ಪುರಸಭೆ ಚುನಾವಣೆ (ಆಗಸ್ಟ್ 31) ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಇವಿಎಂ ಗಳಿಗೆ ಮತಪತ್ರ ಅಳವಡಿಸುವ ಪ್ರಕ್ರಿಯೆ ನಡೆಯಿತು.
ಮಾಸ್ಟರ್ ಟ್ರೈ ನರ್ ಪ್ರೊ. ನಾರಾಯಣ ಭಂಡಾರಿ ಮಾರ್ಗದರ್ಶನ ನೀಡಿದರು. ಮಾದರಿ ನೀತಿ ಸಂಹಿತೆ ಅಧಿಕಾರಿ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ
ಚುನಾವಣಾ ಅಧಿಕಾರಿಗಳಾದ ಮೋಹನ್ ಕುಮಾರ್, ರಾಜೇಶ್, ನೋಣಯ್ಯ ನಾಯ್ಕ್, ಸಹಾಯಕ ಚುನಾವಣಾ ಅಧಿಕಾರಿಗಳಾದ ಶಿವಾನಂದ ಪೂಜಾರಿ, ವೇದವ, ಶ್ರೀಧರ, ಸೆಕ್ಟರ್ ಅಧಿಕಾರಿಗಳಾದ ಪ್ರೀತಮ್, ಜಗದೀಶ್, ಮೋಹನ್ ಎನ್ , ವಿಟ್ಲ ನಾಡಕಚೇರಿ ಉಪ ತಹಶೀಲ್ದಾರ್ ರವಿಶಂಕರ್ , ತಾಲೂಕು ಕಚೇರಿ ಉಪ ತಹಶೀಲ್ದಾರ್ ರಾಜೇಶ್ ನಾಯ್ಕ್ , ಚುನಾವಣೆ ಶಾಖೆಯ ಪ್ರಭಾರ ಉಪತಹಶೀಲ್ದಾರ್ ಸೀತಾರಾಮ, ಪ್ರಥಮ ದರ್ಜೆ ಸಹಾಯಕ ರಾಜ್ ಕುಮಾರ್ ದ್ವಿತೀಯ ದರ್ಜೆ ಸಹಾಯಕ ವಿನಯ್ ನಾಗರಾಜ್, ವಿಷು ಕಮಾರ್ ಹಾಜರಿದ್ದರು.
ಮತ ಯಂತ್ರಗಳಿಗೆ ಪತ್ರ ಅಳವಡಿಸುವ ಪ್ರಕ್ರಿಯೆಯನ್ನು ಕಂದಾಯ ನಿರೀಕ್ಷಕರಾದ ರಾಮ ಕಾಟಿಪಳ್ಳ, ದಿವಾಕರ ಮುಗುಳಿಯ, ನವೀನ್ ಬೆಂಜನ ಪದವು
ಗ್ರಾಮ ಕರಣಿಕರಾದ ಕುಮಾರ್ ಟಿ ಸಿ ಜನಾರ್ಧನ ಜೆ ,ಪ್ರಕಾಶ್, ಮಂಜುನಾಥ್ ಕೆ ಎಚ್, ಯೋಗಾನಂದ, ತೌಪೀಕ್ ತಾಲೂಕು ಕಚೇರಿ ಸಿಬಂದಿಗಳಾದ ತೋಮಸ್ ಡಿ’ಸೋಜ, ಅಶೋಕ ಗ್ರಾಮ ಸಹಾಯಕರಾದ ಲಕ್ಷ್ಮಣ, ಸುಂದರ, ಶೀತಲ್, ಶಿವರಾಜ್, ವಸಂತ, ನಡೆಸಿ ಕೊಟ್ಟರು. ಪುರಸಭಾ ಚುನಾವಣಾ ವಿಶೇಷ ವೀಕ್ಷಕರಾದ ಶ್ರೀಮತಿ ಜ್ಯೋತಿ ಕೆ ಹಾಗೂ ಸಾಮಾನ್ಯ ವೀಕ್ಷಕರಾದ ಬಾಲಚಂದ್ರ ಎಸ್ ಎನ್ ಅವರು ಆಗಮಿಸಿ ಸದ್ರಿ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಿದರು. ಲೈಸನಿಂಗ್ ಆಫೀಸರ್ ಆದ ಸುಶ್ಮಿತ ಹಾಗೂ ಗಣೇಶ್ ಜೊತೆಗಿದ್ದರು. ರಾಜಕೀಯ ಪಕ್ಷಗಳ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.