ಬಂಟ್ವಾಳ ತಾಲೂಕಿನ ಗೂಡಿನಬಳಿಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ವಿಶ್ವ ಹಿಂದು ಪರಿಷತ್ತು, ಬಜರಂಗದಳ ಹೇಳಿದೆ.
ಈ ಕುರಿತು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರಿಗೆ ಮಂಗಳವಾರ ಮನವಿ ಅರ್ಪಿಸಲಾಯಿತು. ಪ್ರತಿ ಶಾಲೆಗಳಲ್ಲೂ ವಾರಕ್ಕೆ ಹೆಣ್ಣುಮಕ್ಕಳಿಗೆ ಒಂದು ದಿನ ಒಂದು ಗಂಟೆ ಅವಧಿ ಕೌನ್ಸೆಲಿಂಗ್ ಕೇಂದ್ರ ಪ್ರಾರಂಭಿಸಿ, ಶಾಲೆಯೊಳಗೆ, ಹೊರಗಿನ ಕಿರುಕುಳಗಳ ಮಾಹಿತಿ ಪಡೆದುಕೊಂಡು ಸೂಕ್ತ ಕ್ರಮ ಜರಗಿಸಬೇಕ ಎಂದು ಒತ್ತಾಯಿಸಲಾಗಿದೆ. ವಿಶ್ವ ಹಿಂದು ಪರಿಷತ್ ವಿಟ್ಲ ಪ್ರಖಂಡ ಅಧ್ಯಕ್ಷ ಕೆ.ಕೃಷ್ಣಪ್ಪ ಕಲ್ಲಡ್ಕ, ಬಜರಂಗದಳ ವಿಟ್ಲ ಪ್ರಖಂಡ ಸಂಚಾಲಕ ಅಕ್ಷಯ್ ರಜಪೂತ್, ಸಹಸಂಚಾಲಕ ಚಂದ್ರಹಾಸ ಕನ್ಯಾನ ಮತ್ತಿತರರು ಈ ಮನವಿ ಮಾಡಿ ತಹಶೀಲ್ದಾರ್ ಅವರಿಗೆ ನೀಡಿದ್ದಾರೆ.
IFTAAR ORGANISED BY FORMER MINISTER RAMANATHA RAI AT PANEMANGALORE (more…)