www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಪರಿಸ್ಥಿತಿ ಹೇಗೆ ಬೇಕಾದರೂ ಆಗಬಹುದು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾರೆ, ಅವರ ಪಕ್ಷ ಗಳಿಸಿದ ಸ್ಥಾನವನ್ನು ಗಮನಿಸಿ. ಹೀಗೆ ನಾವು 12 ಸ್ಥಾನಗಳಲ್ಲಷ್ಟೇ ಸ್ಪರ್ಧಿಸಿರಬಹುದು. ಆದರೆ ರಾಜಕೀಯವೇ ಬೇರೆ. ಅಧಿಕಾರ ಪಡೆಯಲು ನಾವು ಗೆಲ್ಲುವ ಸ್ಥಾನಗಳೂ ನಿರ್ಣಾಯಕ. ಫಲಿತಾಂಶ ಬಂದಾಗ ನೋಡಿ ಎಂದು ಕೆಲ ದಿನಗಳ ಹಿಂದಷ್ಟೇ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಧ್ಯಮ ಸಂವಾದದಲ್ಲಿ ಎಸ್.ಡಿ.ಪಿ.ಐ. ಬಂಟ್ವಾಳ ಪುರಸಭೆ ಘಟಕ ಅಧ್ಯಕ್ಷ ಮೊನೀಶ್ ಆಲಿ ಹೇಳಿದಾಗ ಪಕ್ಕದಲ್ಲೇ ಇದ್ದ ಕಾಂಗ್ರೆಸ್, ಬಿಜೆಪಿಯ ಪ್ರತಿನಿಧಿಗಳು ನಾವು ಬಹುಮತ ಇಲ್ಲದಿದ್ದರೆ ವಿರೋಧ ಪಕ್ಷದಲ್ಲಿ ಕೂರಲು ಸಿದ್ಧ ಎಂದಿದ್ದರು. ಆದರೆ ಪರಿಸ್ಥಿತಿ ಹೇಗಿದೆ ಎಂದರೆ ಬಿಜೆಪಿ 11, ಕಾಂಗ್ರೆಸ್ 12, ಎಸ್.ಡಿ.ಪಿ.ಐ. 4 ಸ್ಥಾನಗಳನ್ನು ಗಳಿಸಿದೆ. ಸೋಮವಾರದ ಫಲಿತಾಂಶದ ಚಿತ್ರಣ ಬಂಟ್ವಾಳದ ರಾಜಕೀಯ ಚಿತ್ರಣವನ್ನು ಬದಲಿಸಲೂಬಹುದು.
ಎಂಎಲ್ಎ ಮತ್ತು ಎಂಪಿ ಅವರ ಮತಗಳನ್ನು ಸೇರಿಸಿದರೆ ಬಿಜೆಪಿ 13, ಕಾಂಗ್ರೆಸ್ 12 ಮತ್ತು ಎಸ್.ಡಿ.ಪಿ.ಐ. 4 ಸ್ಥಾನ ಪಡೆಯುತ್ತದೆ. ಆದರೂ ಬಹುಮತ ಗಳಿಸಲು ಎಸ್.ಡಿ.ಪಿ.ಐ. ಕೈಗೊಳ್ಳುವ ನಿರ್ಧಾರ ನಿರ್ಣಾಯಕ. ಹೀಗಾಗಿ ಅಧಿಕಾರ ಗದ್ದುಗೆಗೆ ಎಸ್.ಡಿ.ಪಿ.ಐ ತಾನೇ ಏರುತ್ತಾ, ಅಥವಾ ಕಿಂಗ್ ಮೇಕರ್ ಆಗುತ್ತಾ ಎಂಬುದು ಕುತೂಹಲಕಾರಿ.
ಎಸ್.ಡಿ.ಪಿ.ಐ. ನಲ್ಲಿ ಕಳೆದ ಸಾಲಿನ ಸದಸ್ಯ ಮೊನೀಶ್ ಆಲಿ ಗೆದ್ದಿದ್ದರೆ, ಉಳಿದವರು ಹೊಸಬರು. ಕಳೆದ ಬಾರಿ 3 ಸ್ಥಾನ ಗಳಿಸಿದ್ದ ಪಕ್ಷ ಈ ಬಾರಿ ಬಲವರ್ಧನೆ ಮಾಡಿಕೊಂಡಿದೆ. ಹಾಗೂ ಕೆಲವು ಸ್ಥಾನಗಳಲ್ಲಿ ಉತ್ತಮ ಫೈಟ್ ಕೊಟ್ಟಿದೆ.
ಗೆದ್ದವರು ಇವರು.
ಮೊನೀಶ್ ಆಲಿ (8ನೇ ವಾರ್ಡ್)
ಇದ್ರಿಸ್ (23ನೇ ವಾರ್ಡ್)
ಸಂಶಾದ್ (ವಾರ್ಡ್ 13)
ಝೀನತ್ ಫಿರೋಜ್ (ವಾರ್ಡ್ 14)