ಶುಕ್ರವಾರ ಬೆಳಗ್ಗಿನಿಂದಲೇ ಬಂಟ್ವಾಳ ಪರಿಸರದಲ್ಲಿ ಭಾರಿ ಮಳೆಯಾಗಿದ್ದು, ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಒಂದು ಮನೆ ಸಂಪೂರ್ಣ ಕುಸಿದಿದ್ದರೆ, ಇನ್ನೊಂದು ಭಾಗಶಃ ಕುಸಿದಿರುವುದಾಗಿ ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಿ.ಮೂಡ ಗ್ರಾಮದ ಭಂಡಾರಿಬೆಟ್ಟು ಎಂಬಲ್ಲಿ ಮೋಹನ್ ಆಚಾರ್ಯ ಎಂಬವರ ಪತ್ನಿ ಜಯಂತಿ ಎಂಬವರ ಮನೆ ಸಂಪೂರ್ಣ ಕುಸಿದಿದೆ. ಭಂಡಾರಿಬೆಟ್ಟು ನಿವಾಸಿ ದಿನೇಶ್ ಕುಲಾಲ್ ಎಂಬವರ ಪತ್ನಿ ನಾಗವೇಣಿ ಎಂಬವರ ಮನೆ ಭಾಗಶಃ ಕುಸಿದಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಶಿವನಂದ ನಾಟೆಕಾರ್ , ಸಿಬಂದಿ ಸದಾಶಿವ ಕೈಕಂಬ, ಸ್ಥಳಿಯ ಪುರಸಭೆ ಸದಸ್ಯ ಜಗದೀಶ್ ಕುಂದರ್ ಬೇಟಿ ನೀಡಿದ್ದಾರೆ.
IFTAAR ORGANISED BY FORMER MINISTER RAMANATHA RAI AT PANEMANGALORE (more…)