ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮ ಕಾವಳಕಟ್ಟೆ-ಬೆಂಗತ್ತೋಡಿ ರಸ್ತೆ ಹಾನಿಯಾಗಿದ್ದು, ದುರಸ್ತಿಗೆ ಸ್ಥಳೀಯರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ದುರಸ್ತಿಗೊಳಿಸುವಂತೆ ಸಿಎಂ ಕಚೇರಿಯಿಂದ ಜಿಲ್ಲಾಧಿಕಾರಿಗೆ ಸೂಚನೆ ಹೊರಡಿಸಲಾಗಿದೆ.
ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮ ಕಾವಳಕಟ್ಟೆ-ಬೆಂಗತ್ತೋಡಿ ರಸ್ತೆ ಹಾನಿಯಾಗಿದ್ದು, ಮೊನ್ನೆ ಸುರಿದ ಭಾರೀ ಮಳೆಯಿಂದಾಗಿ ಭಾಗಶಃ ಹಾನಿಗೊಂಡಿರುತ್ತದೆ. ಕಳೆದ ಸುಮಾರು 15 ವರ್ಷಗಳಿಂದ ಈ ರಸ್ತೆಯ ನಿರ್ವಹಣೆ ಸಮರ್ಪಕವಾಗಿ ನಡೆದಿರುವುದಿಲ್ಲ. ಇದೀಗ ರಸ್ತೆಯು ಸಂಪೂರ್ಣವಾಗಿ ಹಾನಿಗೊಂಡಿದ್ದು, ವಾಹನ ಸಂಚಾರಕ್ಕೆ ಭಾರೀ ತೊಂದರೆ ಉಂಟಾಗಿರುವುದಾಗಿದೆ. ಈ ಭಾಗದಲ್ಲಿ ನೂರಾರು ಮನೆಗಳಿದ್ದು, ರಸ್ತೆಯ ಸಂಚಾರ ಅಗತ್ಯವಾಗಿರುತ್ತದೆ. ರಸ್ತೆ ಹಾನಿಗೊಂಡಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿರುವ ನಿತ್ಯವೂ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾಥರ್ಿಗಳು ಅದರಲ್ಲೂ ಮುಖ್ಯವಾಗಿ ಹೆಣ್ಮಕ್ಕಳಿಗೆ ಬಹಳಷ್ಟು ಕಷ್ಟಕರವಾಗಿರುತ್ತದೆ. ರಸ್ತೆ ಹಾನಿಗೊಂಡಿರುವುದರಿಂದ ನಿತ್ಯವೂ ಎದುರಾಗುತ್ತಿರುವ ಸಮಸ್ಯೆಗಳಿಗೆ ತಾವುಗಳು ವೈಯಕ್ತಿಕ ಗಮನ ಹರಿಸಿ, ರಸ್ತೆ ದುರಸ್ತಿ, ಡಾಮಾರೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು.
ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿಗಳ ಕಚೇರಿ, ಮನವಿಯನ್ನುಪರಿಶೀಲಿಸಿ, ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ
ಕೈಗೊಂಡ ಕ್ರಮದ ಬಗ್ಗೆ ಮಾಹಿತಿಯನ್ನು ಅರ್ಜಿದಾರರಿಗೆ ಮತ್ತು ಮುಖ್ಯಮಂತ್ರಿಯವರ ಕಚೇರಿಗೆ ತಿಳಿಸಲು ಜಿಲ್ಲಾಧಿಕಾರಿಗೆ ಕೋರಿದೆ.