ಪ್ರಮುಖ ಸುದ್ದಿಗಳು

ನಗರವಾಸಿಗಳೇ ಮನೆ ಕಟ್ತೀರಾ, ಸ್ವಲ್ಪ ಇಲ್ಲಿ ನೋಡಿ…

ಕ್ರೆಡಿಟ್ ಲಿಂಕ್ಸ್ ಸಬ್ಸಿಡಿ ಸ್ಕೀಮ್ ಸಿಎಲ್‍ಎಸ್‍ಎಸ್ ಈ ಯೋಜನೆಯ ಉಪ ಘಟಕವಾಗಿದ್ದು, ಸಿಎಲ್‍ಎಸ್‍ಎಸ್ ಅಡಿಯಲ್ಲಿ ರೂ. 18 ಲಕ್ಷದವರೆಗೆ ವಾರ್ಷಿಕ ಆದಾಯ ಹೊಂದಿರುವ ಕುಟುಂಬಗಳಿಗೆ ಹೊಸ ಮನೆ ನಿರ್ಮಿಸಿಕೊಳ್ಳಲು/ಖರೀದಿಸಲು/ಮರುಖರೀದಿಸಲು/ ಇರುವ ಮನೆಗೆ ಹೆಚ್ಚುವರಿ ಕೊಠಡಿಯನ್ನು (ಕೊಠಡಿ/ಅಡುಗೆಮನೆ/ಶೌಚಾಲಯ) ನಿರ್ಮಿಸಿಕೊಳ್ಳಲು ಸಾಧ್ಯವಾಗುವಂತೆ ಬ್ಯಾಂಕ್ ಸಾಲ ಒದಗಿಸಲಾಗುತ್ತಿದ್ದು, ಈ ಸಾಲದ ಮೊತ್ತಕ್ಕೆ ವಿಧಿಸಲಾಗುವ ಬಡ್ಡಿ ದರದಲ್ಲಿ ಆದಾಯ ವರ್ಗ ಇಡಬ್ಲ್ಯೂಎಸ್ – ಆದಾಯ ಮಿತಿ(ವಾರ್ಷಿಕ) ರೂ 3 ಲಕ್ಷದವರೆಗೆ 30 ಚದರ ಮೀಟರ್ (ಬೇಕಾದಲ್ಲಿ ಮಿತಿ ಹೆಚ್ಚಿಸಬಹುದು) ಸಾಲದ ಮೊತ್ತ ರೂ. 6 ಲಕ್ಷ. ಸಾಲದ ಅವಧಿ 20 ವರ್ಷ, ಬಡ್ಡಿ ಸಹಾಯ ಧನ(ಸಬ್ಸಿಡಿ ವಾರ್ಷಿಕ) 6.5%, ಬಡ್ಡಿ ಸಹಾಯಧನ (ಸಬ್ಸಿಡಿ ಮೊತ್ತ), ರೂ.2.67 ಲಕ್ಷ, ಉದ್ದೇಶ ನಿರ್ಮಾಣ/ ಖರೀದಿ/ವಿಸ್ತರಣೆ.
ಎಂ.ಐ.ಜಿ-1, ಆದಾಯ ಮಿತಿ(ವಾರ್ಷಿಕ) ರೂ 6.01 ಲಕ್ಷದಿಂದ 12 ಲಕ್ಷದವರೆಗೆ 160 ಚದರ ಮೀಟರ್ ಸಾಲದ ಮೊತ್ತ ರೂ. 9 ಲಕ್ಷ. ಸಾಲದ ಅವಧಿ 20 ವರ್ಷ, ಬಡ್ಡಿ ಸಹಾಯ ಧನ(ಸಬ್ಸಿಡಿ ವಾರ್ಷಿಕ) 4%, ಬಡ್ಡಿ ಸಹಾಯಧನ (ಸಬ್ಸಿಡಿ ಮೊತ್ತ), ರೂ.2.35 ಲಕ್ಷ, ಉದ್ದೇಶ ನಿರ್ಮಾಣ/ ಖರೀದಿ/ಮರು ಖರೀದಿ.
ಎ0.ಐ.ಜಿ-2, ಆದಾಯ ಮಿತಿ (ವಾರ್ಷಿಕ) ರೂ.12.01 ಲಕ್ಷದಿ0ದ 18 ಲಕ್ಷದವರೆಗೆ 200 ಚದರ ಮೀಟರ್ ಸಾಲದ ಮೊತ್ತ ರೂ. 12 ಲಕ್ಷ ಸಾಲದ ಅವಧಿ 20 ವರ್ಷ, ಬಡ್ಡಿ ಸಹಾಯ ಧನ (ಸಬ್ಸಿಡಿ ವಾರ್ಷಿಕ) 4% ಬಡ್ಡಿ ಸಹಾಯಧನ ( ಸಬ್ಸಿಡಿ ಮೊತ್ತ), ರೂ.2.30 ಲಕ್ಷ, ಉದ್ದೇಶ ನಿರ್ಮಾಣ/ ಖರೀದಿ/ ಮರು ಖರೀದಿ.
ಹೆಚ್ಚಿನ ಮಾಹಿತಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಾದ ನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಅಥವಾ ತಮ್ಮ ಬ್ಯಾಂಕನ್ನು ಸಂಪರ್ಕಿಸಲು ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts