ಬಂಟ್ವಾಳ ಪುರಸಭಾ ಚುನಾವಣೆಗೆ ಸಂಬಂಧಿಸಿ ಬಂಟ್ವಾಳ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಗಳು ಪುರಸಭೆಯ 27 ವಾಡ್೯ಗಳ ಪಕ್ಷದ ಮತ್ತು ಪಕ್ಷ ಬೆಂಬಲಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಸಂಜೆ ಬಿಡುಗಡೆಗೊಳಿಸಿದೆ. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷ ಅಬ್ಬಾಸ್ ಆಲಿ, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್ ಪಟ್ಟಿ ಬಿಡುಗಡೆಗೊಳಿಸಿದರು. ಇವುಗಳಲ್ಲಿ ಜೆಡಿಎಸ್ ಮತ್ತು ಸಿಪಿಐ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡ ಕಾರಣ, ತಲಾ ಒಂದು ಸ್ಥಾನವನ್ನು ಅವುಗಳಿಗೆ ಬಿಟ್ಟುಕೊಟ್ಟಿದೆ. ಕಳೆದ ಬಾರಿಯ ಅಧ್ಯಕ್ಷರಾದ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮದ್ ನಂದರಬೆಟ್ಟು, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಾಸು ಪೂಜಾರಿ, ಸದಸ್ಯರಾದ ಮಹಮ್ಮದ್ ಶರೀಫ್, ಜಸಿಂತಾ, ಗಂಗಾಧರ, ಜಗದೀಶ ಕುಂದರ್ ಈ ಪಟ್ಟಿಯಲ್ಲಿ ಇದ್ದಾರೆ.
ವಾರ್ಡ್-ಅಭ್ಯರ್ಥಿಗಳ ವಿವಿರ:
ವಾರ್ಡ್–1 (ಲೊರೆಟ್ಟೊಪದವು)-ಬಿ.ವಾಸುಪೂಜಾರಿ
ವಾರ್ಡ್ 2 (ಮಂಡಾಡಿ) ಗಂಗಾಧರ ಪೂಜಾರಿ
ವಾರ್ಡ್–3(ಮಣಿ) ಹೇಮಾವತಿ ಮಣಿ
ವಾರ್ಡ್–4(ಕಾಲೇಜು ರಸ್ತೆ) ಪ್ರತಿಮಾ ರವಿ ಕುಮಾರ್
ವಾರ್ಡ್–5 (ಜಕ್ರಿಬೆಟ್ಟು) ಜನಾರ್ಧನ ಚೆಂಡ್ತಿಮಾರ್
ವಾರ್ಡ್ –6 (ಹೊಸ್ಮರ್) ಜಯಂತಿ ಸೋಮಪ್ಪ ಪೂಜಾರಿ
ವಾರ್ಡ್ –7( ಬಂಟ್ವಾಳ ಪೇಟೆ) ಧನವಂತಿ ಮಹಾಬಲ ಬಂಗೇರ
ವಾರ್ಡ್ –8 (ಕೆಳಗಿನಪೇಟೆ) ಸಗೀರ್ ಬಿ.ಎಲ್.
ವಾರ್ಡ್–9 (ಭಂಡಾರಿಬೆಟ್ಟು) ಜಗದೀಶ್ ಕುಂದರ್
ವಾರ್ಡ್–10 (ಕಾಮಾಜೆ) ವಸಂತಿ ಶೇಖರ(ಕಮ್ಯೂನಿಸ್ಟ್)
ವಾರ್ಡ್–11(ಸಂಚಯಗಿರಿ) ಸುಜಾತ
ವಾರ್ಡ್ 12 (ಅಜ್ಜಿಬೆಟ್ಟು) ವಸಂತಿ (ಜೆಡಿಎಸ್)
ವಾರ್ಡ್ 13 (ಗೂಡಿನಬಳಿ) ನೆಫಿಸಾ ಹನೀಫ್
ವಾರ್ಡ್ 14 (ಜೋಡುಮಾರ್ಗ-ಕೈಕುಂಜೆ) ಶೆಹನಾಝ್ ರಹೀಂ
ವಾರ್ಡ್ 15 (ಎಪಿಎಂಸಿ – ಕೈಕುಂಜೆ) ಲೋಕೇಶ್ ಸುವರ್ಣ
ವಾರ್ಡ್ –16 (ನಂದರಬೆಟ್ಟು) ಮುಹಮ್ಮದ್ ನಂದರಬೆಟ್ಟು
ವಾರ್ಡ್ –17 (ಪರ್ಲಿಯಾ) ಲುಕ್ಮಾನ್
ವಾರ್ಡ್ –18 (ಶಾಂತಿ ಅಂಗಡಿ) ಹಸೈನಾರ್
ವಾರ್ಡ್ –19 (ಅದ್ದೇಡಿ) ಮುಹಮ್ಮದ್ ಶರೀಫ್
ವಾರ್ಡ್ –20 (ಮೊಡಂಕಾಪು) ಲೋಲಾಕ್ಷ ಶೆಟ್ಟಿ
ವಾರ್ಡ್ –21 (ತಲಪಾಡಿ) ರಾಮಕೃಷ್ಣ ಆಳ್ವ
ವಾರ್ಡ್ –22 (ಪಲ್ಲಮಜಲು) ನಳಿನಾಕ್ಷಿ ಆನಂದ ಕುಲಾಲ್
ವಾರ್ಡ್ –23 (ಜೈನರಪೇಟೆ) ಮುಹಮ್ಮದ್ ನಿಸಾರ್
ವಾರ್ಡ್– 24 (ಆಲಡ್ಕ) ಅಬೂಬಕರ್ ಸಿದ್ದೀಕ್ ಗುಡ್ಡೆಅಂಗಡಿ
ವಾರ್ಡ್– 25 (ಬೋಳಂಗಡಿ) ಜೆಸಿಂತಾ
ವಾರ್ಡ್– 26 ಮೆಲ್ಕಾರ್) ಗಾಯತ್ರಿ ಪ್ರಕಾಶ್
ವಾರ್ಡ್– 27 (ಬೊಂಡಾಲ) ಸುರೇಶ್ ನಾಯ್ಕ