www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಸೋಮವಾರ ನಡೆದ ಬಂಟ್ವಾಳ ಪುರಸಭೆ ಚುನಾವಣೆ ಫಲಿತಾಂಶ ಪ್ರಕ್ರಿಯೆ ಹಲವು ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಅವುಗಳಲ್ಲಿ ಒಂದು ಉಪಾಧ್ಯಕ್ಷರಾಗಿದ್ದ ಮಹಮ್ಮದ್ ನಂದರಬೆಟ್ಟು 4 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ 25 ಮಂದಿಯಲ್ಲಿ 12 ಮಂದಿ ಗೆಲುವು ಸಾಧಿಸಿದ್ದಾರೆ. (ಉಳಿದ ಪಕ್ಷಗಳ ಬಲಾಬಲ: ಬಿಜೆಪಿ 11, ಎಸ್.ಡಿ.ಪಿ.ಐ. 4). ಕಳೆದ ಬಾರಿ 23ರಲ್ಲಿ 13 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ ಈ ಬಾರಿ 27ರಲ್ಲಿ 12 ಸ್ಥಾನ ಗಳಿಸಿದ್ದು ಒಟ್ಟಾರೆಯಾಗಿ ನೋಡುವುದಾದರೆ ಸಂಖ್ಯಾಬಲದಲ್ಲಿ ಕಡಿಮೆ ಎನಿಸಿದೆ. ಆದರೆ ಇತರ ಪಕ್ಷಗಳಿಗೆ ಹೋಲಿಸಿದರೆ ಕಾಂಗ್ರೆಸ್ ಆಯ್ಕೆಯಾದವರಲ್ಲಿ ಹೆಚ್ಚು ಸ್ಥಾನ ಗಳಿಸಿದ ಪಕ್ಷ.
ಕಳೆದ ಬಾರಿಯ ವಿಧಾನಸಭೆ ಚುನಾವಣೆಯ ಫಲಿತಾಂಶದ ಬಳಿಕ ನಡೆದ ಪ್ರಥಮ ಮತದಾನ ಇದು. ಕಾಂಗ್ರೆಸ್ ಪರ ಜನರು ಬೆಂಬಲಕ್ಕಿರುವುದನ್ನು ಇದು ತೋರಿಸಿಕೊಟ್ಟಿದೆ ಎನ್ನುತ್ತಾರೆ ಬಂಟ್ವಾಳ ನ್ಯೂಸ್ ಜೊತೆ ಮಾತನಾಡಿದ ಮಾಜಿ ಸಚಿವರೂ ಚುನಾವಣೆಯಲ್ಲಿ ಪಕ್ಷದ ಸಾರಥ್ಯ ವಹಿಸಿದವರೂ ಆಗಿರುವ ಬಿ.ರಮಾನಾಥ ರೈ.
ಕಾಂಗ್ರೆಸ್ ನಿಂದ ಕಳೆದ ಸಾಲಿನ ಸದಸ್ಯರಾದ ರಾಮಕೃಷ್ಣ ಆಳ್ವ (ಮಾಜಿ ಅಧ್ಯಕ್ಷ), ಮಹಮ್ಮದ್ ನಂದರಬೆಟ್ಟು (ಮಾಜಿ ಉಪಾಧ್ಯಕ್ಷ), ವಾಸು ಪೂಜಾರಿ (ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ), ಗಂಗಾಧರ ಪೂಜಾರಿ, ಮಹಮ್ಮದ್ ಶರೀಫ್, ಜೆಸಿಂತಾ ಡಿಸೋಜ ಗೆದ್ದಿದ್ದಾರೆ. ನಾಮನಿರ್ದೇಶಿತ ಸದಸ್ಯರಾಗಿದ್ದ ಸಿದ್ದೀಕ್ ಗುಡ್ಡೆಯಂಗಡಿ ಬೃಹತ್ ಅಂತರದಲ್ಲಿ ಗೆದ್ದಿರುವುದು ವಿಶೇಷ. ಒಟ್ಟು 6 ಮಂದಿ ಮತ್ತೆ ಪುರಸಭೆಗೆ ಆಯ್ಕೆಗೊಂಡವರು.
ವಾರ್ಡ್ 1-ಲೊರೆಟ್ಟೊಪದವು: ಬಿ.ವಾಸು ಪೂಜಾರಿ (ಕಾಂಗ್ರೆಸ್),
ವಾರ್ಡ್ 2-ಮಂಡಾಡಿ: ಗಂಗಾಧರ ಪೂಜಾರಿ ಮಂಡಾಡಿ, (ಕಾಂಗ್ರೆಸ್),
ವಾರ್ಡ್ 5 ಜಕ್ರಿಬೆಟ್ಟು: ಜನಾರ್ಧನ ಚೆಂಡ್ತಿಮಾರ್ (ಕಾಂಗ್ರೆಸ್),
ವಾರ್ಡ್ 16-ನಂದರಬೆಟ್ಟು: ಮುಹಮ್ಮದ್ ನಂದರಬೆಟ್ಟು (ಕಾಂಗ್ರೆಸ್),
ವಾರ್ಡ್ 17-ಪರ್ಲಿಯಾ: ಲುಕ್ಮಾನ್ (ಕಾಂಗ್ರೆಸ್),
ವಾರ್ಡ್ 18-ಶಾಂತಿ ಅಂಗಡಿ: ಹಸೈನಾರ್ (ಕಾಂಗ್ರೆಸ್),
ವಾರ್ಡ್ 19-ಅದ್ದೇಡಿ: ಮುಹಮ್ಮದ್ ಶರೀಫ್ (ಕಾಂಗ್ರೆಸ್),
ವಾರ್ಡ್ 20-ಮೊಡಂಕಾಪು: ಲೋಲಾಕ್ಷ ಶೆಟ್ಟಿ
ವಾರ್ಡ್ 21-ತಲಪಾಡಿ: ರಾಮಕೃಷ್ಣ ಆಳ್ವ (ಕಾಂಗ್ರೆಸ್)
ವಾರ್ಡ್ 24-ಆಲಡ್ಕ: ಅಬೂಬಕರ್ ಸಿದ್ದೀಕ್ ಗುಡ್ಡೆಅಂಗಡಿ (ಕಾಂಗ್ರೆಸ್),
ವಾರ್ಡ್ 25-ಬೋಳಂಗಡಿ: ಜೆಸಿಂತಾ ಡಿಸೋಜ (ಕಾಂಗ್ರೆಸ್),
ವಾರ್ಡ್ 26-ಮೆಲ್ಕಾರ್: ಗಾಯತ್ರಿ ಪ್ರಕಾಶ್ (ಕಾಂಗ್ರೆಸ್),