯಗೋಷ್ಠಿ ಕಾವ್ಯಕನ್ನಡಿ ನಡೆಯಲಿದ್ದು, ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ಸುಧಾ ನಾಗೇಶ್ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 12.30ಕ್ಕೆ ಸಮಾರೋಪ ನಡೆಯಲಿದ್ದು, ನಿವೃತ್ತ ಪ್ರಾಧ್ಯಾಪಕ ಪ್ರೊ.ವಿ.ಬಿ.ಅರ್ತಿಕಜೆ ಸಮಾರೋಪ ಭಾಷಣ ಮಾಡುವರು. ಅತಿಥಿಗಳಾಗಿ ಬಿಇಒ ಶಿವಪ್ರಕಾಶ್ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ನಿರತ ಸಾಹಿತ್ಯ ಸಂಪದ ಗೌರವಾಧ್ಯಕ್ಷ ವಿ.ಸುಬ್ರಹ್ಮಣ್ಯ ಭಟ್ ವಹಿಸಲಿದ್ದಾರೆ. ನಿರತ ಅಧ್ಯಕ್ಷ ಕರುಣಾಕರ ಮಾರಿಪಳ್ಳ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.