ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ದಿಂದ ಹಲವು ತೊಂದರೆಗಳು ಉಂಟಾಗಿದ್ದು ಹಲವಾರು ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಸಂಪಾಜೆಯಲ್ಲಿ 2 ಗಂಜಿ ಕೇಂದ್ರಗಳಿಗೆ ಬಂಟ್ವಾಳ ತಾಲೂಕು ತಹಶೀಲ್ಧಾರ್ ಪುರಂದರ ಹೆಗ್ಡೆ, ವಿಟ್ಲ ಕಂದಾಯ ನಿರೀಕ್ಷಕರಾದ ದಿವಾಕರ ಮುಗುಳ್ಯ, ಗ್ರಾಮ ಸಹಾಯಕರಾದ ರಾಘವ ಗೌಡ ಉರಿಮಜಲು, ಯತೀಶ್ ಹಡೀಲು ಮತ್ತು ಸ್ನೇಹಿತರೊಂದಿಗೆ ಸೇರಿ 10 ಬಾಕ್ಸ್ ನೀರು ಬಾಟಲ್. 4 ಬಾಕ್ಸ್ ಬಿಸ್ಕತ್. 3 ಬಾಕ್ಸ್ ರಸ್ಕ್. 5 ಗೊನೆ ಬಾಳೆಹಣ್ಣು. 25 ಬಾತ್ ಸೋಪ್. 5 ಗೋಣಿ ಬಟ್ಟೆಗಳನ್ನು ನೀಡಲಾಯಿತು.