ಸಂಚಾರ ನಿಯಂತ್ರಣ ಮತ್ತು ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಬಂಟ್ವಾಳ ಸಂಚಾರಿ ಠಾಣಾ ಪೊಲೀಸರು ಬಿ.ಸಿ.ರೋಡ್ ಸಹಿತ ಬಂಟ್ವಾಳದ ಪ್ರಮುಖ ಜಾಗಗಳಲ್ಲಿ ವಾಹನ ತಪಾಸಣೆ ನಡೆಸಿ ಸುಮಾರು 47 ಸಾವಿರಕ್ಕೂ ಅಧಿಕ ರುಪಾಯಿ ದಂಡ ವಸೂಲು ಮಾಡಿದ್ದಾರೆ. ಒಟ್ಟು 300 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಕಾರ್ಯಾಚರಣೆ ನಡೆಸಲಾಗಿದೆ.
ಈ ಸಂದರ್ಭ ಕರ್ಕಶ ಶಬ್ದ ಮಾಡುವ ಬೈಕುಗಳನ್ನು ಗುರುತು ಮಾಡಿ ದಂಡ ವಸೂಲು ಮಾಡಲಾಗಿದೆ. ವಾಹನ ಸುರಕ್ಷತೆಯ ಕುರಿತು ಚಾಲಕರಿಗೆ ಅರಿವು ಮೂಡಿಸಲಾಗಿದ್ದು, ಪರಿಸರದ ಎರಡು ಶಾಲೆಗಳಲ್ಲಿ ಮಾಹಿತಿ ಶಿಬಿರವನ್ನೂ ಆಯೋಜಿಸಲಾಗಿತ್ತು ಎಂದು ಠಾಣಾ ಎಸ್.ಐ. ಯಲ್ಲಪ್ಪ ತಿಳಿಸಿದ್ದಾರೆ. ಬಿ.ಸಿ.ರೋಡ್, ಪಾಣೆಮಂಗಳೂರು ಮತ್ತು ಕೈಕಂಬ ಕ್ರಾಸ್ ಗಳಲ್ಲಿ ಪೊಲೀಸರು ಬೆಳಗ್ಗಿನಿಂದಲೇ ವಾಹನ ತಪಾಸಣೆ ನಡೆಸುತ್ತಿದುದು ಕಂಡುಬಂದಿತ್ತು.