ಬಂಟ್ವಾಳ

ಫ್ಲೈಓವರ್ ಅಡಿಯಲ್ಲಿ ತರಕಾರಿ ಮಾರ್ಕೆಟ್ – ಸೂಕ್ತ ಕ್ರಮಕ್ಕೆ ಸೂಚನೆ

ಬಿ.ಸಿ.ರೋಡ್ ನ ಫ್ಲೈಓವರ್ ಅಡಿ ತರಕಾರಿ ಮಾರುವುದರಿಂದ ಸಂಚಾರ ಸಮಸ್ಯೆಗೆ ತೊಂದರೆ ಆಗುತ್ತಿದೆ ಎಂದು ಟ್ರಾಫಿಕ್ ಎಸ್.ಐ. ಮಂಜುಳಾ  ಶಾಸಕರ ಗಮನ ಸೆಳೆದಿದ್ದಾರೆ.

ಬಿ.ಸಿ.ರೋಡ್ ಫ್ಲೈ ಓವರ್ ಅಡಿಯಲ್ಲಿ ರಾಶಿ ರಾಶಿ ಟೊಮೆಟೊ, ಕ್ಯಾರಟ್, ಸೊಪ್ಪು, ತರಕಾರಿ

ಜಾಹೀರಾತು

ಬಿ.ಸಿ.ರೋಡ್ ಫ್ಲೈ ಓವರ್ ಅಡಿ ಮಾತ್ರವಲ್ಲ, ರಕ್ತೇಶ್ವರಿ ಎದುರು ಹೀಗೆ ಆಯಕಟ್ಟಿನ ಜಾಗಗಳಲ್ಲಿ ತರಕಾರಿ ಮಾರಾಟ ಮಾಡುವ ಹಿನ್ನೆಲೆಯಲ್ಲಿ ದಿಢೀರನೆ ಅಲ್ಲೇ ವಾಹನ ನಿಲ್ಲಿಸುವುದರಿಂದ ಉಳಿದವಾಹನ ಸವಾರರಿಗೆ ತೊಂದರೆ ಉಂಟಾಗುತ್ತದೆ, ಪಾದಚಾರಿಗಳಿಗೂ ಸಮಸ್ಯೆ ಆಗುವ ಕುರಿತು ಗಮನ ಸೆಳೆದ ಟ್ರಾಫಿಕ್ ಎಸ್.ಐ, ಈ ಕುರಿತು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಪುರಸಭೆಯಲ್ಲಿ ನಡೆದ ಶಾಸಕ ರಾಜೇಶ್ ನಾಯ್ಕ್ ನೇತೃತ್ವದ ಕುಂದು ಕೊರತೆ ಸಭೆಯಲ್ಲಿ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಶಾಸಕರು, ಈಗಾಗಲೇ ಈ ಕುರಿತು ವರದಿ ಬಂದದ್ದನ್ನು ಗಮನಿಸಿದ್ದು, ಬೀದಿ ಬದಿ ವ್ಯಾಪಾರಸ್ಥರಿಗೊಂದು ಸೂಕ್ತ ವ್ಯವಸ್ಥೆ ಕಲ್ಪಿಸುವುದಲ್ಲದೆ, ಫ್ಲೈ ಓವರ್ ಅಡಿ ಸಹಿತ ಬಿ.ಸಿ.ರೋಡ್ ಟ್ರಾಫಿಕ್ ಸಮಸ್ಯೆಯನ್ನು ಸರಿಪಡಿಸುವ ಕುರಿತು ಕಾರ್ಯಯೋಜನೆ ರೂಪಿಸಲು ಸೂಚಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ