ಬಂಟ್ವಾಳ

ಪ್ಲಾಸ್ಟಿಕ್ ನಿಷೇಧ ಕಟ್ಟುನಿಟ್ಟು, ಆಯ್ದ ಜಾಗಗಳಲ್ಲಿ ಸಿಸಿ ಕ್ಯಾಮರಾ

  • ಬಂಟ್ವಾಳ ಪುರಸಭೆ ಅಧಿಕಾರಿಗಳ ಮಟ್ಟದ ಸಭೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಸೂಚನೆ

www.bantwalnews.comಸಂಪಾದಕ: ಹರೀಶ ಮಾಂಬಾಡಿ

ಜಾಹೀರಾತು

ಪ್ಲಾಸ್ಟಿಕ್ ನಿಷೇಧ ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಆಯ್ದ ಜಾಗಗಳಲ್ಲಿ  ಅತ್ಯಾಧುನಿಕ ಸಿಸಿ ಕ್ಯಾಮರಾ ಅಳವಡಿಸಿ, ನೀರಿನ ಸಮಸ್ಯೆಗಳು ಬಾರದಂತೆ ಎಚ್ಚರವಹಿಸಿ, ಸುಂದರ ಬಂಟ್ವಾಳ ನಿರ್ಮಾಣಕ್ಕೆ ಸಹಕರಿಸಿ.

ಇದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಸೋಮವಾರ ಬಂಟ್ವಾಳ ಪುರಸಭೆ ಸಭಾಂಗಣದಲ್ಲಿ ಅಧಿಕಾರಿಗಳ ಮಟ್ಟದ ಸಭೆಯಲ್ಲಿ ನೀಡಿದ ಸೂಚನೆ.ಕೆಲವೊಂದು ವಿಷಯಗಳಲ್ಲಿ ಆಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಯಾವ ಮುಲಾಜಿಲ್ಲದೆ ಕೈಗೊಳ್ಳಬೇಕು, ಯಾವುದೇ ಒತ್ತಡಗಳಿಗೆ ಮಣಿಯುವ ಅಗತ್ಯವಿಲ್ಲ ಎಂದು ಕ್ಲಾಸ್ ಮಾಡಿದ ಶಾಸಕರು, ತ್ಯಾಜ್ಯ ವಿಲೇವಾರಿ, ಒಳಚರಂಡಿ ವ್ಯವಸ್ಥೆಗಳು ಇನ್ನೂ ಆಗಿಲ್ಲದೇ ಇರುವುದಕ್ಕೆ ಕಾರಣವೇನು ಎಂದು ಅಧಿಕಾರಿಗಳಿಗೆ ಚುರುಕುಮುಟ್ಟಿಸಿದರು.ಫ್ಲೆಕ್ಸ್, ಬಂಟಿಂಗ್ಸ್ ಗಳನ್ನು ಬಳಸಲು ಅವಕಾಶ ನೀಡಬೇಡಿ, ರಾಷ್ಟ್ರೀಯ ಹೆದ್ದಾರಿಯ ಬಸ್ ತಂಗುದಾಣಗಳಲ್ಲಿ ಅಳವಡಿಸಿರುವ ಫ್ಲೆಕ್ಸ್ ಗಳನ್ನೂ ತೆರವುಗೊಳಿಸಿ ಎಂದ ಶಾಸಕರು, ತನ್ನನ್ನು ಅಭಿನಂದಿಸಿದ ಫ್ಲೆಕ್ಸ್ ಇದ್ದರೂ ತೆರವುಗೊಳಿಸಿ, ಯಾವ ಮುಲಾಜೂ ಬೇಡ ಎಂದರು.

ಜಾಹೀರಾತು

ಸಭೆಯ ಮುಖ್ಯಾಂಶಗಳು ಇವು.

  • ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ನಳ್ಳಿ, ದಾರಿದೀಪಗಳಿವೆ ಎಂದು ಅಧಿಕಾರಿಗಳಿಂದ ಮಾಹಿತಿ. ಪುರಸಭೆ ಸರ್ವೆ ಪ್ರಕಾರ 570 ಎಂದು ಮುಖ್ಯಾಧಿಕಾರಿ ಹೇಳಿದರೆ ಅದಕ್ಕಿಂತಲೂ ಜಾಸ್ತಿ ಇವೆ ಎಂದರು ಶಾಸಕ ರಾಜೇಶ್ ನಾಯ್ಕ್.
  • ಎರಡನೇ ಹಂತದ ಕುಡಿಯುವ ನೀರಿನ ಯೋಜನೆಯಲ್ಲಿ 90 ಕಿ.ಮೀ ಪೈಕಿ, 85 ಕಿ.ಮೀ.ಪೈಪ್ ಲೈನ್ ಪೂರ್ಣಗೊಂಡಿದ್ದು, 5040 ನೀರಿನ ಸಂಪರ್ಕ ನೀಡಲಾಗುತ್ತಿದೆ ಎಂದು ಕೆಯುಡಬ್ಲ್ಯ ಎಸ್ ಶೋಭಾಲಕ್ಮ್ಮಿ ಮಾಹಿತಿ.
  • ಅನಧಿಕೃತ ಸಂಪರ್ಕ ಪಡೆಯದಂತೆ ತಂತ್ರಜ್ಞಾನ ಅಳವಡಿಸಲು ಶಾಸಕ ಸೂಚನೆ.
  • ಪುರಸಭಾ ವ್ಯಾಪ್ತಿಯಲ್ಲು ಸಾಕಷ್ಟ ಅನಧಿಕೃತ ದಾರಿದೀಪಗಳು ಉರಿಯುತ್ತಿರುವ ಬಗ್ಗೆ ಸಭೆಯಗಮನ ಸೆಳೆದರಲ್ಲದೆ 2.77 ಕೋ.ರೂ.ವಿದ್ಯುತ್ ಬಿಲ್ಲು ಪಾವತಿಸಲು ಪುರಸಭೆ ಬಾಕಿ ಇಟ್ಟಿರುವ ಬಗ್ಗೆ ಮೆಸ್ಕಾಂ ಇಂಜಿನಿಯರ್ ಮಾಹಿತಿ
  • ನೀರಿನ ಸಮಸ್ಯೆಯ ಬಗ್ಗೆ ದೂರು ಬರುತ್ತಿದ್ದು,ಈಗಾಗಲೇ ಎರಡು ಪ್ರದೇಶಕ್ಕೆ ತಾನೇ ಟ್ಯಾಂಕರ್ ಪೂರೈಸುವ ವ್ಯವಸ್ಥೆ ಮಾಡಿದ್ದು ಇನ್ನು ಮುಂದೆ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸುವಂತೆ ಶಾಸಕ ಸೂಚನೆ,
  • ಕಂಚಿನಡ್ಕ ಪದವಿನ ತ್ಯಾಜ್ಯ ವಿಲೇವಾರಿ ಘಟಕದ ಸುತ್ತ ಇರುವ ಮನೆಗಳನ್ನು ಸ್ಥಳಾಂತರಿಸಲು ಇರಾ ಗ್ರಾಮದಲ್ಲಿ ಜಮೀನು ಗುರುತಿಸಲಾಗಿದೆ.ಅಲ್ಲಿ ಪೈರೋಲಿಸಿಸ್ ಯಂತ್ರ ಅಳವಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ‌. ಕಸವಿಲೇವಾರಿಯ ಗುತ್ತಿಗೆದಾರನ ಅವಧಿ ಈಗಾಗಲೇ ಪೂರ್ಣಗೊಂಡಿದೆ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಮಾಹಿತಿ.
  • ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಆಯಕಟ್ಟಿನ ಏಳು ಕಡೆಗಳಲ್ಲಿ ಸಿಸಿ ಕ್ಯಾಮಾರ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಎಸ್ ಹರೀಶ್ ಮನವಿ ನೀಡಿದಾಗ ಸಿಸಿ ಕ್ಯಾಮರ ಅಳವಡಿಸುವ ನಿಟ್ಟಿನಲ್ಲಿ ಕೂಡಲೇ ಕಾರ್ಯಪ್ರರ್ವತವಾಗುವಂತೆ ಶಾಸಕ ಸೂಚನೆ, ಇದಕ್ಕೆ ಗುಣಮಟ್ಟದ ಸಿಸಿ ಕ್ಯಾಮಾರವನ್ನೇ ಅಳವಡಿಸಲು ಸೂಚನೆ.
  • ಟ್ರಾಫಿಕ್, ಪಾರ್ಕಿಂಗ್ ಬಗ್ಗೆ ಸ್ಥಳ ಪರಿಶೀಲನೆಗೆ ಶಾಸಕ ಸೂಚನೆ. ಎಸ್.. ಮಂಜುಳಾ ಕುರಿತು ಗಮನ ಸೆಳೆದರು.

ಉಪಸ್ಥಿತಿ:

ಮಂಗಳೂರು ಸಹಾಯಕ ಕಮೀಷನರ್ ಹಾಗೂ ಪುರಸಭೆಯ ಆಡಳಿತಾಧಿಕಾರಿ ರವಿಚಂದ್ರ  ನಾಯಕ್ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉಮೇಶ್ ಭಟ್, ಕೆಯುಡಬ್ಲ್ಯ ಎಸ್ ನಿಂಜಿನಿಯರ್ ಗಳಾದ ಜಗದೀಶ್, ಸಂಶುದ್ದೀನ್, ಶೋಭಾಲಕ್ಷ್ಮೀ, ಮೆಸ್ಕಾಂ ಎಇಇ ನಾರಾಯಣ ಭಟ್, ಪುರಸಭೆಯ ಕಿರಿಯ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೊಅರಣ್ಯಾಧಿಕಾರಿ ಬಿ.ಸುರೇಶ್ ಪುರಸಭೆಯ ಅಧಿಕಾರಿಗಳು ಹಾಜರಿದ್ದರು.ಮುಖ್ಯಾಧಿಕಾರಿ ರೇಖಾ ಶೆಟ್ಟಿ ಸ್ವಾಗತಿಸಿ,ವಂದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ