ಬಂಟ್ವಾಳ

ಗತವೈಭವ ನೆನಪಿಸಲು ಆಟಿಡೊಂಜಿ ಕೂಟ ಅಗತ್ಯ: ಸ್ಮಿತೇಶ್ ಬಾರ್ಯ

ತುಳುನಾಡಿನ ಗತವೈಭವ ನೆನಪಿಸಲು ಆಟಿಡೊಂಜಿ ಕೂಟದಂಥ ಕಾರ್ಯಕ್ರಮಗಳು ಅಗತ್ಯ ಎಂದು ಎಸ್.ಡಿ.ಎಂ. ಕಾಲೇಜು ಉಪನ್ಯಾಸಕ ಸ್ಮಿತೇಶ್ ಎಸ್. ಬಾರ್ಯ ಹೇಳಿದರು.

ಜಾಹೀರಾತು

ಯುವವಾಹಿನಿ ಬಂಟ್ವಾಳ ತಾಲೂಕು ಬಂಟ್ವಾಳದಲ್ಲಿ ಏರ್ಪಡಿಸಿದ್ದ ಆಟಿಡೊಂಜಿ ಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನೆಲ ಮೂಲ ಸಂಸ್ಕೃತಿಯನ್ನು ನಂಬಿಕೊಂಡು ಬಂದವರು ತುಳುವರು, ಅವರ ಪ್ರತಿಯೊಂದು ಆಚರಣೆಗಳು ಮೂಲ ನಂಬಿಕೆಯಿಂದ ಕೂಡಿತ್ತು, ಇದಕ್ಕೆ ವೈಜ್ಞಾನಿಕ ಹಿನ್ನಲೆ ಇರುವುದು ವಿಶೇಷ. ಎಲ್ಲರೂ ಕೂಡಿ ಆಚರಿಸುವ ಆಟಿಡೊಂಜಿ ಕೂಟ ಎನ್ನುವ ಇಂತಹ ಕಾರ್ಯಕ್ರಮಗಳು ಇಂದಿನ ಯುವ ಪೀಳಿಗೆಗೆ ತುಳುನಾಡಿನ ಗತವೈಭವವನ್ನು ನೆನಪಿಸುತ್ತದೆ. ಇಂತಹ ಸಂಸ್ಕೃತಿ, ಸಂಸ್ಕಾರಯುತ ಆಚರಣೆಗಳು ಬದುಕನ್ನು ಶ್ರೀಮಂತವಾಗಿಸುತ್ತದೆ ಎಂದು ಅವರು ಹೇಳಿದರು.

ಹಿರಿಯರ ಆರಾಧನೆ ಸಂಪ್ರದಾಯದಂತೆ ಆಟಿ ತಿಂಗಳ ವೈವಿಧ್ಯಮಯ ತಿಂಡಿ ತಿನಿಸುಗಳನ್ನು ಬಡಿಸುವ ಮೂಲಕ ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ವಿಶಿಷ್ಠವಾಗಿ ಉದ್ಘಾಟಿಸಿದರು

ಜಾಹೀರಾತು

ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಶಿವಾನಂದ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಯುವವಾಹಿನಿ ಬಂಟ್ವಾಳ ಘಟಕವು ಯಶಸ್ವೀ ಕಾರ್ಯಕ್ರಮಗಳ ಮೂಲಕ ಜನಮಾನಸದಲ್ಲಿ ನೆಲೆ ನಿಂತಿದೆ. ತನ್ನದೇಆದ ವೈಶಿಷ್ಟ್ಯದ ಮುಖಾಂತರ ಸಮಾಜದ ಬಡಜನರ ದ್ವನಿಯಾಗಿದೆ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ತಿಳಿಸಿದರು.

ಈ ಸಂದರ್ಭದಲ್ಲಿಹಿರಿಯ ನಾಟಿ ವೈದ್ಯರಾದ ಮೀನಾಕ್ಷಿ ನಾರಾಯಣ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು.

ಜಾಹೀರಾತು

ಯುವವಾಹಿನಿಯ ಮುಖವಾಣಿ ಜುಲೈ ತಿಂಗಳ ಮಾಸಿಕ ಯುವಸಿಂಚನ ಪತ್ರಿಕೆಯನ್ನು ಯುವವಾಹಿನಿ ಕೇಂದ್ರ ಸಮಿತಿಯ ಸಾಂಸ್ಕೃತಿಕ ನಿರ್ದೇಶಕ ಭುವನೇಶ್ ಪಚ್ಚಿನಡ್ಕ ಬಿಡುಗಡೆಗೊಳಿಸಿದರು.ಸಂಪಾದಕಿ ಶುಭಾ ರಾಜೇಂದ್ರ ಉಪಸ್ಥಿತರಿದ್ದರು.

ವಕೀಲರಾದ ಸುರೇಶ್ ಪೂಜಾರಿ, ಬಂಟ್ವಾಳ ತಾಲೂಕು ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿಯ ಅಧ್ಯಕ್ಷೆ ಜಯಲಕ್ಷ್ಮಿ ಭುವನೇಶ್, ಉದ್ಯಮಿ ಸತೀಶ್ ಕುಮಾರ್, ಸಲಹೆಗಾರ ಬಿ.ತಮ್ಮಯ, ಹಿರಿಯರಾದ ಮುತ್ತಪ್ಪ ಪೂಜಾರಿ ಮುಖ್ಯಅತಿಥಿಯಾಗಿ ಭಾಗವಹಿಸಿದ್ದರು. ಕೋಶಾಧಿಕಾರಿ ಗಣೇಶ್ ಪೂಜಾರಿ ಮಣಿ, ಉಪಾಧ್ಯಕ್ಷ ನಾಗೇಶ್ ಎಮ್, ಸತೀಶ್ ಪೂಜಾರಿ ಬಾಯಿಲ, ಜತೆ ಕಾರ್ಯದರ್ಶಿ ರಚನಾ ಕರ್ಕೇರ, ಸಾಂಸ್ಕೃತಿಕ ನಿರ್ದೇಶಕಿ ಶೈಲಜಾ ರಾಜೇಶ್, ಸಂಚಾಲಕರಾದ ನಾರಾಯಣ ಪೂಜಾರಿ ಪಲ್ಲಿಕಂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಾಜಿ ಅಧ್ಯಕ್ಷರಾಜೇಶ್ ಸುವರ್ಣ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಕಿರಣ್‌ರಾಜ್ ಪೂಂಜರೆಕೋಡಿ ಸ್ವಾಗತಿಸಿದರು, ಕಾರ್ಯಕ್ರಮ ಸಂಚಾಲಕಿ ಸುಲತಾ ಕೀರ್ತನ್ ವಂದಿಸಿದರು.ದಿನೇಶ್ ಸುವರ್ಣ ರಾಯಿ ಹಾಗೂ ಬಿ.ಶ್ರೀಧರ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು

ಕೃಷಿಕರ ಬದುಕನ್ನು ಬಿಂಬಿಸುವ ಕಲಾತ್ಮಕ ವೇದಿಕೆ ಹಾಗೂ ಅತಿಥಿಗಳು ಮಾತಾಡುವ ಪೋಡಿಯಂ ಎಲ್ಲರ ಆಕರ್ಷಣೆಯ ಕೇಂದ್ರವಾಯಿತು. ಸಭಾಕಾರ್ಯಕ್ರಮದ ಬಳಿಕ ಕಾಮಿಡಿ ಪ್ರೀಮಿಯರ್ ಲೀಗ್ ನಲ್ಲಿ ಪ್ರಥಮ ಪ್ರಶಸ್ತಿ ವಿಜೇತ ವೈಷ್ಣವಿ ಕಲಾವಿದರು ಕೊಯಿಲ ಇವರಿಂದ ಕುಸಲ್ಧ ಗೌಜಿ ತುಳು ಹಾಸ್ಯ ಪ್ರದರ್ಶನ ಹಾಗೂ ಯುವವಾಹಿನಿ ಕಲಾವಿದರಿಂದ ಹಾಡು, ನೃತ್ಯ ಪ್ರದರ್ಶನ ನಡೆಯಿತು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ