ಬಂಟ್ವಾಳ

ಆಗಸ್ಟ್ 10ರಂದು ಕೇಂದ್ರ ನೀತಿ ವಿರೋಧಿಸಿ ಸಿಪಿಐ ಜನಾಂದೋಲನ

ಕೇಂದ್ರ ಸರಕಾರದ ನೀತಿಗಳನ್ನು ವಿರೋಧಿಸಿ ಸಿಪಿಐ ವಿರುದ್ಧ ಆಗಸ್ಟ್ 10ರಂದು ಜನಾಂದೋಲನ ನಡೆಯಲಿದೆ.

ಜಾಹೀರಾತು

ಸಿಪಿಐ ದ.ಕ.ಜಿಲ್ಲಾ ಸಹಕಾರ್ಹಯದರ್ಶಿ ಬಿ.ಶೇಖರ್ ಈ ವಿಷಯವನ್ನು ಬಂಟ್ವಾಳ ಎ.ಶಾಂತಿರಾಮ್ ಪೈ ಸ್ಮಾರಕ ಭವನದಲ್ಲಿ ಜರುಗಿದ ಸಿಪಿಐ ತಾಲೂಕು ಸರ್ವಸದಸ್ಯರ ಸಭೆಯಲ್ಲಿ ತಿಳಿಸಿದರು.

ಒಳ್ಳೆಯ ದಿನಗಳು ಬರಲಿದೆ ಎಂದು ಜನತೆಗೆ ಬರೇ ಭರವಸೆಗಳಷ್ಟನ್ನೇ ನೀಡಿದೆಯೇ ಹೊರತು ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ಈ ನಡುವೆ ಅಧಿಕಾರವನ್ನು ಶಾಶ್ವತ ಉಳಿಸಿಕೊಳ್ಳಲು ಜನರ ಗಮನವನ್ನು ಅನಗತ್ಯ ವಿಚಾರಗಳಿಗೆ ಕೇಂದ್ರೀಕರಿಸಿ ನೈಜ ಸಮಸ್ಯೆಗಳನ್ನು ಜೀವಂತವಾಗಿಸುವ ಪ್ರಯತ್ನಗಳಾಗುತ್ತಿದ್ದು ಸರಕಾರದ ಈ ಅನೀತಿಗಳ ವಿರುದ್ಧ  ಜನತೆ ಎಚ್ಚೆತ್ತು ಸಂಘಟಿತ ಶಕ್ತಿಯನ್ನು ಪ್ರದರ್ಶಿಸುವ ಮೂಲಕ ಸರಕಾರವನ್ನು ಕಿತ್ತೊಗೆಯಬೇಕು ಎಂದು ಬಿ.ಶೇಖರ್ ಅಭಿಪ್ರಾಯಪಟ್ಟರು.

ನರೇಂದ್ರ ಮೋದಿ ಅವರ ಯೋಜನೆಗಳು ಅವೈಜ್ಞಾನಿಕವಾಗಿದ್ದು ಯಾವುದೂ ಸಫಲವಾಗಿಲ್ಲ. ಜನ್ ಧನ್ ಖಾತೆ ತೆರೆಸಿ 15 ಲಕ್ಷ ಹಾಕುವ ಭರವಸೆಗಳು ಹುಸಿಯಾಗಿದೆ. ನೋಟು ಅಮಾನ್ಯೀಕರಣಗೋಳಿಸಿ ಕಪ್ಪು ಹಣ ವಾಪಾಸು ತರುವ ತಂತ್ರ ಸುಳ್ಳಾಗಿದೆ‌. ಒಂದು ದೇಶ ಒಂದು ತೆರಿಗೆ ಎಂದು ಘೋಷಿಸಿ ಜಿ ಎಸ್ ಟಿ ಜ್ಯಾರಿಗೊಳಿಸಿದ ಪರಿಣಾಮ ಈಗಾಗಲೇ ಸಣ್ಣಪುಟ್ಟ ಉದ್ದಿಮೆಗಳು ಮುಚ್ಚಲು ಪರೋಕ್ಷವಾಗಿ ಸರಕಾರವೇ ಪ್ರೇರೇಪಿಸಿದಂತಾಗಿದೆ.ಬೆಲೆ ಏರಿಕೆಯನ್ನು ತಡೆಗಟ್ಟುತ್ತೇವೆಂದು ಹೇಳಿ ಅಧಿಕಾರಕ್ಕೆ ಬಂದ ನಂತರ ಅಡುಗೆ ಅನಿಲ ಸಿಲಿಂಡರ್ ಬೆಲೆ ಗಗನಕ್ಕೇರಿದೆ. ಉದ್ಯೋಗದ ಭರವಸೆಗಳು ಪೊಳ್ಳಾಗಿದೆ. ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತಂದು ಕಾರ್ಮಿಕರ ಹಕ್ಕುಗಳನ್ನು ಹತ್ತಿಕ್ಕಲಾಗಿದೆ. ಒಟ್ಪಾರೆಯಾಗಿ ಇದೊಂದು ಜನವಿರೋಧಿ,ಕಾರ್ಮಿಕ ವಿರೋಧಿ ಕೆಟ್ಟ ಸರಕಾರವಾಗಿದ್ದು ಭವಿಷ್ಯದಲ್ಲಿ ಈ ಸರಕಾರ ಅಧಿಕಾರಕ್ಕೆ ಬಾರದಂತೆ ತಡೆಯುವ ಉದ್ದೇಶದಿಂದ ಸರಕಾರ ತೊಲಗಿಸಿ ದೇಶ ರಕ್ಷಿಸಿ ಎಂಬ ಘೋಷಣೆಯಡಿಯಲ್ಲಿ ಜನಾಂದೋಲ ರೂಪಿಸಲು ಪಕ್ಷದ ರಾಷ್ಟ್ರೀಯ ಮಂಡಳಿ ಕರೆ ನೀಡಿರುವ ಹಿನ್ನೆಲೆಯಲ್ಲಿ ಬಿಸಿರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಆಗಸ್ಟ್ 10 ರಂದು ಭಾರತ ಕಮ್ಯುನಿಸ್ಟ್ ಪಕ್ಷದ ತಾಲೂಕು ಸಮಿತಿ ಆಶ್ರಯದಲ್ಲಿ ಕೇಂದ್ರದ ದುರಾಡಳಿತ ವಿರುದ್ಧ ಜನಾಂದೋಲನ ಸಮಾವೇಶ ಜರುಗಲಿದೆ. ತಾಲೂಕಿನ ವಿವಿಧ ಸ್ತರಗಳಲ್ಲಿ ದುಡಿಯುವ ಕಾರ್ಮಿಕರು,ಮಹಿಳೆಯರು, ರೈತರು,ವಿದ್ಯಾರ್ಥಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ ನೀಡಿದರು. ಸಭೆಯ ಅಧ್ಯಕ್ಷ ತೆಯನ್ನು ಪಕ್ಷದ ಹಿರಿಯ ಮುಂದಾಳು ಪಿ.ವಿಠಲ ಬಂಗೇರ ವಹಿಸಿದ್ದರು. ಸಿಪಿಐ ಕಾರ್ಯಕಾರಿ ಸಮಿತಿ ಸದಸ್ಯೆ ಸರಸ್ವತಿ .ಕೆ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ್ ಕುಮಾರ್ ಬಂಟ್ವಾಳ್ ಪ್ರಾಸ್ತಾವಿಕವಾಗಿ ಸ್ವಾಗತಿಸಿ ವಂದಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ