ನಾಗಶ್ರೀ ಮಿತ್ರ ವೃಂದ ಹಾಗೂ ನಾಗಶ್ರೀ ಮಾತೃ ಮಂಡಳಿ ಕಮ್ಮಾಜೆ ಆಶ್ರಯದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮದಡಿ ವನಮಹೋತ್ಸವ ಹಾಗೂ ಸಸಿ ವಿತರಣೆ ಕಾರ್ಯಕ್ರಮ ತೆಂಕಬೆಳ್ಳೂರು ಗ್ರಾಮದ ಕಮ್ಮಾಜೆ ವಿವೇಕ ಭವನದಲ್ಲಿ ಭಾನುವಾರ ನಡೆಯಿತು.
ನಾಗಶ್ರೀ ಮಿತ್ರ ವೃಂದದ ಅಧ್ಯಕ್ಷ ರಾಮಚಂದ್ರ ವರಕೋಡಿ ಸಭಾಧ್ಯಕ್ಷತೆ ವಹಿಸಿದ್ದರು ಸಂಘದ ಗೌರವ ಅಧ್ಯಕ್ಷರಾದ ನಿವೃತ್ತ ಮುಖ್ಯೋಪಾಧ್ಯಾಯ ಪ್ರಗತಿಪರ ಕೃಷಿಕ ಅನಂತರಾಮ ಹೇರಳ ವನಮಹೋತ್ಸವ ಜಾಗೃತಿ ಹಾಗೂ ಪರಿಸರ ಸಂರಕ್ಷಣೆ ಪಾಮುಖ್ಯತೆಯ ಬಗ್ಗೆ ಮಾತನಾಡಿದರು, ವೇದಿಕೆಯಲ್ಲಿ ನಾಗಶ್ರೀ ಮಾತೃ ಮಂಡಳಿ ಅಧ್ಯಕ್ಷೆ ತೀರ್ಥ ಜಿ, ಸಂಘಕ್ಕೆ ಸ್ಥಳದಾನ ಮಾಡಿದ ನಿವೃತ್ತ ಮಾಜಿ ಸೈನಿಕ ದಿ. ಪದ್ಮನಾಭ ಪೊಯ್ಯ ಮಗ ಶಶಿಧರ ಕಮ್ಮಾಜೆ, ಪ್ರಮುಖರಾದ ಉಸ್ಮಾನ್ ಗರ್ಗಲ್ ಉಪಸ್ಥಿತರಿದ್ದರು. ತಿರುಮಲೇಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಧ್ಯಾ ಶಿವ ಪ್ರಸಾದ್ ಧನುಪೂಜೆ ಧನ್ಯವಾದ ಅರ್ಪಿಸಿದರು.
| ಪುತ್ತೂರಿನ ಸ್ವಾಗತ ಸಮಿತಿಯ ಸಂಚಾಲಕರಾಗಿ ಉಜ್ವಲ್ ಪ್ರಭು | ಹೊರಕಾಣಿಕೆ ಸಮಿತಿಯ ಸಂಚಾಲಕರಾಗಿ ದಯಾನಂದ ಶೆಟ್ಟಿ ಉಜಿರೆಮಾರು ಆಯ್ಕೆ…
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…