ಬಂಟ್ವಾಳ

ನಾರಾಯಣ ಗುರುಗಳ ಚಿಂತನೆ ಹಾಗೂ ತತ್ವಾದರ್ಶ ಸಾರ್ವಕಾಲಿಕ

ಶೋಷಿತಕುಟುಂಬದಲ್ಲಿ ಹುಟ್ಟಿ ತನ್ನ ಪರಿಶ್ರಮದಿಂದಲೇ ಸಂತನಾಗಿ ಬೆಳೆದು ಅನಿಷ್ಠ ಪದ್ದತಿಗಳ ವಿರುದ್ದ ಅಹಿಂಸಾ ಮಾರ್ಗದಲ್ಲೇ ಹೋರಾಡಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆ ಹಾಗೂ ತತ್ವಾದರ್ಶ ಸಾರ್ವಕಾಲಿಕ ಸತ್ಯ ಎಂದು ಪತ್ರಕರ್ತ ಸಂದೀಪ್ ಸಾಲ್ಯಾನ್ ಹೇಳಿದರು.
ಯುವವಾಹಿನಿ ಬಂಟ್ವಾಳ ತಾಲೂಕು ಘಟಕದಆಶ್ರಯದಲ್ಲಿ ಬಿ.ಸಿ.ರೋಡಿನ ಸಮಾಜಕಲ್ಯಾಣ ಇಲಾಖಾ ವಸತಿ ಶಾಲೆಯಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರುವರ್ಯರ ೧೬೪ ನೇ ಜನ್ಮದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಜಾಹೀರಾತು

ಸಂತನಾಗಿ ಉಳಿಯದೆ ದೇಶ ಸೇವೆಯೇ ಈಶ ಸೇವೆನ್ನುವಕಲ್ಪನೆಯನ್ನಿಟ್ಟುಕೊಂಡುತನ್ನಜೀವನವನ್ನು ಶೋಷಿತರ ಉದ್ದಾರಕ್ಕಾಗಿಯೇ ಮೀಸಲಿಟ್ಟವರು. ದೇವಸ್ಥಾನ ನಿರ್ಮಾಣ ಮಾಡಿ ಜನರ ಬಳಿಗೆ ದೇವರನ್ನುಕರೆತಂದವರು, ಕೆಳವರ್ಗದ ಜನರಲ್ಲಿದ್ದ ಮೌಢ್ಯಗಳನ್ನು ದೂರ ಮಾಡಿ ಜ್ಞಾನದ ಬೆಳಕನ್ನು ನೀಡಿದವರು.ಆದರೆ ಬೇರೆ ಬೇರೆ ಕಾರಣಗಳಿಗೆ ಜಾತಿ, ಧರ್ಮ, ದೇವರ ಹೆಸರಿನಲ್ಲಿ ಇಂದಿಗೂ ಅಸಮಾನತೆಗಳು ಕಾಣುತ್ತಿದ್ದು ಬ್ರಹ್ಮಶ್ರೀ ನಾರಾಯಣ ಗುರುಗಳು ಅಂದು ಭೋದಿಸಿದ ಸಂದೇಶ ಈ ಕಾಲಘಟಕ್ಕೂ ಪ್ರಸ್ತುತ ಎಂದರು. ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಶಿವಾನಂದ ಎಂ ಅಧ್ಯಕ್ಷತೆಯನ್ನು ವಹಿಸಿದ್ದರು.

ಯುವವಾಹಿನಿ ಬಂಟ್ವಾಳ ಘಟಕದ ಸಲಹೆಗಾರರು ಬಿ.ತಮ್ಮಯ, ಅಣ್ಣು ಪೂಜಾರಿ, ನಾರಾಯಣಗುರು ತತ್ವಪ್ರಚಾರ ಅನುಷ್ಟಾನ ನಿರ್ದೇಶಕ ದಯಾನಂದ ತುಂಬೆ, ಸಮಾಜ ಕಲ್ಯಾಣ ಇಲಾಖಾ ವಸತಿ ಶಾಲಾ ಶಿಕ್ಕಕಿಯರಾದ ಸವಿತಾ, ಚೇತನಾ, ಯುವವಾಹಿನಿಯ ಮಾಜಿ ಅಧ್ಯಕ್ಷರಾದ ರಾಮಚಂದ್ರ ಸುವರ್ಣ, ಕಾರ್ಯದರ್ಶಿ ಕಿರಣ್‌ರಾಜ್, ಕೋಶಾಧಿಕಾರಿ ಗಣೇಶ್ ಮಣಿ, ಲೋಕೇಶ್ ಸುವರ್ಣ ಅಲೆತ್ತೂರು, ಗಣೇಶ್ ಪೂಂಜರೆಕೋಡಿ, ಲೋಕೇಶ್ ಪಿ.ಜೆ, ಪ್ರವೀಣ್ ತುಂಬೆ, ಮಲ್ಲಿಕಾ ಪಚ್ಚಿನಡ್ಕ, ಭವಾನಿ ಅಮೀನ್ , ನಾರಾಯಣ ಅಮೀನ್, ಶ್ರೀಧರ ಪೂಜಾರಿ, ಯೋಗೀಶ್ ಕಲ್ಲಡ್ಕ, ರಚನಾ, ನಾಗೇಶ್ ಏಲಾಬೆ, ಹರೀಶ್ ಕುದನೆ, ನಾಗೇಶ್ ನೈಬೇಲು, ಸುನಿಲ್ ಮರ್ದೋಳಿ ಮತ್ತಿತರರು ಉಪಸ್ಥಿತರಿದ್ದರು.

ಮಾಜಿ ಅಧ್ಯಕ್ಷ ಪ್ರೇಮನಾಥ್ ಕೆ. ಸ್ವಾಗತಿಸಿದರು, ಉಪಾಧ್ಯಕ್ಷ ನಾಗೇಶ್ ಎಂ ವಂದಿಸಿದರು, ರಾಜೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ